
ಗುರುಗ್ರಾಮ: 25 ವರ್ಷದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಹತ್ಯೆ ಮಾಡಿದ ತಂದೆ ದೀಪಕ್ ಯಾದವ್ ಅವರು, ನನ್ನ ಆದಾಯದಲ್ಲಿ ಬದುಕುತ್ತಿದ್ದಿಯಾ ಅಂತ ಆಗಾಗ್ಗೆ ನಿಂದಿಸುತ್ತಿದ್ದ ಕಾರಣ ಆಕೆ ಮೇಲೆ ಗುಂಡು ಹಾರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆದರೆ, ಶುಕ್ರವಾರ ಪೊಲೀಸರು ಮಾಜಿ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಘಟನೆ ನಡೆದಾಗ ಅವರ ತಾಯಿ ಏನು ಮಾಡುತ್ತಿದ್ದರು ಎಂಬುದನ್ನು ಸಹ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮೃತ ರಾಧಿಕಾ ಚಿಕ್ಕಪ್ಪ ಕುಲದೀಪ್ ಯಾದವ್ ಅವರ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಘಟನೆ ನಡೆದಾಗ ರಾಧಿಕಾ ಅವರ ತಾಯಿ ಮಂಜು ಯಾದವ್ ಮನೆಯ ಮೊದಲ ಮಹಡಿಯಲ್ಲಿದ್ದರು.
ಗುರುವಾರ ಗುರುಗ್ರಾಮದ ಸುಶಾಂತ್ ಲೋಕ್ ಪ್ರದೇಶದಲ್ಲಿರುವ ಎರಡು ಅಂತಸ್ತಿನ ಮನೆಯಲ್ಲಿ 25 ವರ್ಷದ ಟೆನಿಸ್ ಆಟಗಾರ್ತಿಯನ್ನು ಅವರ ತಂದೆ ಗುಂಡಿಕ್ಕಿ ಕೊಂದಿದ್ದಾರೆ.
ಎಫ್‌ಐಆರ್‌ನಲ್ಲಿ, ದೀಪಕ್, ಅವರ ಪತ್ನಿ ಮಂಜು ಮತ್ತು ಮಗಳು ರಾಧಿಕಾ ಸೆಕ್ಟರ್ 57 ರ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು ಮತ್ತು ತಾವು ತಮ್ಮ ಕುಟುಂಬದೊಂದಿಗೆ ನೆಲ ಮಹಡಿಯಲ್ಲಿ ವಾಸಿಸುತ್ತಿರುವುದಾಗಿ ಕುಲದೀಪ್ ಯಾದವ್ ಹೇಳಿದ್ದಾರೆ.
ಘಟನೆ ನಡೆದಾಗ ದೀಪಕ್, ಅವರ ಪತ್ನಿ ಮತ್ತು ಮಗಳು ಮಾತ್ರ ಮನೆಯ ಮೊದಲ ಮಹಡಿಯಲ್ಲಿದ್ದರು ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಅವರ ಮಗ ಧೀರಜ್ ಅಲ್ಲಿ ಇರಲಿಲ್ಲ ಎಂದು ಮೃತ ರಾಧಿಕಾ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ, ಇದನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ದೀಪಕ್ ಕನಿಷ್ಠ ಐದು ಗುಂಡುಗಳನ್ನು ಹಾರಿಸಿದ್ದು, ಅದರಲ್ಲಿ ಮೂರು ಗುಂಡುಗಳು ರಾಧಿಕಾ ಅವರ ಬೆನ್ನಿಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
"ರಾಧಿಕಾ ತುಂಬಾ ಒಳ್ಳೆಯ ಟೆನಿಸ್ ಆಟಗಾರ್ತಿ ಮತ್ತು ಅವರು ಹಲವಾರು ಟ್ರೋಫಿಗಳನ್ನು ಗೆದ್ದಿದ್ದರು. ಅವರನ್ನು ಏಕೆ ಕೊಲೆ ಮಾಡಲಾಯಿತು ಎಂದು ನನಗೆ ಆಶ್ಚರ್ಯವಾಗಿದೆ. ನನ್ನ ಸಹೋದರನ ಬಳಿ ಪರವಾನಗಿ ಪಡೆದ .32 ಬೋರ್ ರಿವಾಲ್ವರ್ ಇದೆ. ಅದು ಅಲ್ಲಿ ಬಿದ್ದಿತ್ತು" ಎಂದು ರಾಧಿಕಾ ಅವರ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರಿಗೆ ನೀಡಿದ ಅಧಿಕೃತ ಹೇಳಿಕೆಯಲ್ಲಿ, ರಾಧಿಕಾ ನಡೆಸುತ್ತಿದ್ದ ಟೆನಿಸ್ ಅಕಾಡೆಮಿ ಸಂಬಂಧ ತಂದೆ ಮತ್ತು ಮಗಳ ನಡುವೆ ಜಗಳಕ್ಕೆ ಕಾರಣವಾಗಿತ್ತು. ರಾಧಿಕಾ ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದರು ಮತ್ತು ಅದರಿಂದ ಬಂದ ಹಣದಲ್ಲಿ ಅವರ ತಂದೆ ಜೀವನ ನಡೆಸುತ್ತಿದ್ದರು" ಎಂದು ಗುರುಗ್ರಾಮ್ ಪೊಲೀಸ್ ವಕ್ತಾರ ಸಂದೀಪ್ ಸಿಂಗ್ ಹೇಳಿದ್ದಾರೆ.
Advertisement