
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿಗೆ TNIE ಗೆ ನೀಡಿದ ಸಂದರ್ಶನದಲ್ಲಿ ನೀಡಿದ ಹೇಳಿಕೆಗಳನ್ನು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ತಳ್ಳಿ ಹಾಕಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ತೆರಿಗೆ ಹಂಚಿಕೆಯಡಿ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಅನುದಾನವನ್ನು ಹೆಚ್ಚಿಸಲಾಗಿದೆ ಎಂಬ ಹೇಳಿಕೆ ಸತ್ಯವಲ್ಲ ಎಂದಿದ್ದಾರೆ.
"ಇದು ರಾಜ್ಯಗಳಿಗೆ ಸೇರಿದ್ದು. ಅದರಲ್ಲಿ ನಂಬರ್ 1, ಯಾರಿಗೂ ಹೆಚ್ಚಿನ ಅನುದಾನ ಕೊಡುತ್ತಿಲ್ಲ. ನಿಮ್ಮ ಹಣವನ್ನು ವರ್ಗಾಯಿಸುತ್ತಿಲ್ಲ. ಅವರಲ್ಲಿ ಕೆಲವರು ಆಡಳಿತ ಪಕ್ಷಕ್ಕೆ ಸೇರಿದವರಲ್ಲ. ಅವರು ಇಲ್ಲಿ ಕಿಂಗ್ ಅಲ್ಲ. ನಂಬರ್ 2, ಸೆಸ್ ಮತ್ತು ಸರ್ಚಾರ್ಜ್ ನ್ನು ಕೇಂದ್ರ ಸರ್ಕಾರವೇ ವಿಧಿಸುತ್ತದೆ. ಕಳೆದ 11 ವರ್ಷಗಳಲ್ಲಿ ಸೆಸ್ ಮತ್ತು ಸರ್ಚಾರ್ಜ್ ನ್ನು ಶೇ.600 ರಷ್ಟು ಹೆಚ್ಚಿಸಲಾಗಿದೆ ಎಂದು ಚಕ್ರವರ್ತಿ ತಿಳಿಸಿದರು.
ಸೆಸ್ ಮತ್ತು ಸರ್‌ಚಾರ್ಜ್‌ಗಳ ಅರ್ಥವೇನು? ಎಂದು ಪ್ರಶ್ನಿಸಿದ ಪ್ರವೀಣ್ ಚಕ್ರವರ್ತಿ, ನಾನು ಆ ಹಣವನ್ನು ಕೇಂದ್ರ ಸರ್ಕಾರಕ್ಕೆ ಮಾತ್ರ ಇಡುತ್ತೇನೆ ಮತ್ತು ಅದನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬುದು ಇದರರ್ಥ. ಆದ್ದರಿಂದ ಅವರು ರಾಜ್ಯಗಳಿಗೆ ಕಾನೂನುಬದ್ಧವಾಗಿ ಸೇರಿಬೇಕಾದ ಹಣ ನೀಡುವ ಬದಲು ಹೆಚ್ಚು ಹಣವನ್ನು ತಮಗಾಗಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ಅಮಿತ್ ಶಾ ಹೇಳಿದ್ದು ಏನು? ಮೋದಿ ಸರ್ಕಾರದ ಅವಧಿಯಲ್ಲಿ ತೆರಿಗೆ ಹಂಚಿಕೆಯಡಿ ಅ ಐದು ರಾಜ್ಯಗಳಿಗೆ ಒಟ್ಟು ರೂ. 3,55,466 ಕೋಟಿಗಳಿಂದ 10,96,754 ಕೋಟಿ ರೂ.ಗಳಿಗೆ ಅಂದರೆ ಶೇ. 209 ರಷ್ಟು ಏರಿದೆ ಎಂದು ಅಮಿತ್ ಶಾ ಹೇಳಿದ್ದರು. ಅನುದಾನವನ್ನು ಈಗ ರೂ.9,38,518 ಕೋಟಿಗೆ ಹೆಚ್ಚಿಸಲಾಗಿದೆ. ಇದು ಯುಪಿಎ ಅವಧಿಯಲ್ಲಿ ರೂ. 2,18,053 ಕೋಟಿ ಆಗಿತ್ತು. ಅಂದರೆ ರೂ. 330 ರಷ್ಟು ಏರಿಕೆಯಾಗಿದೆ. ತಮಿಳುನಾಡಿಗೆ ತೆರಿಗೆ ಹಂಚಿಕೆಯಲ್ಲಿ ರೂ 94,977 ಕೋಟಿಯಿಂದ ರೂ 2.92 ಲಕ್ಷ ಕೋಟಿಗೆ ಏರಿಕೆಯಾಗಿದೆ ಅಂದರೆ ಶೇಕಡಾ 207 ರಷ್ಟು ಮತ್ತು ಅನುದಾನದಲ್ಲಿ ರೂ. 57,924 ಕೋಟಿ ರೂ.ಗಳಿಂದ 2.55 ಲಕ್ಷ ಕೋಟಿ ರೂ.ಗೆ ಅಂದರೆ ಶೇ.342 ರಷ್ಟು ಏರಿಕೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದರು.
ತೆಲಂಗಾಣ ಜನಗಣತಿ ಕುರಿತು ಹೇಳಿದ್ದ ಅಮಿತ್ ಶಾ, ತೆಲಂಗಾಣದಲ್ಲಿ ಏನು ಸರ್ವೇ ಮಾಡುತ್ತಿದ್ದಾರೆ. ನಾವು ಜನಗಣತಿ ಮಾಡುತ್ತಿದ್ದೇವೆ. ಅದರಲ್ಲಿ ವ್ಯತ್ಯಾಸ ಇದೆ. ಕರ್ನಾಟಕದಲ್ಲಿಯೂ ಜಾತಿ ಗಣತಿಗೆ ಪ್ರಯತ್ನಿಸಿದರೆ ಆದರೆ ಅದನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರವೀಣ್ ಚಕ್ರವರ್ತಿ, ರಾಜ್ಯದಲ್ಲಿ ಜಾತಿ ಸಮೀಕ್ಷೆಯಾಗಿದೆ. ಜನಗಣತಿ ಅಲ್ಲ ಎಂದು ಅವರು ಹೇಳಿದ್ದಾರೆ. ತೆಲಂಗಾಣದ 97.5% ಜನರು ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ್ದಾರೆ ಎಂಬ ಡೇಟಾ ವ್ಯತ್ಯಾಸವನ್ನು ಶಾ ಅರ್ಥ ಮಾಡಿಕೊಂಡಿಲ್ಲ. ಯಾವುದೇ ವ್ಯಾಖ್ಯಾನದಿಂದ ಇದನ್ನು ಜನಗಣತಿ ಎಂದು ಕರೆಯಬಹುದಾಗಿದೆ. ಗೃಹ ಸಚಿವರಿಗೆ ಇದು ಅರ್ಥವಾಗದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ ಎಂದರು.
ತೆಲಂಗಾಣದಲ್ಲಿ 97.5% ಜನರು, ಕುಟುಂಬಗಳು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಜನಗಣತಿ ಎನ್ನುತ್ತಾರೆ. 9 ಲಕ್ಷ ಜನರು ಪ್ರತಿಕ್ರಿಯಿಸಿದಾಗ ಅದು ಸ್ಯಾಂಪಲ್ ಸರ್ವೆಯಾಗುತ್ತದೆ. ಶೇ. 9 ರಷ್ಟು ಜನರು ಪ್ರತಿಕ್ರಿಯಿಸಿದಾಗ ಅದು ಸ್ಯಾಂಪಲ್ ಸರ್ವೇ ಆಗುತ್ತದೆ. ಸರಿ. ಶೇ.97 ರಷ್ಟು ಜನರು ಪ್ರತಿಕ್ರಿಯಿಸಿದಾಗ ಅದು ಜನಗಣತಿ ಆಗುತ್ತದೆ ಎಂದು ಹೇಳಿದರು.
Advertisement