ಅಯೋಧ್ಯೆ ರಾಮಮಂದಿರ: ರಾಮಲಲ್ಲಾ 'ಪ್ರಾಣ ಪ್ರತಿಷ್ಠೆ'ಗೆ ಒಂದು ವರ್ಷ

ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಐತಿಹಾಸಿಕ 'ಪ್ರಾಣ ಪ್ರತಿಷ್ಠೆ' ಸಮಾರಂಭದ ಒಂದು ವರ್ಷದ ನಂತರದ ಆಚರಣೆಗಳು ಹಿಂದೂ ಪಂಚಾಂಗವನ್ನು ಅನುಸರಿಸಿ ಜನವರಿ 11ಕ್ಕೆ ನಡೆಯಿತು.
Ramalalla at Ayodhya
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ವಿಗ್ರಹ
Updated on

ಅಯೋಧ್ಯೆ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶವೇ ಭಕ್ತಿಯ ಅಲೆಯಲ್ಲಿ ಮುಳುಗೇಳುತ್ತಿರುವುದರ ಮಧ್ಯೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ 'ಪ್ರಾಣ ಪ್ರತಿಷ್ಠೆ' ಸಮಾರಂಭ ಕಳೆದ ವರ್ಷ ಜನವರಿ 22, 2024 ರಲ್ಲಿ ನಡೆಸಲಾಯಿತು. ಇಡೀ ಅಯೋಧ್ಯೆ ನಗರದಲ್ಲಿ ಕಳೆದ ವರ್ಷ ಈ ದಿನ ಭಕ್ತಸಾಗರ ಸೇರಿತ್ತು. ಅದಾಗಿ ಕಳೆದೊಂದು ವರ್ಷದಲ್ಲಿ ಅಯೋಧ್ಯೆಯಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಇತ್ತೀಚೆಗೆ 'ಪ್ರತಿಷ್ಠ ದ್ವಾದಶಿ ಮಹೋತ್ಸವ'ವನ್ನು ಆಚರಿಸಿತ್ತು, ಇದು ರಾಮಲಲ್ಲಾನ 'ಪ್ರಾಣ ಪ್ರತಿಷ್ಠೆ'ಯ ಒಂದು ವರ್ಷ ಆಚರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯವಾದ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾರಂಭದ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಿದ್ದರು, ಇದರಲ್ಲಿ ವಿವಿಧ ಕ್ಷೇತ್ರಗಳ ಅನೇಕ ಜನಪ್ರಿಯ ಭಾಗವಹಿಸಿದ್ದರು.

ಪ್ರಾಣ ಪ್ರತಿಷ್ಠೆಗೆ 1 ವರ್ಷ

ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಐತಿಹಾಸಿಕ 'ಪ್ರಾಣ ಪ್ರತಿಷ್ಠೆ' ಸಮಾರಂಭದ ಒಂದು ವರ್ಷದ ನಂತರದ ಆಚರಣೆಗಳು ಹಿಂದೂ ಪಂಚಾಂಗವನ್ನು ಅನುಸರಿಸಿ ಜನವರಿ 11ಕ್ಕೆ ನಡೆಯಿತು. ಕಳೆದ ವರ್ಷ, ಈ ಪವಿತ್ರ ಕಾರ್ಯಕ್ರಮವನ್ನು ಹಿಂದೂ ಕ್ಯಾಲೆಂಡರ್‌ನ ಪೌಷ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಕೂರ್ಮ ದ್ವಾದಶಿಯಂದು ಆಚರಿಸಲಾಯಿತು. ಈ ವರ್ಷ, ಶುಕ್ಲ ಪಕ್ಷವು ಜನವರಿ 11 ರಂದು ಬಂದಿತು.

ಈ ಸಂದರ್ಭದ ಸ್ಮರಣಾರ್ಥವಾಗಿ, ದೇವಾಲಯದ ಆವರಣದಲ್ಲಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿಷ್ಠಾ ದ್ವಾದಶಿಯ ಸಂದರ್ಭದಲ್ಲಿ, ಪ್ರಭುವಿನ ಮಹಾ ಅಭಿಷೇಕವನ್ನು ನೆರವೇರಿಸಲಾಯಿತು, ನಂತರ ಮಂಗಳ ದರ್ಶನ ಮಾಡಲಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಶ್ರೀರಾಮನ ಮಹಾ ಅಭಿಷೇಕದ ಫೋಟೋಗಳನ್ನು ಹಂಚಿಕೊಂಡ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಅಯೋಧ್ಯೆ ರಾಮ ಮಂದಿರದ ಬಗ್ಗೆ ಆಸಕ್ತಿದಾಯಕ ಸಂಗತಿಗಳು:

  • ಇದು 3 ಅಂತಸ್ತಿನ ಮಂದಿರವಾಗಿದ್ದು, ಇದನ್ನು ಅಂದಾಜು 1,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ, 71 ಎಕರೆ ವಿಸ್ತೀರ್ಣ ಹೊಂದಿದೆ. ಮುಖ್ಯ ದೇವಾಲಯದ ಪ್ರದೇಶವನ್ನು 2.67 ಎಕರೆಗಳಲ್ಲಿ ನಿರ್ಮಿಸಲಾಗಿದೆ.

  • ಭಕ್ತರು ದೇವಾಲಯವನ್ನು ಪ್ರವೇಶಿಸಲು 32 ಮೆಟ್ಟಿಲುಗಳನ್ನು ಹತ್ತಬೇಕು. ದೇವಾಲಯವು 16 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ.

  • ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ 5 ವರ್ಷದ ರಾಮ ಲಲ್ಲಾ ವಿಗ್ರಹವನ್ನು ಕೆತ್ತಿದ್ದಾರೆ. ಈ ವಿಗ್ರಹವು 51 ಇಂಚು ಎತ್ತರವಿದೆ.

  • ಶ್ರೀಲಂಕಾದ ನಿಯೋಗವೊಂದು ಅಯೋಧ್ಯೆಗೆ ಭೇಟಿ ನೀಡಿ ಸೀತೆಯನ್ನು ಸೆರೆಯಲ್ಲಿಟ್ಟಿದ್ದ ರಾವಣನ ರಾಜ್ಯದ ಉದ್ಯಾನವಾದ ಅಶೋಕ ವಾಟಿಕದಿಂದ ಒಂದು ಬಂಡೆಯನ್ನು ಉಡುಗೊರೆಯಾಗಿ ನೀಡಿತ್ತು.

  • ಈ ದೇವಾಲಯವನ್ನು ಕನಿಷ್ಠ 1,000 ವರ್ಷಗಳವರೆಗೆ ಬಾಳಿಕೆ ಬರುವ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರ ನಿರ್ಮಾಣದಲ್ಲಿ ಯಾವುದೇ ಕಬ್ಬಿಣವನ್ನು ಬಳಸಲಾಗಿಲ್ಲ.

  • ದೇವಾಲಯದ ಸುತ್ತಲೂ ಪಾರ್ಕೋಟ ಎಂಬ ಆಯತಾಕಾರದ ಪರಿಕ್ರಮಾವಿದೆ, ಅದರ ಪರಿಧಿಯಲ್ಲಿ ನಾಲ್ಕು ದೇವಾಲಯಗಳಿವೆ. ಭಗವತಿ, ಶಿವ, ಸೂರ್ಯ ಮತ್ತು ಗಣೇಶನ ದೇವಾಲಯಗಳಿವೆ. ದಕ್ಷಿಣ ತೋಳಿನಲ್ಲಿ ಹನುಮಂತನ ದೇವಾಲಯವಿದ್ದು, ಉತ್ತರ ತೋಳಿನಲ್ಲಿ ಅನ್ನಪೂರ್ಣ ಮಾತೆಗೆ ಸಮರ್ಪಿತವಾದ ದೇವಾಲಯವಿದೆ.

  • ಕಂಬಗಳ ಮೇಲೆ ಕೆತ್ತನೆ ಕೆಲಸ ಮಾಡಲು ಒಡಿಶಾದ ಕಾರ್ಮಿಕರನ್ನು ನಿಯೋಜಿಸಲಾಗಿತ್ತು, ಅಮೃತಶಿಲೆಯ ನೆಲಹಾಸು ಮತ್ತು ಗೋಡೆಗಳನ್ನು ಮಾಡಲು ರಾಜಸ್ಥಾನದ ಕಾರ್ಮಿಕರನ್ನು ಕರೆಯಲಾಗಿತ್ತು. ಕೆಲಸದಲ್ಲಿ ಏಕರೂಪತೆಯನ್ನು ತರಲು ದೇವಾಲಯದ ಪ್ರತಿಯೊಂದು ಕಂಬವನ್ನು ಒಬ್ಬ ಕುಶಲಕರ್ಮಿ ಮಾತ್ರ ಕೆತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com