
ಪಾಣಿಪತ್: ಹರಿಯಾಣದ ಪಾಣಿಪತ್ ನಲ್ಲಿ ನಿಂತಿದ್ದ ರೈಲಿನ ಖಾಲಿ ಬೋಗಿಯಲ್ಲಿ 35 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜೂನ್ 26 ರಂದು ಈ ಮಹಿಳೆ ಕಾಣೆಯಾಗಿದ್ದಾರೆ ಎಂದು ದೂರು ಬಂದಿತ್ತು. ಜೂನ್ 24 ರಂದು ತನ್ನ ಜೊತೆ ಜಗಳವಾಡಿದ ನಂತರ ಪತ್ನಿ ಕಾಣೆಯಾಗಿದ್ದಾರೆ ಎಂದು ಅವರ ಪತಿ ಪೊಲೀಸರಿಗೆ ತಿಳಿಸಿದ್ದಾರೆ.
ಹಾಗಾಗ ಜಗಳ ಮಾಡಿ ಮನೆ ಬಿಟ್ಟು ಹೋಗುತ್ತಿದ್ದರು. ಆದರೆ ಆಕೆ ತಾನಾಗಿಯೇ ಹಿಂತಿರುಗುತ್ತಿದ್ದರು. ಈ ಬಾರಿ ಎರಡು ದಿನ ಕಳೆದರೂ ಮನೆಗೆ ವಾಪಸ್ ಬರಲಿಲ್ಲ ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.
ನಾನು ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದಾಗ ವ್ಯಕ್ತಿಯೊಬ್ಬ ನನ್ನ ಬಳಿಗೆ ಬಂದು, ನಿನ್ನ ಪತಿ ನನ್ನನ್ನು ಕಳುಹಿಸಿದ್ದಾರೆಂದು ಹೇಳಿಕೊಂಡರು. ಬಳಿಕ ಆ ವ್ಯಕ್ತಿ ನನ್ನನ್ನು ಕರೆದುಕೊಂಡು ಹೋಗಿ ನಿಂತಿದ್ದ ರೈಲಿನ ಖಾಲಿ ಬೋಗಿ ಹತ್ತಿಸಿದನು. ಅಲ್ಲಿ ಆ ವ್ಯಕ್ತಿ ನನ್ನ ಮೇಲೆ ಅತ್ಯಾಚಾರ ಎಸಗಿದನು ಎಂದು ಮಹಿಳೆ ಹೇಳಿದ್ದಾರೆ.
ನಂತರ, ಇತರ ಇಬ್ಬರು ಪುರುಷರು ಅವನೊಂದಿಗೆ ಸೇರಿಕೊಂಡು ನನ್ನ ಮೇಲೆ ಅತ್ಯಾಚಾರ ಮಾಡಿದರು ಎಂದು ಮಹಿಳೆ ಹೇಳಿರುವುದಾಗಿ ಕ್ವಿಲ್ಲಾ ಪೊಲೀಸ್ ಠಾಣೆಯ SHO ಶ್ರೀನಿವಾಸ್ ತಿಳಿಸಿದ್ದಾರೆ.
ಅತ್ಯಾಚಾರದಿಂದ ಆಘಾತಕ್ಕೊಳಗಾದ ಮಹಿಳೆಯನ್ನು ನಂತರ ಸೋನಿಪತ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಆರೋಪಿ ಮಹಿಳೆಯನ್ನು ಹಳಿಗಳ ಮೇಲೆ ಎಸೆದಿದ್ದಾರೆ. ರೈಲು ಮಹಿಳೆ ಮೇಲೆ ಹರಿದು ಕಾಲು ಕಳೆದುಕೊಂಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶ್ರಿನಿವಾಸ್ ಹೇಳಿದ್ದಾರೆ.
"ನಾವು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಮುಂದಿನ ಕ್ರಮಕ್ಕಾಗಿ ಪಾಣಿಪತ್ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಪ್ರಕರಣ ವರ್ಗಾಯಿಸಿದ್ದೇವೆ" ಎಂದು ಶ್ರಿನಿವಾಸ್ ದೂರವಾಣಿಯಲ್ಲಿ ತಿಳಿಸಿದ್ದಾರೆ.
Advertisement