
ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವಂತೆ ಹಣಕಾಸು ಸಚಿವಾಲಯ ಬ್ಯಾಂಕುಗಳಿಗೆ ನಿರ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ವರದಿ ಕುರಿತು ಸ್ಪಷ್ಪನೆ ನೀಡಿರುವ ಸಚಿವಾಲಯ, ಪ್ರಧಾನಮಂತ್ರಿ ಜನಧನ್ ಯೋಜನೆಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವಂತೆ ಬ್ಯಾಂಕುಗಳಿಗೆ ಸೂಚಿಸಿಲ್ಲ ಎಂದು ತಿಳಿಸಿದೆ.
ಜನಧನ್ ಯೋಜನಾ ಖಾತೆಗಳು, ಜೀವನ್ ಜ್ಯೋತಿ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮತ್ತು ಇತರ ಕಲ್ಯಾಣ ಯೋಜನೆಗಳ ಅಳವಡಿಕೆಯನ್ನು ಹೆಚ್ಚಿಸಲು ಜುಲೈ 1 ರಿಂದ ದೇಶಾದ್ಯಂತ ಹಣಕಾಸು ಸೇವೆಗಳ ಇಲಾಖೆಯು ಮೂರು ತಿಂಗಳ ಅಭಿಯಾನವನ್ನು ಪ್ರಾರಂಭಿಸಿದೆ.
ಈ ಅಭಿಯಾನದ ಸಮಯದಲ್ಲಿ ಬ್ಯಾಂಕುಗಳು ಎಲ್ಲಾ ಬ್ಯಾಂಕ್ ಗಳು ಖಾತೆಗಳ ಮರು- ಕೆವೈಸಿಯನ್ನು ಸಹ ಕೈಗೊಳ್ಳಲಿವೆ ಎಂದು ಹೇಳಿಕೆಯಲ್ಲಿ ಸಚಿವಾಲಯ ಹೇಳಿದೆ.
ನಿಷ್ಕ್ರಿಯ ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳ ಸಂಖ್ಯೆಯನ್ನು ಹಣಕಾಸು ಸೇವೆಗಳ ಇಲಾಖೆಯು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವರ ಖಾತೆಗಳನ್ನು ಸಕ್ರಿಯಗೊಳಿಸಲು ಆಯಾ ಖಾತೆದಾರರನ್ನು ಸಂಪರ್ಕಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ.
ಪಿಎಂಜೆಡಿವೈ ಖಾತೆಗಳ ಒಟ್ಟು ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ನಿಷ್ಕ್ರಿಯ ಪಿಎಂಜೆಡಿವೈ ಖಾತೆಗಳನ್ನು ಸಾಮೂಹಿಕವಾಗಿ ಮುಚ್ಚುವ ಯಾವುದೇ ಪ್ರಕರಣಗಳು ಇಲಾಖೆಯ ಗಮನಕ್ಕೆ ಬಂದಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ.
Advertisement