
ಬಿರ್ ಭೂಮ್: ಪಶ್ಚಿಮ ಬಂಗಾಳದ ಬಿರ್ ಭೂಮ್ ಜಿಲ್ಲೆಯಲ್ಲಿ 42 ವರ್ಷದ ತೃಣಮೂಲ ಕಾಂಗ್ರೆಸ್ (TMC)ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಕೊಮಾರ್‌ಪುರ ಗ್ರಾಮದ ಶ್ರೀನಿಧಿಪುರ ಪಂಚಾಯತ್ ಅಧ್ಯಕ್ಷ ಪಿಯೂಷ್ ಘೋಷ್ ಅವರ ನಿವಾಸದ ಬಳಿ ಭಾನುವಾರ ಮುಂಜಾನೆ ಬಂದೂಕುಧಾರಿಗಳು ಗುಂಡು ಹಾರಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತರಿಗೆ ಆಪ್ತರಾದವರೇ ಕೊಲೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ವ್ಯವಹಾರಕ್ಕೆ ಸಂಬಂಧಿಸಿದ ವಿವಾದಗಳ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನಡೆದ ಮೂರನೇ ಟಿಎಂಸಿ ನಾಯಕನ ಹತ್ಯೆಯಾಗಿದೆ. ಗುರುವಾರ ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗಾರ್‌ನ ಟಿಎಂಸಿ ಸ್ಥಳೀಯ ಸಮಿತಿ ಅಧ್ಯಕ್ಷ ರಜ್ಜಕ್ ಖಾನ್ ಹತ್ಯೆಯಾಗಿತ್ತು. ಟಿಎಂಸಿ ಪಂಚಾಯತ್ ಮಟ್ಟದ ಕಾರ್ಯಕರ್ತ ಅಬುಲ್ ಕಲಾಂ ಆಜಾದ್ ಜುಲೈ 10 ರಂದು ಮಾಲ್ಡಾದ ಇಂಗ್ಲಿಷ್ ಬಜಾರ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗ ಹತ್ಯೆಗೀಡಾಗಿದ್ದರು.
Advertisement