
ನವದೆಹಲಿ: ಪೂಜಾ ಖೇಡ್ಕರ್ ಪ್ರಕರಣದ ನಂತರ ನಾಗರಿಕ ಸೇವಾ ಸೇಮಕಾತಿಗಾಗಿ ಪ್ರಿಲಿಮರಿ ಪರೀಕ್ಷೆ ಹಂತದಲ್ಲೇ ಆಕಾಂಕ್ಷಿಗಳು ಆನ್ ಲೈನ್ ಮೂಲಕ ಶೈಕ್ಷಣಿಕ, ಜಾತಿ ಮತ್ತು ದೈಹಿಕ ನ್ಯೂನತೆಯ ಕುರಿತು ಪ್ರಮಾಣ ಪತ್ರ ಸಲ್ಲಿಸುವುದನ್ನು ಕೇಂದ್ರ ಸರ್ಕಾರ ಬುಧವಾರ ಕಡ್ಡಾಯಗೊಳಿಸಿದೆ.
ಈ ಹಿಂದೆ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಪಡೆದ ನಂತರ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗಿತ್ತು. ಆದರೆ, ಸಿಬ್ಬಂದಿ ಸಚಿವಾಲಯ 2025ರ ನಾಗರಿಕ ಸೇವಾ ಪರೀಕ್ಷೆಯ ಪರಿಷ್ಕೃತ ನಿಯಮಗಳನ್ನು ಬುಧವಾರ ಪ್ರಕಟಿಸಿದೆ.
ಕೇಂದ್ರ ನಾಗರಿಕ ಸೇವಾ ಆಯೋಗ ಪ್ರಿಲಿಮರಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಇತ್ತೀಚಿಗೆ ಪೂಜಾ ಖೇಡ್ಕರ್ ಅವರು ನಕಲಿ ದಾಖಲೆ ನೀಡಿ IAS ಹುದ್ದೆ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದರ ಬೆನ್ನಲ್ಲೇ ಕೇಂದ್ರ ಲೋಕ ಸೇವಾ ಆಯೋಗ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ನೋಂದಣಿಯೊಂದಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಯನ್ನು ಸಲ್ಲಿಸದಿದ್ದಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಬುಧವಾರ ಪ್ರಕಟಿಸಿದ ಆದೇಶದಲ್ಲಿ ತಿಳಿಸಿದೆ.
Advertisement