ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: 'ತುಳಸಿ' ಪಾತ್ರದ ಫಸ್ಟ್‌ ಲುಕ್‌ ಔಟ್; ಹೊಸ ರೂಪದಲ್ಲಿ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ನಟಿ!

2000 ಇಸವಿಯ ಆರಂಭದಲ್ಲಿ ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಎನ್ನುವ ಧಾರಾವಾಹಿಯಲ್ಲಿ ಸ್ಮೃತಿ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತುಳಸಿ ವೀರ್ವಾನಿ ಪಾತ್ರದಲ್ಲಿ ಸ್ಮೃತಿ ವೀಕ್ಷಕರನ್ನು ರಂಜಿಸಿದ್ದರು.
 Smriti Irani
ಸ್ಮೃತಿ ಇರಾನಿ
Updated on

ಮುಂಬಯಿ: ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಲವು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಕಂಬ್ಯಾಕ್‌ ಮಾಡಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ.

ಸ್ಮೃತಿ ಇರಾನಿ ಒಂದು ಕಾಲದದಲ್ಲಿ ಕಿರುತೆರೆ – ಹಿರಿತೆರೆಯಲ್ಲಿ ಮಿಂಚಿದವರು. 2000 ಇಸವಿಯ ಆರಂಭದಲ್ಲಿ ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಎನ್ನುವ ಧಾರಾವಾಹಿಯಲ್ಲಿ ಸ್ಮೃತಿ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತುಳಸಿ ವೀರ್ವಾನಿ ಪಾತ್ರದಲ್ಲಿ ಸ್ಮೃತಿ ವೀಕ್ಷಕರನ್ನು ರಂಜಿಸಿದ್ದರು.

ಅವರ ಅಭಿನಯ ಕಿರುತೆರೆ ವೀಕ್ಷಕರ ಗಮನ ಸೆಳೆದಿತ್ತು. ಈ ಧಾರಾವಾಹಿ ಸತತ 7 ವರ್ಷ ನಂ.1 ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. 2008ರ ನವೆಂಬರ್‌ನಲ್ಲಿ ಧಾರಾವಾಹಿ ಮುಕ್ತಾಯ ಕಂಡಿತ್ತು. ಇದೀಗ ಸ್ಮೃತಿ ಸೀರಿಯಲ್ ಜಗತ್ತಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ʼಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್‌ -2ʼ ಮೂಲಕ ಸ್ಮೃತಿ ಕಿರುತೆರೆಗೆ ಕಂಬ್ಯಾಕ್‌ ಮಾಡಲಿದ್ದಾರೆ.

ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್‌ -2ʼ ಈಗಾಗಲೇ ಕಿರುತೆರೆ ಲೋಕದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸ್ಮೃತಿ ಇರಾನಿ ಮತ್ತೆ ಟಿವಿ ಲೋಕಕ್ಕೆ ಬಂದಿದ್ದು, ಅವರನ್ನು ತುಳಸಿ ವೀರ್ವಾನಿ ಪಾತ್ರದಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

ಈ ನಡುವೆ ಸ್ಮೃತಿ ಇರಾನಿ ಪಾತ್ರದ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ಸಾಂಪ್ರದಾಯಿಕ ಗೃಹಿಣಿಯ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದು, ಕೆಂಪು ಬಿಂದಿ, ಕಪ್ಪು ಮಣಿಗಳ ಮಂಗಳಸೂತ್ರದಿಂದ ಲೇಯರ್ ಮಾಡಲಾದ ಆಭರಣಗಳಲ್ಲಿ ಅವರು ಮಿಂಚಿದ್ದಾರೆ. ಅವರ ಪಾತ್ರ ಲುಕ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸ್ಮೃತಿ ಅವರು 2014 ರಲ್ಲಿ ಸರಣಿಯನ್ನು ಮರುಪ್ರಾರಂಭಿಸುವ ಬಗ್ಗೆ ಮಾತುಕತೆ ನಡೆದಿತ್ತು, ಆದರೆ ರಾಜಕೀಯಕ್ಕೆ ಬಂದ ಕಾರಣ ಅವರು ಆ ಪ್ರಸ್ತಾಪವನ್ನು ತಿರಸ್ಕರಿಸಬೇಕಾಯಿತು ಎಂದು ಬಹಿರಂಗಪಡಿಸಿದ್ದರು.

 Smriti Irani
ತಮ್ಮ ಪಿಂಚಣಿ, ಇತರ ಸವಲತ್ತುಗಳನ್ನು ರಕ್ಷಣಾ ನಿಧಿಗೆ ಅರ್ಪಿಸಿದ ಸ್ಮೃತಿ ಇರಾನಿ

2014 ರಿಂದ 2024 ರವರೆಗೆ ಅನೇಕ ಖಾತೆಗಳಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಸ್ಮೃತಿ, 2024 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸೋನಿಯಾ ಗಾಂಧಿ ಕುಟುಂಬದ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ವಿರುದ್ಧ 1.5 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತರು, 2019 ರಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಅಮೇಥಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ರು. ಅವರು ನಟನೆಗೆ ಮರಳುವುದರೊಂದಿಗೆ, ಇದರರ್ಥ 2029 ರ ಚುನಾವಣೆಗೂ ಮೊದಲು ರಾಜಕೀಯ ವಿಶ್ರಾಂತಿಗೆ ಜಾರಿದರೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳೆದ 25 ವರ್ಷಗಳಲ್ಲಿ ಮಾಧ್ಯಮ ಮತ್ತು ಸಾರ್ವಜನಿಕ ನೀತಿ ಎಂಬ ಎರಡು ಪ್ರಬಲ ವೇದಿಕೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಸ್ಮೃತಿ ಹೇಳಿದರು, ಎರಡೂ ತಮ್ಮದೇ ಆದ ಪ್ರಭಾವವನ್ನು ಹೊಂದಿವೆ ಮತ್ತು "ಪ್ರತಿಯೊಂದು ವಿಭಿನ್ನ ರೀತಿಯ ಬದ್ಧತೆಯನ್ನು ಬಯಸುತ್ತದೆ" ಎಂದು ಹೇಳಿದರು.

ಭಾರತದ ಕಿರುತೆರೆ ಲೋಕದಲ್ಲಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಏಕ್ತಾ ಕಪೂರ್ ನಿರ್ಮಾಣ ಮಾಡಿದ ಈ ಸೀರಿಯಲ್ 2000ನೇ ಇಸವಿಯ ಜುಲೈ 3ರಿಂದ 2008ರ ನವೆಂಬರ್ 6ರ ತನಕ ಪ್ರಸಾರ ಆಗಿತ್ತು. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಈ ಸೀರಿಯಲ್ ಬಿತ್ತರವಾಗಿತ್ತು. ಒಟ್ಟು 1,800 ಸಂಚಿಕೆಗಳು ಪ್ರಸಾರವಾಗಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com