ಪ್ರಧಾನಿ ಮೋದಿ ಪಂಚ ರಾಷ್ಟ್ರಗಳ ಪ್ರವಾಸ ಆರಂಭ: ಘಾನಾಕ್ಕೆ ಮೊದಲ ಭೇಟಿ

ಪ್ರಧಾನ ಮಂತ್ರಿಗಳು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಭೇಟಿ ನೀಡಲಿದ್ದಾರೆ.
PM Modi tour
ಪ್ರಧಾನಿ ಮೋದಿ ಪ್ರವಾಸ ಆರಂಭ
Updated on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬುಧವಾರ, ಬ್ರೆಜಿಲ್ ಸೇರಿದಂತೆ ಐದು ದೇಶಗಳಿಗೆ ಒಂದು ವಾರದ ಭೇಟಿಗಾಗಿ ಪ್ರಯಾಣ ಬೆಳೆಸಿದ್ದಾರೆ. ಆರ್ಥಿಕತೆಗಳ ಬೆಳವಣಿಗೆಗೆ ಸಹಕಾರಕ್ಕಾಗಿ ಭಾರತವು ಬ್ರಿಕ್ಸ್ ನ್ನು ಪ್ರಮುಖ ವೇದಿಕೆಯಾಗಿ ಬಳಸಲು ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಒಟ್ಟಾಗಿ, ನಾವು ಹೆಚ್ಚು ಶಾಂತಿಯುತ, ಸಮಾನ, ನ್ಯಾಯಯುತ, ಪ್ರಜಾಪ್ರಭುತ್ವ ಮತ್ತು ಸಮತೋಲಿತ ಬಹುಧ್ರುವೀಯ ವಿಶ್ವ ಕ್ರಮಕ್ಕಾಗಿ ಶ್ರಮಿಸುತ್ತೇವೆ ಎಂದು ಪ್ರಧಾನ ಮಂತ್ರಿಗಳು 5 ದೇಶಗಳ ಪ್ರವಾಸ ಆರಂಭ ಸಂದರ್ಭದಲ್ಲಿ ಹೇಳಿದ್ದಾರೆ.

ಪ್ರಧಾನ ಮಂತ್ರಿಗಳು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಭೇಟಿ ನೀಡಲಿದ್ದಾರೆ. ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರ ಆಹ್ವಾನದ ಮೇರೆಗೆ ಇಂದು ಮತ್ತು ಜುಲೈ 3 ರಂದು ಪ್ರವಾಸ ಕೈಗೊಂಡಿದ್ದಾರೆ.

ಘಾನಾ ಗ್ಲೋಬಲ್ ಸೌತ್ ನಲ್ಲಿ ಮೌಲ್ಯಯುತ ಪಾಲುದಾರರಾಗಿದ್ದು, ಆಫ್ರಿಕನ್ ಒಕ್ಕೂಟ ಮತ್ತು ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಎರಡೂ ದೇಶಗಳ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸುವ ಮತ್ತು ಹೂಡಿಕೆ, ಇಂಧನ, ಆರೋಗ್ಯ, ಭದ್ರತೆ, ಸಾಮರ್ಥ್ಯ ವೃದ್ಧಿ ಮತ್ತು ಅಭಿವೃದ್ಧಿ ಪಾಲುದಾರಿಕೆ ಕ್ಷೇತ್ರಗಳನ್ನು ಒಳಗೊಂಡಂತೆ ಸಹಕಾರದ ಹೊಸ ಸಾಧ್ಯತೆಗಳನ್ನು ತೆರೆಯುವ ಗುರಿಯನ್ನು ಹೊಂದಿರುವ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಸಹ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಘಾನಾ ಸಂಸತ್ತಿನಲ್ಲಿ ಮಾತನಾಡುವುದು ಗೌರವದ ಸಂಗತಿ ಎಂದು ಕೂಡ ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಘಾನಾಗೆ ಭೇಟಿ ನೀಡಿದ ನಂತರ ಮುಂದಿನ ಎರಡು ದಿನಗಳವರೆಗೆ, ಪ್ರಧಾನಿ ಮೋದಿ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಇರುತ್ತಾರೆ, ಇದು ಭಾರತವು ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜನರ-ಜನರ ಸಂಪರ್ಕವನ್ನು ಹಂಚಿಕೊಳ್ಳುವ ದೇಶವಾಗಿದೆ.

PM Modi tour
Mann Ki Baat: ಸಾಮಾಜಿಕ ಭದ್ರತಾ ಯೋಜನೆಗಳಿಂದ 95 ಕೋಟಿ ಜನರು ಪ್ರಯೋಜನ ಪಡೆಯುತ್ತಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

ಈ ವರ್ಷದ ಪ್ರವಾಸಿ ಭಾರತೀಯ ದಿವಸದಲ್ಲಿ ಮುಖ್ಯ ಅತಿಥಿಯಾಗಿದ್ದ ಅಧ್ಯಕ್ಷೆ ಕ್ರಿಸ್ಟೀನ್ ಕಾರ್ಲಾ ಕಂಗಲೂ ಮತ್ತು ಇತ್ತೀಚೆಗೆ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ.

ಭಾರತೀಯರು ಟ್ರಿನಿಡಾಡ್ ಮತ್ತು ಟೊಬಾಗೋಗೆ 180 ವರ್ಷಗಳ ಹಿಂದೆ ಬಂದರು. ಈ ಭೇಟಿಯು ನಮ್ಮ ಪೂರ್ವಜರು ಮತ್ತು ರಕ್ತಸಂಬಂಧದ ವಿಶೇಷ ಬಂಧಗಳನ್ನು ಪುನರುಜ್ಜೀವನಗೊಳಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.

ನಂತರ ಮೋದಿ ಬ್ಯೂನಸ್ ಐರಿಸ್‌ಗೆ ಪ್ರಯಾಣಿಸಲಿದ್ದಾರೆ, ಇದು 57 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ಮಾಡುವ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.

ಅರ್ಜೆಂಟೀನಾ ಲ್ಯಾಟಿನ್ ಅಮೆರಿಕಾದಲ್ಲಿ ಪ್ರಮುಖ ಆರ್ಥಿಕ ಪಾಲುದಾರ ಮತ್ತು ಜಿ 20ಯಲ್ಲಿ ನಿಕಟ ಸಹಯೋಗಿಯಾಗಿದ್ದು, ಅಧ್ಯಕ್ಷ ಜೇವಿಯರ್ ಮಿಲೀ ಅವರೊಂದಿಗೆ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.

ಕೃಷಿ, ನಿರ್ಣಾಯಕ ಖನಿಜಗಳು, ಇಂಧನ, ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಹೂಡಿಕೆ ಕ್ಷೇತ್ರಗಳನ್ನು ಒಳಗೊಂಡಂತೆ ನಮ್ಮ ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಮುಂದುವರಿಸುವತ್ತ ನಾವು ಗಮನ ಹರಿಸುತ್ತೇವೆ ಎಂದು ಮೋದಿ ಹೇಳಿದರು.

ಪ್ರಧಾನ ಮಂತ್ರಿಗಳು ಜುಲೈ 6 ಮತ್ತು 7 ರಂದು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com