
ನವದೆಹಲಿ: ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ ಅವರು ಕೆಟ್ಟ ಪ್ರಯಾಣ ಅನುಭವದ ನಂತರ ಬ್ರಿಟಿಷ್ ಏರ್ ವೇಸ್ ವಿರುದ್ಧ ಕಿಡಿಕಾರಿದ್ದಾರೆ.
ಸರಿಯಾಗಿ ಸ್ಪಂದಿಸದ ಸಿಬ್ಬಂದಿ, ಲಗ್ಗೇಜು ವಿಳಂಬ ಮತ್ತಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು, ಬ್ರಿಟಿಷ್ ಏರ್ ವೇಸ್ ಪ್ರಯಾಣ ಅತ್ಯಂತ ಕೆಟ್ಟ ಅನುಭವ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ದುರಹಂಕಾರದ ಸಿಬ್ಬಂದಿ ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಬ್ಯಾಗೇಜ್ ಗಾಗಿ 84 ಗಂಟೆಗಳ ವಿಳಂಬವಾಗಿದೆ. ಇದು ತೀರಾ ನಿರಾಶಾದಾಯಕವಾಗಿದೆ. ಇಮೇಲ್‌ಗಳು, ಫಾರ್ಮ್‌ಗಳು ಎಲ್ಲವನ್ನೂ ಮುಗಿಸಿ ಸಲ್ಲಿಸಲಾಗಿದೆ. ಇವೆಲ್ಲಾ ಮಾಡಿ ಎರಡಕ್ಕಿಂತ ಹೆಚ್ಚು ದಿನ ಆಗಿದೆ. ಆದಾಗ್ಯೂ, ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
ವಿಮಾನಯಾನ ಸಂಸ್ಥೆಯು ಈ ರೀತಿ ಗ್ರಾಹಕರನ್ನು ನಡೆಸಿಕೊಳ್ಳುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಅತ್ಯಂತ ಕೆಟ್ಟ ಪ್ರಯಾಣ ಅನುಭವದೊಂದಿಗೆ ನಾನು ಮರಳಿರುವುದಾಗಿ ಅವರು ಕಿಡಿಕಾರಿದ್ದಾರೆ. ಈ ಫೋಸ್ಟ್ ವೈರಲ್ ಆಗಿದೆ.
ಈ ಫೋಸ್ಟ್ ಗೆ ಪ್ರತಿಕ್ರಿಯಿಸಿರುವ ಎಕ್ಸ್ ಬಳಕೆದಾರರೊಬ್ಬರು, ಬ್ರಿಟಿಷ್ ಏರ್ ವೇಸ್ ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ಏರ್ ಲೈನ್ಸ್ ಆಗಿದೆ. ನೀವು ಒಂದು ವೇಳೆ ಯುರೋಪ್ ಗೆ ಹೋಗುವುದಾರೆ ಕತಾರ್ ಏರ್ ವೇಸ್ ಅಥವಾ ಎಮಿರೆನ್ಸ್ ನಲ್ಲಿ ಪ್ರಯಾಣಿಸಿ, ಏಷ್ಯಾ ದೇಶಗಳಿಗೆ ತೆರಳಬೇಕಾದರೆ ಸಿಂಗಾಪುರ ಏರ್ ಲೈನ್ಸ್ ಅಥವಾ ಕಾಥೈ ಫೆಸಿಪಿಕ್ ಏರ್ ಲೈನ್ಸ್ ನಲ್ಲಿ ತೆರಳಿ ಎಂದು ಸಲಹೆ ನೀಡಿದ್ದಾರೆ.
Advertisement