2024 ರ ಚುನಾವಣೆ ಬಗ್ಗೆ ತಪ್ಪು ಮಾಹಿತಿ: Zuckerberg ಹೇಳಿಕೆಗೆ ಕ್ಷಮೆ ಕೋರಿದ Meta

"ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಭಾರತವು Meta ಗೆ ಪ್ರಮುಖ ದೇಶವಾಗಿ ಉಳಿದಿದೆ ಮತ್ತು ಭಾರತದ ನವೀನ ಭವಿಷ್ಯದ ಕೇಂದ್ರಭಾಗದಲ್ಲಿರುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಸಂಸ್ಥೆ ಹೇಳಿದೆ.
Mark Zuckerberg
ಮಾರ್ಕ್ ಝುಕರ್ಬರ್ಗ್online desk
Updated on

ನವದೆಹಲಿ: 2024 ರ ಚುನಾವಣೆಯಲ್ಲಿ ಭಾರತದ ಅಂದಿನ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂಬ ಮಾರ್ಕ್ ಝುಕರ್ಬರ್ಗ್ ಹೇಳಿಕೆಗೆ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾಗುತ್ತಿದ್ದಂತೆಯೇ Meta ಕ್ಷಮೆ ಕೋರಿದೆ.

ಝುಕರ್ಬರ್ಗ್ ಹೇಳಿಕೆಯನ್ನು ಅಪ್ರಜ್ಞಾಪೂರ್ವಕ ದೋಷ ಎಂದು ಮೆಟಾ ಸಂಸ್ಥೆ ಹೇಳಿದೆ. ಝುಕರ್ಬರ್ಗ್ ಹೇಳಿಕೆಗೆ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನುದ್ದೇಶಿಸಿ ಪ್ರತಿಕ್ರಿಯೆ ನೀಡಿರುವ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವಂತ್ ತುಕ್ರಾಲ್ "ಅಧಿಕಾರದಲ್ಲಿದ್ದ ಹಲವು ಪಕ್ಷಗಳು 2024 ರಲ್ಲಿ ಮತ್ತೆ ಅಧಿಕಾರಕ್ಕೆ ಬರಲಿಲ್ಲ ಎಂಬ ಮಾರ್ಕ್ ಝುಕರ್ಬರ್ಗ್ ಅವರ ಹೇಳಿಕೆ ಹಲವು ರಾಷ್ಟ್ರಗಳಿಗೆ ಹೊಂದಾಣಿಕೆಯಾಗುತ್ತದೆ. ಆದರೆ ಭಾರತಕ್ಕೆ ಅಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

"ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಭಾರತವು Meta ಗೆ ಪ್ರಮುಖ ದೇಶವಾಗಿ ಉಳಿದಿದೆ ಮತ್ತು ಭಾರತದ ನವೀನ ಭವಿಷ್ಯದ ಕೇಂದ್ರಭಾಗದಲ್ಲಿರುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಈ ಹಿಂದೆ ಜೋ ರೋಗನ್ ಪಾಡ್‌ಕ್ಯಾಸ್ಟ್‌ನಲ್ಲಿ ಜುಕರ್‌ಬರ್ಗ್ ಮಾಡಿದ ಹೇಳಿಕೆಗಳನ್ನು ಖಂಡಿಸಿದ್ದರು. "2024 ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿದ್ದ ಪಕ್ಷಗಳು ಕೋವಿಡ್ ನಂತರ ಸೋತಿವೆ ಎಂಬ ಜುಕರ್‌ಬರ್ಗ್ ಅವರ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ" ಎಂದು ವೈಷ್ಣವ್ ಜನವರಿ 13 ರಂದು X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದರು.

Mark Zuckerberg
Facebook ಸ್ಥಾಪಕ ಝುಕರ್ಬರ್ಗ್ ಹೇಳಿಕೆಗೆ Ashwini Vaishnaw fact check; ಕೇಂದ್ರ ಸಚಿವರಿಂದ ಭರ್ಜರಿ ಕೌಂಟರ್!

"ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಭಾರತ 2024 ರ ಚುನಾವಣೆಯನ್ನು 640 ಮಿಲಿಯನ್‌ಗಿಂತಲೂ ಹೆಚ್ಚು ಮತದಾರರೊಂದಿಗೆ ನಡೆಸಿತು. ಭಾರತದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ NDA ಯಲ್ಲಿ ತಮ್ಮ ನಂಬಿಕೆಯನ್ನು ಮತದಾನದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದರು" ಎಂದು ಮಾಹಿತಿ ಮತ್ತು ಪ್ರಸಾರ ಹಾಗೂ ಐಟಿ ಸಚಿವರಾಗಿರುವ ವೈಷ್ಣವ್ ಹೇಳಿದ್ದರು.

ಜುಕರ್‌ಬರ್ಗ್ ಅವರ ಹೇಳಿಕೆಗಳನ್ನು ತಪ್ಪು ಮಾಹಿತಿ ಎಂದು ಸಚಿವರು ತಳ್ಳಿಹಾಕಿದ್ದರು ಮತ್ತು ಮೆಟಾ ಸತ್ಯ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com