RSS ಪಿತೂರಿ ಸಿದ್ಧಾಂತಗಳ ಒಲವು ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ಸಮಗ್ರತೆಗೆ ಅಪಾಯ: ಕಾಂಗ್ರೆಸ್ ಆರೋಪ

ದೆಹಲಿ ವಿಶ್ವವಿದ್ಯಾಲಯದ (DU) ಅನೇಕ ಬೋಧಕ ಸಿಬ್ಬಂದಿ ಸದಸ್ಯರು ಪತ್ರಕರ್ತ ಅಶೋಕ್ ಶ್ರೀವಾಸ್ತವ್ ಅವರ 2024 ರ ಪುಸ್ತಕ "ಮೋದಿ ವರ್ಸಸ್ ಖಾನ್ ಮಾರ್ಕೆಟ್ ಗ್ಯಾಂಗ್" ಕುರಿತು ಕ್ಯಾಂಪಸ್‌ನಲ್ಲಿ ನಡೆದ ಚರ್ಚೆಯನ್ನು ಖಂಡಿಸಿದ್ದಾರೆ ಎಂದು ತೋರಿಸುವ ಮಾಧ್ಯಮ ವರದಿಯನ್ನು ರಮೇಶ್ ಉಲ್ಲೇಖಿಸಿದ್ದಾರೆ.
Jairam Ramesh
ಜೈರಾಂ ರಮೇಶ್
Updated on

ನವದೆಹಲಿ: ಆರ್‌ಎಸ್‌ಎಸ್‌ನ ಪಿತೂರಿ ಸಿದ್ಧಾಂತಗಳ ಒಲವು ಮತ್ತು ಬಾಲಿಶತನದ ಪ್ರವೃತ್ತಿಗಳಿಂದ ದೇಶದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಬೌದ್ಧಿಕ ಸಮಗ್ರತೆಗೆ ಅಪಾಯವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಯುಜಿಸಿಯ ಹೊಸ ನಿಯಮಗಳು ಕ್ಯಾಂಪಸ್‌ಗಳಲ್ಲಿ "ಗಂಭೀರವಲ್ಲದ ರಾಜಕೀಯ"ವನ್ನು ಉತ್ತೇಜಿಸುವ ಉದ್ದೇಶವನ್ನು ಮಾತ್ರ ಹೊಂದಿವೆ ಎಂದು ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ (DU) ಅನೇಕ ಬೋಧಕ ಸಿಬ್ಬಂದಿ ಸದಸ್ಯರು ಪತ್ರಕರ್ತ ಅಶೋಕ್ ಶ್ರೀವಾಸ್ತವ್ ಅವರ 2024 ರ ಪುಸ್ತಕ "ಮೋದಿ ವರ್ಸಸ್ ಖಾನ್ ಮಾರ್ಕೆಟ್ ಗ್ಯಾಂಗ್" ಕುರಿತು ಕ್ಯಾಂಪಸ್‌ನಲ್ಲಿ ನಡೆದ ಚರ್ಚೆಯನ್ನು ಖಂಡಿಸಿದ್ದಾರೆ ಎಂದು ತೋರಿಸುವ ಮಾಧ್ಯಮ ವರದಿಯನ್ನು ರಮೇಶ್ ಉಲ್ಲೇಖಿಸಿದ್ದಾರೆ.

ನಮ್ಮ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿನ ಬೌದ್ಧಿಕ ಸಮಗ್ರತೆಯು ಆರ್‌ಎಸ್‌ಎಸ್‌ನ ಪಿತೂರಿ ಸಿದ್ಧಾಂತಗಳು ಮತ್ತು ಬಾಲಿಶ ಪ್ರವೃತ್ತಿಯ ವೈರಸ್‌ನಿಂದ ಬೆದರಿಕೆಗೆ ಒಳಗಾಗಿದೆ ಎಂದು ಹೇಳಿದರು.

Jairam Ramesh
ಸುಗಮ ಅಧಿಕಾರ ಹಸ್ತಾಂತರಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಕಸರತ್ತು! ಸಿದ್ದರಾಮಯ್ಯ ರಾಜಕೀಯ ಜೀವನದ ಸಂಧ್ಯಾಕಾಲ ಸನ್ನಿಹಿತ?

ಪಕ್ಷಪಾತದ ಮತ್ತು ಗಂಭೀರವಲ್ಲದ ಪುಸ್ತಕದ ಬಗ್ಗೆ ಚರ್ಚಾ ಕಾರ್ಯಕ್ರಮವನ್ನು ದೆಹಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಸಲಾಯಿತು ಅದರಲ್ಲಿ ಸ್ವತಃ ಉಪಕುಲಪತಿಗಳು ಭಾಗವಹಿಸಿದ್ದರು ಎಂದು ರಮೇಶ್ ಹೇಳಿದರು.

ಇದು ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಬದಲು ಈಗ ಆರ್‌ಎಸ್‌ಎಸ್‌ನ ವಿಸ್ತೃತ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜೈರಾಂ ರಮೇಶ್ ಆರೋಪಿಸಿದರು.

ಉಪ ಕುಲಪತಿಗಳ ನೇಮಕಾತಿ ಮತ್ತು ಶೈಕ್ಷಣೇತರ ವ್ಯಕ್ತಿಗಳ ನೇಮಕಾತಿಯ ಮೇಲೆ ಹೆಚ್ಚಿನ ಕೇಂದ್ರ ಮೇಲ್ವಿಚಾರಣೆಗೆ ಅವಕಾಶ ನೀಡುವ ಹೊಸ ಯುಜಿಸಿ ನಿಯಮಗಳು, ಕ್ಯಾಂಪಸ್‌ಗಳಲ್ಲಿ ಅಂತಹ ಗಂಭೀರವಲ್ಲದ ರಾಜಕೀಯವನ್ನು ಉತ್ತೇಜಿಸುವ ಏಕೈಕ ಉದ್ದೇಶವನ್ನು ಹೊಂದಿವೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿಗಾಗಿ ಯುಜಿಸಿ ಕರಡು ನಿಯಮಗಳನ್ನು ಕಾಂಗ್ರೆಸ್ ಕಠಿಣ ಮತ್ತು ಸಂವಿಧಾನ ವಿರೋಧಿ ಎಂದು ಕರೆದಿದೆ ಮತ್ತು ಅವುಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಯುಜಿಸಿ (ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ಮತ್ತು ಬಡ್ತಿಗೆ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣೆಗೆ ಕ್ರಮಗಳು) ನಿಯಮಗಳು, 2025 ರ ಕರಡನ್ನು ಪ್ರಕಟಿಸಿದೆ ಎಂದು ರಮೇಶ್ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com