ಆ್ಯಪ್ ಆಧಾರಿತ ಕ್ಯಾಬ್‌ಗಳು ಪೀಕ್ ಅವರ್ನಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲು ಕೇಂದ್ರ ಅಸ್ತು
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಉಬರ್, ಓಲಾ ಮತ್ತು ರ್ಯಾಪಿಡೊದಂತಹ ಆ್ಯಪ್ ಆಧಾರಿತ ಕ್ಯಾಬ್‌ಗಳಿಗೆ ಪೀಕ್ ಅವರ್ನಲ್ಲಿ ಮೂಲ ದರದ ಎರಡು ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದೆ. ಈ ಹಿಂದೆ ಒಂದೂವರೆ ಪಟ್ಟು ಮಾತ್ರ ಶುಲ್ಕ ವಿಧಿಸಲು ಅವಕಾಶ ಇತ್ತು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತನ್ನ 'ಮೋಟಾರು ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025'ರಲ್ಲಿ ಪೀಕ್ ಅವರ್ ಅಲ್ಲದ ಸಮಯದಲ್ಲಿ ಮೂಲ ದರದ ಕನಿಷ್ಠ ಶೇಕಡಾ 50 ಇರಬೇಕು ಎಂದು ಹೇಳಿದೆ.
ಮೂಲ ದರಕ್ಕಿಂತ ಕನಿಷ್ಠ ಶೇಕಡಾ 50 ರಷ್ಟು ಕಡಿಮೆ ಇರಬೇಕು ಮತ್ತು ಪೀಕ್ ಅವರ್ನಲ್ಲಿ ನಿರ್ದಿಷ್ಟಪಡಿಸಿದ ಮೂಲ ದರದ ಎರಡು ಪಟ್ಟು ಶುಲ್ಕ ವಿಧಿಸಲು ಅಗ್ರಿಗೇಟರ್‌ಗೆ ಅನುಮತಿ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದಲ್ಲದೆ, ಪ್ರಯಾಣಿಕರನ್ನು ಪಿಕ್ ಅಪ್ ಮಾಡಲು ತೆರಳಿದ ದೂರ ಮತ್ತು "ಡೆಡ್ ಮೈಲೇಜ್" ಅನ್ನು ಸರಿದೂಗಿಸಲು ವಿಧಿಸಬಹುದಾದ ಮೂಲ ದರವು ಕನಿಷ್ಠ ಮೂರು ಕಿಲೋಮೀಟರ್‌ಗಳಾಗಿರಬೇಕು.
ಮಾರ್ಗಸೂಚಿಗಳ ಪ್ರಕಾರ, ವಿವಿಧ ಮಾದರಿಯ ಮೋಟಾರು ವಾಹನಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ದರವೇ ಅಗ್ರಿಗೇಟರ್‌ಗಳು ಗ್ರಾಹಕರಿಗೆ ವಿಧಿಸಬೇಕಾದ ಮೂಲ ದರವಾಗಿರುತ್ತದೆ ಎಂದು ತಿಳಿಸಲಾಗಿದೆ.
ರಾಜ್ಯಗಳು ಮೂರು ತಿಂಗಳೊಳಗೆ ಈ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ.
ರದ್ದತಿ ಸಂದರ್ಭದಲ್ಲಿ, ಅಗ್ರಿಗೇಟರ್ ಮಾನ್ಯವೆಂದು ಗುರುತಿಸಲಾದ ಕಾರಣವಿಲ್ಲದೆ ಬುಕ್ಕಿಂಗ್ ರದ್ದು ಮಾಡಿದರೆ, ಚಾಲಕನಿಗೆ 100 ರೂ. ಮೀರದ ಪ್ರಯಾಣ ದರದ ಶೇಕಡಾ 10 ರಷ್ಟು ದಂಡ ವಿಧಿಸಲಾಗುತ್ತದೆ. ಅಲ್ಲದೆ ಸೂಕ್ತ ಕಾರಣವಿಲ್ಲದೆ ಬುಕ್ಕಿಂಗ್ ರದ್ದು ಮಾಡುವ ಪ್ರಯಾಣಿಕರಿಗೆ ಇದೇ ರೀತಿಯ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ