'ಮೋದಿಯವರೇ ಇದು ಎಂತಹ ಸ್ವಾಗತ?': Mohan Bhagawat ಹೇಳಿಕೆ ಬಗ್ಗೆ ಪ್ರಧಾನಿಯನ್ನು ಮೂದಲಿಸಿದ ಕಾಂಗ್ರೆಸ್

75 ವರ್ಷಗಳ ಶಾಲು ನಿಮ್ಮ ಮೇಲೆ ಹೊದಿಸಿದರೆ, ನೀವು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದೀರಿ ಮತ್ತು ಹಿಂದೆ ಸರಿದು ಇತರರಿಗೆ ಕೆಲಸ ಮಾಡಲು ಬಿಡಬೇಕು ಎಂದರ್ಥ ಎಂದು ಪಿಂಗ್ಲೆಯವರು ಹೇಳುತ್ತಿದ್ದರು.
Jairam Ramesh
ಜೈರಾಂ ರಮೇಶ್
Updated on

ನವದೆಹಲಿ: 75 ವರ್ಷ ವಯಸ್ಸಿನಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್, ವಿದೇಶದಿಂದ ತವರಿಗೆ ಹಿಂತಿರುಗುತ್ತಿರುವ ಪ್ರಧಾನಿಯವರಿಗೆ ಇದು ಎಂತಹ ಸುದ್ದಿಯಿದು ಎಂದು ವ್ಯಂಗ್ಯವಾಡಿದೆ.

ಮೊನ್ನೆ ಬುಧವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್, 75 ವರ್ಷ ವಯಸ್ಸಿನ ನಂತರ ಪಕ್ಷ ಬಿಡುವ ಬಗ್ಗೆ ಸಂಘದ ಸಿದ್ಧಾಂತಿ ದಿವಂಗತ ಮೊರೋಪಂತ್ ಪಿಂಗ್ಲೆ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.

75 ವರ್ಷಗಳ ಶಾಲು ನಿಮ್ಮ ಮೇಲೆ ಹೊದಿಸಿದರೆ, ನೀವು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದೀರಿ ಮತ್ತು ಹಿಂದೆ ಸರಿದು ಇತರರಿಗೆ ಕೆಲಸ ಮಾಡಲು ಬಿಡಬೇಕು ಎಂದರ್ಥ ಎಂದು ಪಿಂಗ್ಲೆಯವರು ಹೇಳುತ್ತಿದ್ದರು ಎಂದು ಮೋಹನ್ ಭಾಗವತ್ ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರು.

Jairam Ramesh
'ಹಿಂದೆ ಸರಿಯುವ ಸಮಯ': 75 ವರ್ಷಕ್ಕೆ ನಿವೃತ್ತಿ ಕುರಿತು Mohan Bhagwat ಹೇಳಿದ್ದು ಯಾರಿಗೆ?; Video

ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ-ಪ್ರಭಾರಿ ಸಂವಹನ ಜೈರಾಮ್ ರಮೇಶ್, ಬಡ ಪ್ರಶಸ್ತಿ ಬಯಸುವ ಪ್ರಧಾನಿಯವರೇ! ವಿದೇಶ ಪ್ರವಾಸ ಮುಗಿಸಿ ನೀವು ಭಾರತಕ್ಕೆ ಹಿಂತಿರುಗುತ್ತಿರುವ ಸಂದರ್ಭದಲ್ಲಿ ಎಂತಹ ಸುದ್ದಿಯಾಗಿದೆ, ಸೆಪ್ಟೆಂಬರ್ 17ಕ್ಕೆ ನಿಮಗೆ 75 ವರ್ಷ ತುಂಬುತ್ತದೆ ಎಂದು ಸರಸಂಘಚಾಲಕ್ ನೆನಪಿಸಿದ್ದಾರೆ ಎಂದು ಮೋದಿಯವರ ಕಾಲೆಳೆದಿದ್ದಾರೆ.

ಆದರೆ ಪ್ರಧಾನ ಮಂತ್ರಿಗಳು ಸರಸಂಘಚಾಲಕರಿಗೆ ನಿಮಗೆ ಕೂಡ ಸೆಪ್ಟೆಂಬರ್ 11ಕ್ಕೆ 75 ವರ್ಷ ತುಂಬುತ್ತದೆ ಎಂದು ಹೇಳಬಹುದು! ಒಂದು ಬಾಣ, ಎರಡು ಗುರಿಗಳು!" ಅವರು ಜೈರಾಂ ರಮೇಶ್ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com