ಉತ್ತರಾಖಂಡ: ಕೊರೆಯುವ ಚಳಿ, ಒಲೆಗೆ ಬೆಂಕಿ ಹಾಕಿ ಮಲಗಿದ ದಂಪತಿ ಬೆಳಗ್ಗೆ ಏಳಲೇ ಇಲ್ಲ!

ರಾತ್ರಿ 11 ಗಂಟೆ ಸುಮಾರಿಗೆ ಚಳಿಯಿಂದಾಗಿ ತೀವ್ರ ಚಳಿಯಿಂದಾಗಿ ಕೊಠಡಿ ಒಳಗಡೆ ಇದ್ದ ಒಲೆಗೆ ಬೆಂಕಿ ಹಾಕಿ ಮಲಗಿದ್ದು, ಬಾಗಿಲು ಮುಚ್ಚಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರ ಮಗ ಅವರನ್ನು ಎಬ್ಬಿಸಲು ಹೋದಾಗ ಯಾರೂ ಬಾಗಿಲು ತೆರೆದಿಲ್ಲ.
Casual Images
ಸಾಂದರ್ಭಿಕ ಚಿತ್ರ
Updated on

ಉತ್ತರಾಖಂಡ: ಕೊರೆಯುವ ಚಳಿಗೆ ಕೊಠಡಿಯ ಒಲೆಗೆ ಬೆಂಕಿ ಹಾಕಿ ಮಲಗಿದ ದಂಪತಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್‌ನ ನ್ಯೂ ತೆಹ್ರಿಯ ಹಳ್ಳಿಯೊಂದರಲ್ಲಿ ನಡೆದಿದೆ.

ಭಿಲಂಗಾನ ಪ್ರದೇಶದ ದ್ವಾರಿ-ಥಾಪ್ಲಾ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ದಂಪತಿಗಳಾದ ಮದನ್ ಮೋಹನ್ ಸೆಮ್ವಾಲ್ (52) ಮತ್ತು ಅವರ ಪತ್ನಿ ಯಶೋದಾ ದೇವಿ (48) ಮೃತಪಟ್ಟಿದ್ದಾರೆ. ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಅವರು ಗ್ರಾಮಕ್ಕೆ ಬಂದಿದ್ದರು ಎಂದು ದ್ವಾರಿ-ಥಾಪ್ಲಾ ಗ್ರಾಮದ ಆಡಳಿತಾಧಿಕಾರಿ ರಿಂಕಿ ದೇವಿ ತಿಳಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಚಳಿಯಿಂದಾಗಿ ತೀವ್ರ ಚಳಿಯಿಂದಾಗಿ ಕೊಠಡಿ ಒಳಗಡೆ ಇದ್ದ ಒಲೆಗೆ ಬೆಂಕಿ ಹಾಕಿ ಮಲಗಿದ್ದು, ಬಾಗಿಲು ಮುಚ್ಚಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರ ಮಗ ಅವರನ್ನು ಎಬ್ಬಿಸಲು ಹೋದಾಗ ಯಾರೂ ಬಾಗಿಲು ತೆರೆದಿಲ್ಲ. ಸ್ವಲ್ಪ ಸಮಯದವರೆಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸ್ಥಳೀಯರು ಬಾಗಿಲು ಮುರಿದು ತೆರೆದಾಗ ದಂಪತಿಗಳು ಹಾಸಿಗೆಯ ಮೇಲೆ ಶವವಾಗಿ ಪತ್ತೆದರು ಅವರು ಹೇಳಿದರು.

ಒಲೆಯ ಹೊಗೆಯಿಂದ ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡ್ ಅನಿಲದಿಂದಾಗಿ ಅವರು ಸಾವನ್ನಪ್ಪಿದ್ದಾರೆ.ಆದರೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿಲ್ಲ. ದಂಪತಿಯ ಮಗ ಮತ್ತು ಮಗಳೊಂದಿಗೆ ಮಾತುಕತೆ ನಡೆಸಿದ ನಂತರ, ಅವರು ಘಾಟ್‌ನಲ್ಲಿ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ.

Casual Images
ಕೊರೆಯುವ ಚಳಿ, ಹಿಮರಾಶಿಯಲ್ಲಿ ಎಲ್ ಒಸಿಯಲ್ಲಿ ದೇಶ ಕಾಯುವ ಸೈನಿಕರು: ಮೈ ಝುಮ್ಮೆನಿಸುವ ವಿಡಿಯೋ

ಸೆಮ್ವಾಲ್ ಅವರು ಸರಸ್ವತಿಸೈನ್‌ನ ಸರ್ಕಾರಿ ಇಂಟರ್ ಕಾಲೇಜಿನಲ್ಲಿ ಗುಮಾಸ್ತರಾಗಿದ್ದರು ಎಂದು ಗ್ರಾಮದ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com