ಕಾಲ್ತುಳಿತದ ಬೆನ್ನಲ್ಲೇ Mahakumbh Melaದಲ್ಲಿ ಮತ್ತೊಂದು ಅವಘಡ!

ಗುರುವಾರ (ಜ.30 ರಂದು) ಸೆಕ್ಟರ್ 22 ರ ನಾಗೇಶ್ವರ ಘಾಟ್‌ನಲ್ಲಿ ನಿರ್ಮಿಸಲಾದ ಟೆಂಟ್ ಸಿಟಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ದಳ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೊದಲೇ ಹಲವಾರು ಟೆಂಟ್‌ಗಳು ಬೂದಿಯಾಗಿವೆ.
Kumbhmela
ಕುಂಭಮೇಳonline desk
Updated on

ಪ್ರಯಾಗ್ ರಾಜ್: ಮಹಾಕುಂಭಮೇಳದಲ್ಲಿ ಕಾಲ್ತುಳಿತ ಉಂಟಾದ ಬೆನ್ನಲ್ಲೇ ಮತ್ತೊಂದು ಭಾರಿ ಅನಾಹುತ ಸಂಭವಿಸಿದೆ.

ಕುಂಭಮೇಳಕ್ಕಾಗಿ ನಿರ್ಮಿಸಲಾಗಿರುವ ಪ್ರಯಾಗ್ ರಾಜ್ ನ ಟೆಂಟ್ ಸಿಟಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಲವು ಟೆಂಟ್ ಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಈ ವರೆಗೂ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ.

ಗುರುವಾರ ಸೆಕ್ಟರ್ 22 ರ ನಾಗೇಶ್ವರ ಘಾಟ್‌ನಲ್ಲಿ ನಿರ್ಮಿಸಲಾದ ಟೆಂಟ್ ಸಿಟಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ದಳ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೊದಲೇ ಹಲವಾರು ಟೆಂಟ್‌ಗಳು ಬೂದಿಯಾಗಿವೆ.

ಪ್ರಪಂಚದಾದ್ಯಂತದ ಜನರಿಗೆ ಅಪಾರ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಮಹಾಕುಂಭಮೇಳ 144 ವರ್ಷಗಳ ಬಳಿಕ ನಡೆಯುತ್ತಿದೆ.

Kumbhmela
ಕುಂಭ ಮೇಳದಲ್ಲಿ ಕಾಲ್ತುಳಿತ: ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ; ನ್ಯಾಯಾಂಗ ತನಿಖೆಗೆ ಆದೇಶ

ಅಧಿಕಾರಿಗಳು ಕಾರ್ಯಕ್ರಮಕ್ಕಾಗಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಿದ್ದಾರೆ. ಆದರೆ ಭಾರಿ ಜನಸಂದಣಿ ಕಳವಳವನ್ನುಂಟುಮಾಡಿದೆ. ಜ.29 ಒಂದೇ ದಿನ ದಾಖಲೆಯ ಪ್ರಮಾಣದಲ್ಲಿ ಜನರು ಮಹಾಕುಂಭದಲ್ಲಿ ಭಾಗವಹಿಸಿದ್ದು, ಅದನ್ನು ನಿರ್ವಹಿಸುವುದು ಸವಾಲಿನ ಸಂಗತಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com