
ಪ್ರಯಾಗ್ ರಾಜ್: ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಅಮೃತಸ್ನಾನಕ್ಕಾಗಿ ಭಕ್ತಾದಿಗಳು ಮುಗಿಬಿದ್ದು ಮಧ್ಯರಾತ್ರಿ ವೇಳೆ ಕಾಲ್ತುಳಿತ ಉಂತಾಗಿತ್ತು.
ಕಾಲ್ತುಳಿತದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ಅಮೃತ ಸ್ನಾನಕ್ಕೆ ತಡೆಯೊಡ್ಡಲಾಗಿತ್ತು. ಆದರೆ ಈಗ ಪವಿತ್ರ ಸ್ನಾನ ಪ್ರಕ್ರಿಯೆ ಮುಂದುವರೆದಿದ್ದು, ಸಂಜೆ 5 ಗಂಟೆ ವರೆಗೂ 5.71 ಕೋಟಿ ಭಕ್ತಾದಿಗಳು ಅಮೃತ ಸ್ನಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಾಲ್ತುಳಿತ ಉಂಟಾದ ಹಿನ್ನೆಲೆಯಲ್ಲಿ ಹೆಚ್ಚು ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಸಾಧುಗಳು ಸಣ್ಣ ಪ್ರಮಾಣದ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಾರೆ. ಕುಂಭಮೇಳ ಆರಂಭವಾದಾಗಿನಿಂದಲೂ ಇಂದಿನವರೆಗೆ ಪವಿತ್ರ ಸ್ನಾನ ಮಾಡಿದ ಒಟ್ಟು ಭಕ್ತರ ಸಂಖ್ಯೆ 20 ಕೋಟಿ ದಾಟಿದೆ. ಮಹಾಕುಂಭದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ನಡೆಯುವ ಎರಡನೇ 'ಅಮೃತ ಸ್ನಾನ'ದಲ್ಲಿ ಒಬ್ಬ ಸಾಧು , ಮಾತನಾಡಿದ್ದು "ಈ ಪವಿತ್ರ ಸಂದರ್ಭದಲ್ಲಿ ಎಲ್ಲರೂ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಬೇಕು. ಕೆಲವು ದುರದೃಷ್ಟಕರ ಘಟನೆಗಳು ನಡೆದಿವೆ ಆದರೆ ಎಲ್ಲರೂ ಆರೋಗ್ಯವಾಗಿರಬೇಕು" ಎಂದು ಹೇಳಿದ್ದಾರೆ.
ಮೌನಿ ಅಮವಾಸ್ಯೆಯ 'ಅಮೃತ ಸ್ನಾನ'ದ ನಂತರ, ಪಂಚಾಯತ್ ನಿರಂಜನಿ ಅಖಾರದ ದಿಗಂಬರ ನಾಗ ಬಾಬಾ ಚಿದಾನಂದ್ ಪುರಿ, "ಇಂದು ಅನಿರೀಕ್ಷಿತ ಘಟನೆಯಿಂದಾಗಿ, ನಮ್ಮ (ಅಖರ) ಶೋಭಾ ಯಾತ್ರೆಯನ್ನು ಹೊರಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ನಾವು ಈಗ ಕಡಿಮೆ ಸಂಖ್ಯೆಯಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಿದ್ದೇವೆ" ಎಂದು ಹೇಳಿದ್ದಾರೆ.
Advertisement