Tamil Nadu: ಕಡಲೂರು ಬಳಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ; ಇಬ್ಬರು ಮಕ್ಕಳು ಸೇರಿ ಮೂವರು ಸಾವು, 10 ಮಂದಿಗೆ ಗಾಯ; Video

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 10 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕಡಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
Cuddalore school van accident
ಕಡಲೂರಿನಲ್ಲಿ ರೈಲ್ವೆ ಹಳಿ ಬಳಿ ಶಾಲಾ ವ್ಯಾನ್ ಅಪಘಾತ
Updated on

ಕದ್ದಲೂರು: ಮಂಗಳವಾರ ಬೆಳಗ್ಗೆ 7:45 ರ ಸುಮಾರಿಗೆ ತಮಿಳು ನಾಡಿನ ಕಡಲೂರಿನಿಂದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಸೆಮ್ಮಂಕುಪ್ಪಂನಲ್ಲಿ ಮಾನವಸಹಿತ ಲೆವೆಲ್ ಕ್ರಾಸಿಂಗ್ ದಾಟಲು ಯತ್ನಿಸುತ್ತಿದ್ದ ಶಾಲಾ ವ್ಯಾನ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಒಬ್ಬರು ದಾರಿಹೋಕರು ಮೃತಪಟ್ಟಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 10 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕಡಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಶಾಲಾ ವ್ಯಾನ್ ತೀವ್ರವಾಗಿ ನಜ್ಜುಗುಜ್ಜಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೃತ ಇಬ್ಬರು ಮಕ್ಕಳನ್ನು ತೊಂಡಮನಾಥಂನ ನಿವಾಸ್ (12ವ) ಮತ್ತು ಸುಬ್ರಮಣಿಯಪುರಂನ ಡಿ. ಚಾರುಮತಿ (16ವ) ಎಂದು ಗುರುತಿಸಲಾಗಿದೆ.

ಅಪಘಾತದ ಸಮಯದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿದ್ದ ಸೆಮ್ಮಂಕುಪ್ಪಂನ ಅಣ್ಣಾದೊರೈ ಎಂಬ 55 ವರ್ಷದ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ.

ಆರಂಭದಲ್ಲಿ ಗ್ರಾಮಸ್ಥರು ರೈಲಿಗೆ ಸಿಬ್ಬಂದಿಯಿಂದ ಕೂಡಿದ ಗೇಟ್ ಮುಚ್ಚಿಲ್ಲ ಎಂದು ಹೇಳಿದಾಗ, ಗೇಟ್ ಕೀಪರ್ ಗೇಟ್ ಮುಚ್ಚಲು ಮುಂದಾದರು. ಸ್ಕೂಲ್ ವ್ಯಾನ್ ಚಾಲಕ ತನಗೆ ಶಾಲೆಗೆ ತಡವಾಗುತ್ತಿದೆ, ಹೋಗಲು ಬಿಡಿ ಎಂದು ಒತ್ತಾಯಿಸಿದನು, ಗೇಟ್ ಕೀಪರ್ ಅದಕ್ಕೆ ಅನುಮತಿ ನೀಡಬಾರದಿತ್ತು ಎಂದು ದಕ್ಷಿಣೆ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಡಲೂರು ಮತ್ತು ಅಲಪ್ಪಕ್ಕಂ ನಡುವಿನ ಇಂಟರ್‌ಲಾಕ್ ಇಲ್ಲದ ಸಿಬ್ಬಂದಿಯಿಂದ ಕೂಡಿದ ಗೇಟ್ ಆಗಿರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 170 ರಲ್ಲಿ ಅಪಘಾತ ಸಂಭವಿಸಿದೆ. ವ್ಯಾನ್ ವಿಲ್ಲುಪುರಂ-ಮೈಲಾಡುತುರೈ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ 56813) ಗೆ ಡಿಕ್ಕಿ ಹೊಡೆದಿದೆ.

ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ವ್ಯಾನ್ ಹೊಂದಿರುವ ರೈಲ್ವೆ ಇಲಾಖೆ ಕೂಡಲೇ ಪರಿಹಾರ ರೈಲನ್ನು ಸ್ಥಳಕ್ಕೆ ಕಳುಹಿಸಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ಮತ್ತು ಶಾಖಾ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಸುರಕ್ಷತೆ, ಕಾರ್ಯಾಚರಣೆ ಮತ್ತು ಎಂಜಿನಿಯರಿಂಗ್ ಶಾಖೆಗಳ ಅಧಿಕಾರಿಗಳ ಸಮಿತಿಯು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com