ಅಮೆರಿಕದಲ್ಲಿ ಹೈದರಾಬಾದ್‌ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ; ಕುಟುಂಬಕ್ಕೆ ಆಘಾತ

ಹೈದರಾಬಾದ್‌ನ ಗ್ರೀನ್ ಹಿಲ್ಸ್ ಕಾಲೋನಿ ನಿವಾಸಿ, ಕೊಯ್ಯಡ ರವಿತೇಜ ಅಮೆರಿಕದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ.
ರವಿತೇಜ
ರವಿತೇಜ
Updated on

ಹೈದರಾಬಾದ್: ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಸೋಮವಾರ ದುಷ್ಕರ್ಮಿಗಳು ನಡೆಸಿದ ಶಂಕಿತ ಗುಂಡಿನ ದಾಳಿಯಲ್ಲಿ ಹೈದರಾಬಾದ್‌ನ ಚೈತನ್ಯಪುರಿಯ 26 ವರ್ಷದ ಯುವಕ ಸಾವನ್ನಪ್ಪಿದ್ದಾರೆ.

ಹೈದರಾಬಾದ್‌ನ ಗ್ರೀನ್ ಹಿಲ್ಸ್ ಕಾಲೋನಿ ನಿವಾಸಿ, ಕೊಯ್ಯಡ ರವಿತೇಜ ಅಮೆರಿಕದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ. ಅವರ ಸಂಬಂಧಿಕರ ಪ್ರಕಾರ, ರವಿಜೇತ ಮಾರ್ಚ್ 2022 ರಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ಹೋಗಿದ್ದರು. ಶಿಕ್ಷಣ ಮುಗಿಸಿದ ನಂತರ, ಅವರು ಅಲ್ಲಿಯೇ ಉದ್ಯೋಗ ಹುಡುಕುತ್ತಿದ್ದರು ಮತ್ತು ಈ ಮಧ್ಯೆ ಅರೆಕಾಲಿಕ ಕೆಲಸಗಳಲ್ಲಿ ತೊಡಗಿದ್ದರು.

TNIE ಜೊತೆ ಮಾತನಾಡಿದ ರವಿತೇಜ ಅವರ ಸಂಬಂಧಿಯೊಬ್ಬರು, ಕೊರಿಯರ್ ತಲುಪಿಸುವಾಗ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆಂದು ತಿಳಿದು ಬಂದಿದೆ. ರವಿತೇಜ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಂದು ಬೆಳಗ್ಗೆ ಈ ಸುದ್ದಿ ತಿಳಿದ ನಂತರ ಆತನ ಕುಟುಂಬ ತೀವ್ರ ಆಘಾತಕ್ಕೊಳಗಾಯಿತು. ಅವರ ಪೋಷಕರಿಗೆ ಧೈರ್ಯ ತುಂಬಲು ಸಂಬಂಧಿಕರು ಮತ್ತು ಹಿತೈಷಿಗಳು ಚೈತನ್ಯಪುರಿಯಲ್ಲಿರುವ ಅವರ ಮನೆಗೆ ಬರುತ್ತಿದ್ದಾರೆ.

ದಾಳಿಯ ಹಿಂದಿನ ಉದ್ದೇಶದ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಗೆ ಪ್ರತಿಕ್ರಿಯಿಸಿದ ಚಿಕಾಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿ, "ಭಾರತೀಯ ವಿದ್ಯಾರ್ಥಿ ರವಿತೇಜ ಅವರ ಹತ್ಯೆಯಿಂದ ನಮಗೆ ಆಘಾತವಾಗಿದೆ ಮತ್ತು ತೀವ್ರ ದುಃಖವಾಗಿದೆ. ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಮೃತನ ಕುಟುಂಬ ಮತ್ತು ಸ್ನೇಹಿತರಿಗೆ ಕಾನ್ಸುಲೇಟ್ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com