
ರಾಂಚಿ: ಜಾರ್ಖಂಡ್‌ನಲ್ಲಿ ಹವಾಮಾನ ವೈಪರೀತ್ಯದಿಂದ ಭಾನುವಾರ ಭಾರಿ ಮಳೆಯಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಹಲವರು ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ.
ಗಿರಿದಿಹ್ ಮತ್ತು ದುಮ್ಕಾ ಜಿಲ್ಲೆಗಳು ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಎರಡೂ ಜಿಲ್ಲೆಗಳಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಚಾರದಲ್ಲಿ, ಗೀತಾ ದೇವಿ ಮತ್ತು ಅನಿತಾ ದೇವಿ ಸಿಡಿಲಿನಿಂದ ಸಾವನ್ನಪ್ಪಿದರೆ, ಸವಿತಾ ದೇವಿ ಅವರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಗಿರಿದಿಹ್‌ನಲ್ಲಿ, ಮಾಧ್ವಾಡಿ ಗ್ರಾಮದ 18 ವರ್ಷದ ದಸ್ತಗೀರ್ ಆಲಂ ಮತ್ತು ಗೋರಾ ದಿಹ್ ಗ್ರಾಮದ 50 ವರ್ಷದ ಝಾರಿ ಯಾದವ್ ಕೂಡ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಅದೇ ಜಿಲ್ಲೆಯಲ್ಲಿ ಅಶೋಕ್ ಮಹ್ತೊ ಮತ್ತು ಅವರ ಪತ್ನಿ ಪ್ರಮೀಳಾ ದೇವಿ ಗಾಯಗೊಂಡಿದ್ದಾರೆ.
ಪಶ್ಚಿಮ ಸಿಂಗ್‌ಭೂಮ್‌ನಲ್ಲಿ, ಭರಿಧಾ ಗ್ರಾಮದ 14 ವರ್ಷದ ವಿದ್ಯಾರ್ಥಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಲೋಹರ್ದಗಾದಲ್ಲಿ ಇಬ್ಬರು, ಗುಮ್ಲಾದಲ್ಲಿ ಒಬ್ಬರು ಮತ್ತು ರಾಜಧನ್ವಾರ್‌ನಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ, ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಜುಲೈ 16 ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಮತ್ತು ಮಿಂಚಿನ ಎಚ್ಚರಿಕೆಯನ್ನು ನೀಡಿದೆ.
Advertisement