ಇಂದಿರಾ 'ತುರ್ತು ಪರಿಸ್ಥಿತಿ' ವೇಳೆ ಸಂಜಯ್ ಗಾಂಧಿ 'ಕುಕೃತ್ಯ' ಬಗ್ಗೆ ತರೂರ್ ಲೇಖನ: ಕಾಂಗ್ರೆಸ್ ನಲ್ಲಿ ತಲ್ಲಣ

ಮಲಯಾಳಂ ದಿನಪತ್ರಿಕೆ ದೀಪಿಕಾದಲ್ಲಿ ಪ್ರಕಟವಾದ ಇತ್ತೀಚಿನ ಲೇಖನವು ವೈರಲ್ ಆಗಿದ್ದು, ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ "ಕರಾಳ ಯುಗ" ಎಂದು ತರೂರ್ ಬಣ್ಣಿಸಿದ್ದಾರೆ.
Shashi Tharoor
ಶಶಿ ತರೂರ್
Updated on

ತಿರುವನಂತಪುರಂ: ತುರ್ತು ಪರಿಸ್ಥಿತಿಯ ಅವಧಿಯನ್ನು ತೀವ್ರವಾಗಿ ಟೀಕಿಸುವ ಮೂಲಕ ಮತ್ತು ನೆಹರೂ-ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿಕೊಂಡು ಶಶಿ ತರೂರ್ ವಾಗ್ದಾಳಿ ನಡೆಸಿರುವುದು ಪಕ್ಷದೊಳಗೆ ಮತ್ತೊಮ್ಮೆ ವಿವಾದ ಸೃಷ್ಟಿಗೆ ಕಾರಣವಾಗಿದೆ.

ಮಲಯಾಳಂ ದಿನಪತ್ರಿಕೆ ದೀಪಿಕಾದಲ್ಲಿ ಪ್ರಕಟವಾದ ಇತ್ತೀಚಿನ ಲೇಖನವು ವೈರಲ್ ಆಗಿದ್ದು, ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ "ಕರಾಳ ಯುಗ" ಎಂದು ತರೂರ್ ಬಣ್ಣಿಸಿದ್ದಾರೆ ಆ ಸಮಯದಲ್ಲಿ ನಡೆದ "ಸಹಿಸಲಾಗದ ದೌರ್ಜನ್ಯಗಳು" ಎಂದು ಕರೆದಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಿಂದ 1977ರ ಮಾರ್ಚ್‌ 21ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಕರಾಳ ಯುಗ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೈಗೊಂಡ ಪ್ರಯತ್ನಗಳು ಕ್ರೌರ್ಯದ ರೂಪ ತಾಳಿತು. ಹಾಗೆಂದು ಆ ಕ್ರಮವನ್ನು ಸಮರ್ಥಿಸಲಾಗದು ಎಂದು ಅವರು ಹೇಳಿದ್ದಾರೆ.

‘ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು ಈ ಅವಧಿಯ ಕುಕೃತ್ಯಕ್ಕೆ ಒಂದು ಉದಾಹರಣೆ. ಸಂಜಯ್‌ ಇಟ್ಟ ಅನಿಯಂತ್ರಿತ ಗುರಿಯನ್ನು ತಲುಪಲು ಬಡ ಗ್ರಾಮೀಣ ಭಾಗದಲ್ಲಿ ಹಿಂಸೆ ಮತ್ತು ಬಲವಂತದಿಂದ ಸಂತಾನಹರಣ ಮಾಡಿಸಲಾಗುತ್ತಿತ್ತು. ನವದೆಹಲಿ ಹಾಗೂ ಇನ್ನಿತರ ನಗರಗಳ ಕೊಳಗೇರಿಗಳನ್ನು ಕರುಣೆಯೇ ಇಲ್ಲದೆ ನೆಲಸಮಗೊಳಿಸಲಾಯಿತು. ಸಾವಿರಾರು ಜನರು ನಿರ್ವಸತಿಗರಾದರು. ಅವರ ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ’ ಎಂದು ತರೂರ್ ಹೇಳಿದ್ದಾರೆ.

Shashi Tharoor
ಕಾಂಗ್ರೆಸ್ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಒಪ್ಪಿಕೊಂಡ ಶಶಿ ತರೂರ್

ಐವತ್ತು ವರ್ಷಗಳ ನಂತರವೂ, ಆ ಅವಧಿಯು ಭಾರತೀಯರ ಮನಸ್ಸಿನಲ್ಲಿ ಅಳಿಸಲಾಗದಂತೆ ಉಳಿದಿದೆ" ಎಂದು ತರೂರ್ ಬರೆದಿದ್ದಾರೆ, ಆ ಅವಧಿಯು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೂಲಭೂತ ಹಕ್ಕುಗಳನ್ನು ತೀವ್ರವಾಗಿ ಪರೀಕ್ಷಿಸಿತು.

ತುರ್ತು ಪರಿಸ್ಥಿತಿಯ ಸಮಯದಲ್ಲಿ "ಸಾಂವಿಧಾನಿಕ ಕಾನೂನುಗಳನ್ನು ಬಹಿರಂಗವಾಗಿ ನಿರ್ಲಕ್ಷಿಸುವುದು" ಭಾರತೀಯ ರಾಜಕೀಯದ ಮೇಲೆ ಆಳವಾದ ಗಾಯವನ್ನುಂಟುಮಾಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತುರ್ತು ಪರಿಸ್ಥಿತಿಯನ್ನು ಕೇವಲ ಕರಾಳ ಅಧ್ಯಾಯವೆಂದು ನೆನಪಿಸಿಕೊಳ್ಳದೆ, ಅದರಿಂದ ಶಾಶ್ವತ ಪಾಠಗಳನ್ನು ಕಲಿಯುವಂತೆ ರಾಷ್ಟ್ರವನ್ನು ಒತ್ತಾಯಿಸುವ ಮೂಲಕ ತರೂರ್ ತಮ್ಮ ಲೇಖನವನ್ನು ಮುಕ್ತಾಯಗೊಳಿಸಿದ್ದಾರೆ. ಈ ಲೇಖನವು ಕಾಂಗ್ರೆಸ್‌ನೊಳಗೆ ಹೊಸ ಕಲಹಕ್ಕೆ ನಾಂದಿ ಹಾಡಿದೆ, ಶಶಿ ತರೂರ್ ವಿರುದ್ಧ ಯಾವ ರೀತಿ ಕಾಂಗ್ರೆಸ್ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ಎಲ್ಲರ ಕೂತೂಹಲ ಮೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com