
ನವದೆಹಲಿ: ತಾಂತ್ರಿಕ ಸವಾಲುಗಳು ಮತ್ತು ಸಂಕೀರ್ಣ ವ್ಯವಸ್ಥೆಗಳಿಂದಾಗಿ ಹಳೆಯ ವಾಹನಗಳಿಗೆ ಇಂಧನ(ಪೆಟ್ರೋಲ್, ಡೀಸೆಲ್) ನಿಷೇಧ ಕಾರ್ಯಸಾಧ್ಯವಲ್ಲ ಎಂದು ದೆಹಲಿ ಸರ್ಕಾರ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ(CAQM) ಪತ್ರ ಬರೆದಿದೆ.
ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಈ ಕ್ರಮದ ಬಗ್ಗೆ ಜನರಲ್ಲಿ ಅಸಮಾಧಾನವಿದೆ ಮತ್ತು ಸರ್ಕಾರ ಅವರೊಂದಿಗೆ ನಿಂತಿದೆ ಎಂದು ಹೇಳಿದರು.
ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ(NCR) ನಿಷೇಧವನ್ನು ಜಾರಿಗೆ ತರಬೇಕೆಂದು ಸರ್ಕಾರ ಸೂಚಿಸಿದೆ. ಆದರೆ ಹಳೆಯ ವಾಹನಗಳಿಗೆ "ಕಠಿಣ ಮಾನದಂಡಗಳನ್ನು" ನಿಗದಿಪಡಿಸಿದ್ದಕ್ಕಾಗಿ ಹಿಂದಿನ AAP ಆಡಳಿತವನ್ನು ಅವರು ಟೀಕಿಸಿದರು.
ಜುಲೈ 1 ರಿಂದ ದೆಹಲಿ ಸರ್ಕಾರವು, ನೋಂದಣಿ ರದ್ದುಪಡಿಸಲಾದ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ರಸ್ತೆಗಳಲ್ಲಿ ಓಡಾಡಲು ಅನುಮತಿಸದ - ಡೀಸೆಲ್ ವಾಹನಗಳಿಗೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಮತ್ತು ಪೆಟ್ರೋಲ್ ವಾಹನಗಳಿಗೆ 15 ವರ್ಷ ಅಥವಾ ಅದಕ್ಕಿಂತ ಹಳೆಯ ವಾಹನಗಳಿಗೆ ಇಂಧನ ನಿಷೇಧಿಸಲಾಗಿದೆ.
ನಿಷೇಧ ಜಾರಿಗೆ ಬಂದ ನಂತರ ಇಂಧನ ತುಂಬಿಸಲು ಪೆಟ್ರೋಲ್ ಪಂಪ್‌ಗಳಿಗೆ ತೆರಳುವ ಹಳೆಯ ವಾಹನಗಳನ್ನು ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.
Advertisement