ಭಾಷೆಯ ವಿಷಯಕ್ಕೆ ಗೂಂಡಾಗಿರಿ ವಿರುದ್ಧ ಫಡ್ನವೀಸ್ ಎಚ್ಚರಿಕೆ: ಮರಾಠಿ ಹೆಮ್ಮೆ ಹೆಸರಲ್ಲಿ ಹಿಂಸೆ ಸಮರ್ಥನೀಯವಲ್ಲ- ಸಿಎಂ

ಗೃಹ ಖಾತೆಯನ್ನೂ ಹೊಂದಿರುವ ಫಡ್ನವೀಸ್, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಪ್ರಕರಣದಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದು ಸಿಎಂ ದೃಢಪಡಿಸಿದ್ದಾರೆ.
Devendra Fadnavis
ದೇವೇಂದ್ರ ಫಡ್ನವಿಸ್online desk
Updated on

ಮುಂಬೈ: ಭಾಷೆಯ ಹೆಸರಿನಲ್ಲಿ ಹಿಂಸಾಚಾರದ ಬಳಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಖಂಡಿಸಿದ್ದಾರೆ, ಮರಾಠಿ ಹೆಮ್ಮೆಯ ಸೋಗಿನಲ್ಲಿ ಗೂಂಡಾಗಿರಿಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮುಂಬೈ ಬಳಿಯ ಮೀರಾ ರಸ್ತೆಯಲ್ಲಿರುವ ಅಂಗಡಿಯೊಬ್ಬರ ಮೇಲೆ ಮರಾಠಿಯಲ್ಲಿ ಮಾತನಾಡುವುದು ಏಕೆ ಕಡ್ಡಾಯ ಎಂದು ಪ್ರಶ್ನಿಸಿದ್ದಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಹಲ್ಲೆ ನಡೆಸಿದ ಎರಡು ದಿನಗಳ ನಂತರ ಅವರ ಈ ಹೇಳಿಕೆಗಳು ಬಂದಿವೆ. ಮಹಾರಾಷ್ಟ್ರ ಬಹು ಭಾಷೆಗಳಿಗೆ ನೆಲೆಯಾಗಿದೆ ಎಂದು ಹೇಳಿದ ನಂತರ 48 ವರ್ಷದ ಅಂಗಡಿಯ ಮಾಲೀಕ ಬಾಬುಲಾಲ್ ಚೌಧರಿ ಅವರ ಮೇಲೆ ಏಳು ಜನರು ಹಲ್ಲೆ ನಡೆಸಿದ್ದಾರೆ. ಗುಂಪು ಅವರನ್ನು ಪದೇ ಪದೇ ಕಪಾಳಮೋಕ್ಷ ಮಾಡಿ ಆ ಪ್ರದೇಶದಲ್ಲಿ ತನ್ನ ವ್ಯವಹಾರವನ್ನು ಮುಂದುವರಿಸದಂತೆ ಎಚ್ಚರಿಸಿದೆ ಎಂದು ಆರೋಪಿಸಲಾಗಿದೆ.

"ನಿಮಗೆ ಮರಾಠಿ ಗೊತ್ತಿಲ್ಲದಿದ್ದರೆ, ಮಹಾರಾಷ್ಟ್ರದಲ್ಲಿ ವಾಸಿಸಬೇಡಿ. ನೀವು ಮರಾಠಿಯಲ್ಲಿ ಮಾತನಾಡದಿದ್ದರೆ, ನಾವು ಎಲ್ಲರನ್ನೂ ಹೊಡೆದು ಓಡಿಸುತ್ತೇವೆ ಮತ್ತು ನಿಮ್ಮ ಅಂಗಡಿಯನ್ನು ಒಡೆದು ಸುಡುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ.

ಅಂಗಡಿಯವನು ಮರಾಠಿ ಭಾಷೆಯನ್ನು ಅವಮಾನಿಸಿದ್ದಾನೆಂದು ಆರೋಪಿಗಳನ್ನು ಸಮರ್ಥಿಸಿಕೊಂಡ ಎಂಎನ್‌ಎಸ್, ಮತ್ತು ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಮ್ ಕೂಡ ಮರಾಠಿಯನ್ನು ಅಗೌರವಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳುವ ಮೂಲಕ ಬೆಂಬಲ ಸೂಚಿಸಿದರು, ಆದರೆ ಮುಖ್ಯಮಂತ್ರಿಯ ಪ್ರತಿಕ್ರಿಯೆ ಇದಕ್ಕೆ ವ್ಯತಿರಿಕ್ತವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಫಡ್ನವೀಸ್, "ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯ ಬಗ್ಗೆ ಹೆಮ್ಮೆ ಪಡುವುದು ತಪ್ಪಲ್ಲ. ಆದರೆ ಯಾರಾದರೂ ಭಾಷೆಯ ಹೆಸರಿನಲ್ಲಿ ಗೂಂಡಾಗಿರಿ ಮಾಡಿದರೆ, ನಾವು ಅದನ್ನು ಸಹಿಸುವುದಿಲ್ಲ. ಭಾಷೆಯ ಆಧಾರದ ಮೇಲೆ ಯಾರಾದರೂ ಜನರನ್ನು ಥಳಿಸಿದರೆ, ಇದನ್ನು ಸಹಿಸುವುದಿಲ್ಲ" ಎಂದು ಹೇಳಿದ್ದಾರೆ.

ಗೃಹ ಖಾತೆಯನ್ನೂ ಹೊಂದಿರುವ ಫಡ್ನವೀಸ್, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಪ್ರಕರಣದಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದು ದೃಢಪಡಿಸಿದರು. ಭಾಷೆ ಆಧಾರಿತ ವಿವಾದಗಳನ್ನು ಸೃಷ್ಟಿಸುವ ಯಾರಾದರೂ ಸರಿ ಅವರ ವಿರುದ್ಧ ಭವಿಷ್ಯದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

"ಕೆಲವೊಮ್ಮೆ ಈ ಜನರು ಇಂಗ್ಲಿಷ್ ನ್ನು ಅಳವಡಿಸಿಕೊಳ್ಳುತ್ತಾರೆ ಆದರೆ ಹಿಂದಿಯ ಬಗ್ಗೆ ವಿವಾದಗಳನ್ನು ಸೃಷ್ಟಿಸುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಇದು ಯಾವ ರೀತಿಯ ಚಿಂತನೆ ಮತ್ತು ಯಾವ ರೀತಿಯ ಕ್ರಮ?" ಎಂದು ಅವರು ಪ್ರಶ್ನಿಸಿದ್ದಾರೆ.

ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವುದು ಇತರ ಭಾಷೆಗಳ ವಿರುದ್ಧದ ಅನ್ಯಾಯಕ್ಕೆ ಕಾರಣವಾಗಬಾರದು ಎಂದು ಫಡ್ನವೀಸ್ ಒತ್ತಿ ಹೇಳಿದರು. ಕಾನೂನನ್ನು ಕೈಗೆತ್ತಿಕೊಂಡ ಯಾರಾದರೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

Devendra Fadnavis
ಹಿಂದಿ ಹೇರಿಕೆ: ಮರಾಠಿ ಎದುರು ಮಂಡಿಯೂರಿದ ಮಹಾರಾಷ್ಟ್ರ ಸಿಎಂ ಫಡ್ನವಿಸ್; ತ್ರಿಭಾಷಾ ನೀತಿ ಆದೇಶ ರದ್ದು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com