ಮಹಾಕುಂಭ ಮೇಳ: ಇಲ್ಲಿಯವರೆಗೆ 147.6 ಮಿಲಿಯನ್ ಜನರಿಂದ ಪವಿತ್ರ ಸ್ನಾನ

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
Maha Kumbh Mela
ಮಹಾಕುಂಭ ಮೇಳ
Updated on

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾ ಕುಂಭ ಮೇಳ ಗಮನಾರ್ಹ ರೀತಿಯಲ್ಲಿ ಭಕ್ತರನ್ನು ಆಕರ್ಷಿಸುತ್ತಿದ್ದು, ಸಂಗಮದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಪವಿತ್ರ ಸ್ನಾನ ಮಾಡುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ 1 ಮಿಲಿಯನ್ ಸಾಧು ಸಂತರು ಸೇರಿದಂತೆ 4.55 ಮಿಲಿಯನ್ ಜನರು ಗಂಗಾ ಮತ್ತು ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮಾಹಿತಿ ಇಲಾಖೆ ತಿಳಿಸಿದೆ.

ಈ ಮಧ್ಯೆ ಉತ್ತರ ಪ್ರದೇಶ ಮಾಹಿತಿ ಇಲಾಖೆ ಪ್ರಕಾರ, ಜನವರಿ 13 ರಂದು ಈವೆಂಟ್ ಪ್ರಾರಂಭವಾದಾಗಿನಿಂದ 147.6 ಮಿಲಿಯನ್ ಜನರು ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಇಲ್ಲಿಯವರೆಗೆ ರಾಜನಾಥ್ ಸಿಂಗ್ ಮತ್ತು ಕಿರಣ್ ರಿಜಿಜು ಸೇರಿದಂತೆ ಹಲವಾರು ಕೇಂದ್ರ ಸಚಿವರು ಮಹಾಕುಂಭಕ್ಕೆ ಭೇಟಿ ನೀಡಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

Maha Kumbh Mela
ಮಹಾ ಕುಂಭ ಮೇಳ ಆರಂಭ: ಲಕ್ಷಾಂತರ ನಾಗ ಸಾಧುಗಳಿಂದ ಪವಿತ್ರ ಸ್ನಾನ; ಭಾರತೀಯ ಸಂಸ್ಕೃತಿ ಪಾಲಿಸುವವರಿಗೆ ವಿಶೇಷ ದಿನ ಎಂದ ಪ್ರಧಾನಿ ಮೋದಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಶಾ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮ್ ದೇವ್ ಮತ್ತಿತರ ಸಾಧು ಸಂತರು ಸ್ನಾನ ಮಾಡುವುದರೊಂದಿಗೆ ಮಹಾಕುಂಭ ಮೇಳ ಪ್ರಪಂಚದಾದ್ಯಂತ ಅಸಾಧಾರಣ ಭಕ್ತರ ಆಗಮನಕ್ಕೆ ಸಾಕ್ಷಿಯಾಗಿದೆ.

ಇಟಲಿಯ ಯಾತ್ರಿಕ ಆಂಟೋನಿಯೊ ಕುಂಭಮೇಳದಲ್ಲಿ ಪಾಲ್ಗೊಳ್ಳುವ ತಮ್ಮ ದಶಕದ ಕನಸು ಅಂತಿಮವಾಗಿ ಈಡೇರಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com