ನಾನು ಸೋತಂತೆ ಭಾಸವಾಗುತ್ತಿದೆ: ನಾಪತ್ತೆಯಾಗಿದ್ದ ತ್ರಿಪುರಾದ ಡಿಯು ವಿದ್ಯಾರ್ಥಿನಿ ಮೃತದೇಹ ಫ್ಲೈಓವರ್ ಅಡಿಯಲ್ಲಿ ಪತ್ತೆ

ತ್ರಿಪುರಾ ಮೂಲದ ವಿದ್ಯಾರ್ಥಿನಿಯ ಶವ ಗೀತಾ ಕಾಲೋನಿ ಫ್ಲೈಓವರ್ ಅಡಿಯಲ್ಲಿ ಪತ್ತೆಯಾಗಿದೆ.
Sneha Debnath
ಸ್ನೇಹಾ ದೇಬ್ನಾಥ್
Updated on

ನವದೆಹಲಿ: ಕಾಣೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾಳ ಶವ ಪತ್ತೆಯಾಗಿದೆ. ತ್ರಿಪುರಾ ಮೂಲದ ವಿದ್ಯಾರ್ಥಿನಿಯ ಶವ ಗೀತಾ ಕಾಲೋನಿ ಫ್ಲೈಓವರ್ ಅಡಿಯಲ್ಲಿ ಪತ್ತೆಯಾಗಿದೆ. 19 ವರ್ಷದ ಸ್ನೇಹಾ ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದು ಕೊನೆಯ ಬಾರಿಗೆ ಜುಲೈ 7 ರಂದು ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು. ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ನಾಪತ್ತೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ದೆಹಲಿಯ ಎರಡು ಜಿಲ್ಲೆಗಳ 100ಕ್ಕೂ ಹೆಚ್ಚು ಪೊಲೀಸರ ತಂಡ ವಿದ್ಯಾರ್ಥಿನಿಗಾಗಿ ಹುಡುಕಾಟ ನಡೆಸಿತ್ತು.

ಸ್ನೇಹಾಳ ಪೋಷಕರು ಮಗಳ ಶವವನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೀತಾ ಕಾಲೋನಿ ಫ್ಲೈಓವರ್ ಅಡಿಯಲ್ಲಿ ಪತ್ತೆಯಾಗಿರುವ ಶವ ಸ್ನೇಹಾ ದೇಬ್ನಾಥ್ ಅವರದ್ದಾಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ನೇಹಾ ದೇಬ್ನಾಥ್ ಅವರ ಮನೆಯಿಂದ ದೊರೆತ ಆತ್ಮಹತ್ಯೆ ಪತ್ರದಲ್ಲಿ ಆಕೆ ಮನನೊಂದಿದ್ದರು ಎಂದು ಮಾತ್ರ ಹೇಳಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಕೊನೆಯ ಬಾರಿಗೆ ಸಿಗ್ನೇಚರ್ ಸೇತುವೆಯಲ್ಲಿ ಕಾಣಿಸಿಕೊಂಡಿದ್ದಾಳೆ. ದಕ್ಷಿಣ ದೆಹಲಿಯ ಪರ್ಯಾವರಣ್ ಕಾಂಪ್ಲೆಕ್ಸ್ ನಿವಾಸಿ ಸ್ನೇಹಾ ದೇಬ್ನಾಥ್ ಜುಲೈ 7 ರಂದು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಆಕೆಯ ನಾಪತ್ತೆಯ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದ್ದು, ಹುಡುಕಾಟ ನಡೆದಿತ್ತು. ಪೊಲೀಸರ ಪ್ರಕಾರ, ಸ್ನೇಹಾ ಯಮುನಾ ನದಿಯ ಸೇತುವೆಯಿಂದ ಜಿಗಿಯುವ ಉದ್ದೇಶವನ್ನು ವ್ಯಕ್ತಪಡಿಸಿರುವ ಟಿಪ್ಪಣಿಯನ್ನು ಬಿಟ್ಟಿದ್ದಾಳೆ.

ತಾಂತ್ರಿಕ ಕಣ್ಗಾವಲು ಮೂಲಕ ಸ್ನೇಹಾಳ ಚಲನವಲನಗಳನ್ನು ಪತ್ತೆಹಚ್ಚಿದ ಪೊಲೀಸರು ಕಾಣೆಯಾಗುವ ಮೊದಲು ಅವಳು ಸಿಗ್ನೇಚರ್ ಸೇತುವೆಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಳು ಎಂದು ದೃಢಪಡಿಸಿದರು. ಆಕೆಯನ್ನು ಸ್ಥಳದಲ್ಲಿ ಇಳಿಸಿದ ಟ್ಯಾಕ್ಸಿ ಚಾಲಕ ಕೂಡ ಇದನ್ನು ದೃಢಪಡಿಸಿದರು. ಸೇತುವೆಯ ಮೇಲೆ ಹುಡುಗಿಯೊಬ್ಬಳು ನಿಂತಿದ್ದು ನೋಡಿದ್ದೇ. ನಂತರ ಆಕೆ ಸ್ಥಳದಿಂದ ಕಣ್ಮರೆಯಾದಳು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Sneha Debnath
ವಿದ್ಯಾರ್ಥಿನಿ ಜೀವನ್ಮರಣ ಹೋರಾಟ; ನನ್ನ ಮಗಳಿಗೆ ಲೈಂಗಿಕ ಕಿರುಕುಳ ದೂರನ್ನು ಹಿಂಪಡೆಯಲು ಒತ್ತಡ: ತಂದೆ ಆಕ್ರಂದನ

ಇದರ ನಂತರ, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸ್ ಘಟಕಗಳ ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇದನ್ನು ವಿಶೇಷವಾಗಿ ನಿಗಮ್ ಬೋಧ್ ಘಾಟ್‌ನಿಂದ ನೋಯ್ಡಾವರೆಗಿನ ಪ್ರದೇಶಗಳಲ್ಲಿ ನಡೆಸಲಾಯಿತು. ಜುಲೈ 7 ರ ಬೆಳಿಗ್ಗೆ ಸ್ನೇಹಾ ತನ್ನ ಆಪ್ತ ಸ್ನೇಹಿತರಿಗೆ ಇಮೇಲ್ ಮತ್ತು ಮೆಸೇಜಿಂಗ್ ಆಪ್‌ಗಳ ಮೂಲಕ ಸಂದೇಶಗಳನ್ನು ಕಳುಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸ್ನೇಹಾ ಅಸಮಾಧಾನಗೊಂಡಿದ್ದು ಭಾವನಾತ್ಮಕವಾಗಿ ನೊಂದಿದ್ದಾಳೆ ಎಂದು ಆಕೆಯ ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com