
ನವದೆಹಲಿ: ಜಾರಿ ನಿರ್ದೇಶನಾಲಯ(ED)ದ ಮನವಿಯ ಮೇರೆಗೆ ದೆಹಲಿ ನ್ಯಾಯಾಲಯವು ಶನಿವಾರ ಯುಕೆ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು ತಲೆಮರೆಸಿಕೊಂಡಿರುವ ಘೋಷಿತ ಅಪರಾಧಿ ಎಂದು ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ನ್ಯಾಯಾಲಯವು ಪ್ಯುಗಿಟಿವ್ ಎಕನಾಮಿಕ್ ಅಫೆಂಡರ್ಸ್ ಆಕ್ಟ್, 2018 ರ ಅಡಿಯಲ್ಲಿ ಸಂಜಯ್ ಭಂಡಾರಿ 'ಘೋಷಿತ ಅಪರಾಧಿ' ಎಂದು ಆದೇಶ ಹೊರಡಿಸಿದೆ.
ED ಪ್ರಕಾರ, ಭಂಡಾರಿ 2016 ರಿಂದ UKಯಲ್ಲಿ ತಲೆಮರೆಸಿಕೊಂಡಿದ್ದು, ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿದ ಅರ್ಜಿಯನ್ನು ಇತ್ತೀಚೆಗೆ UK ನ್ಯಾಯಾಲಯ ತಿರಸ್ಕರಿಸಿದೆ.
2015 ರ ಕಪ್ಪು ಹಣ ವಿರೋಧಿ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಸಲ್ಲಿಸಲಾದ ಆದಾಯ ತೆರಿಗೆ ಇಲಾಖೆಯ ಚಾರ್ಜ್‌ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು, ED ಫೆಬ್ರವರಿ 2017 ರಲ್ಲಿ ಭಂಡಾರಿ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
ಇಡಿ 2020 ರಲ್ಲಿ ಸಂಜಯ್ ಭಂಡಾರಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.
Advertisement