
ಲಖನೌ: ಉತ್ತರ ಪ್ರದೇಶದ ಬೃಹತ್ ಮತಾಂತರ ಜಾಲದ ಕೇಂದ್ರಬಿಂದುವಾಗಿರುವ ಸ್ವಯಂಘೋಷಿತ ದೇವಮಾನವ ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಪಾಕಿಸ್ತಾನದ ISI ಜೊತೆಗೆ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ನೇಪಾಳದ ಕಠ್ಮಂಡುವಿಗೆ ತೆರಳಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಇದು ಬಾಬಾ ಅವರ ಅಕ್ರಮ ಧಾರ್ಮಿಕ ಮತಾಂತರ ಪ್ರಕರಣ ಮೀರಿದ ಗಂಭೀರ ಆರೋಪವಾಗಿದೆ.
ISI ಏಜೆಂಟರ ಜೊತೆಗೆ ಮತಾಂತರಗೊಂಡ ಹಿಂದೂ ಮಹಿಳೆಯರ ಮದುವೆ: ಆರ್ಥಿಕವಾಗಿ ದುರ್ಬಲವಾಗಿರುವ ಹಿಂದೂ ಕುಟುಂಬಗಳನ್ನು ಮತಾಂತರಕ್ಕೆ ಸೆಳೆಯುತ್ತಿದ್ದ ಬಾಬಾ, ISI ಜೊತೆಗೆ ನೇರ ಸಂಪರ್ಕ ಹೊಂದಲು ಯೋಜಿಸುತ್ತಿದ್ದ ಎನ್ನಲಾಗಿದೆ. ಇಸ್ಲಾಂಗೆ ಮತಾಂತರಗೊಂಡ ಹಿಂದೂ ಮಹಿಳೆಯರನ್ನು ನೇಪಾಳದ ಐಎಸ್‌ಐ ಏಜೆಂಟ್‌ಗಳು ಮತ್ತು ಸ್ಲೀಪರ್ ಸೆಲ್ ಕಾರ್ಯಕರ್ತರೊಂದಿಗೆ ವಿವಾಹ ಮಾಡಿಸಲು ಬಯಸಿದ್ದ ಎಂದು ಮೂಲಗಳು ಹೇಳಿವೆ.
ಕಠ್ಮಂಡುವಿನಲ್ಲಿ ISI ಏಜೆಂಟರ ಸಭೆ: ಭದ್ರತಾ ಏಜೆನ್ಸಿಗಳು ಛಂಗೂರ್ ಬಾಬಾ ಮತ್ತು ಅವರ ಇಬ್ಬರು ನಿಕಟವರ್ತಿಗಳಾದ ನೀತು ಮತ್ತು ನವೀನ್ ಅವರನ್ನು ಬಂಧಿಸಿದ್ದಾರೆ. ಇದರಿಂದಾಗಿ ಸಂಭಾವ್ಯ ರಾಷ್ಟ್ರೀಯ ಭದ್ರತಾ ವಿಪತ್ತು ಒಂದು ತಪ್ಪಿದಂತಾಗಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ.
ಕಠ್ಮಂಡುವಿನ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಇತ್ತೀಚಿಗೆ ISI ಏಜೆಂಟರ ಸಭೆ ನಡೆದಿತ್ತು. ಐಎಸ್‌ಐ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ನಿಯೋಗವೂ ಭಾಗವಹಿಸಿತ್ತು. ಪಾಕಿಸ್ತಾನದ ನಿಯೋಗ ಭಾರತ-ನೇಪಾಳ ಗಡಿ ಪ್ರದೇಶಕ್ಕೂ ಭೇಟಿ ನೀಡಿತ್ತು ಎಂದು ವರದಿಯಾಗಿದೆ.
ಬಾಬಾನ ಮುಂದಿನ ಯೋಜನೆ ಏನಾಗಿತ್ತು? ನೇಪಾಳ ಮೂಲದ ಧಾರ್ಮಿಕ ಮುಖಂಡರೊಬ್ಬರ ಮೂಲಕ ಪಾಕಿಸ್ತಾನಿ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಸಾಧಿಸಲು ಛಂಗೂರ್ ಪ್ರಯತ್ನಿಸುತ್ತಿದ್ದ. ಆದರೆ ಭದ್ರತಾ ನಿರ್ಬಂಧಗಳ ಕಾರಣದಿಂದಾಗಿ ಅವರು ಕಚೇರಿ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ಹೇಳಿವೆ. ಉತ್ತರ ಪ್ರದೇಶದ ಬರ್ಹ್ನಿಯಲ್ಲಿ ನೆಲೆ (Base) ಸ್ಥಾಪಿಸಲು ಛಂಗೂರ್ ಪ್ರಯತ್ನಿಸುತ್ತಿದ್ದರು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ರೋಹಿಂಗ್ಯಾ ನಿರಾಶ್ರಿತರನ್ನು ತರೆ ತಂದು ಅವರನ್ನು ಹಿಂದೂಗಳೆಂದು ತಪ್ಪಾಗಿ ತೋರಿಸಿ, ಇಸ್ಲಾಂಗೆ ಪರಿವರ್ತಿಸುವುದು ಆತನ ಮುಂದಿನ ಯೋಜನೆಯಾಗಿತ್ತು ಎಂದು ವರದಿಗಳು ಹೇಳಿವೆ.
ಕರ್ನಾಟಕಕ್ಕೂ ಹರಡಿದ್ದ ಮತಾಂತರದ ಜಾಲ: ಧಾರ್ಮಿಕ ಮತಾಂತರದ ಜಾಲ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳು ಸೇರಿದಂತೆ ಅನೇಕ ಭಾರತೀಯ ರಾಜ್ಯಗಳಲ್ಲಿ ಹರಡಿದೆ. ನೇಪಾಳದ ಗಡಿಯ ಸಾಮೀಪ್ಯದಿಂದಾಗಿ ಬಲರಾಮ್‌ಪುರದ ಉತ್ರೌಲಾ ಪ್ರದೇಶವನ್ನು ಈ ಕಾರ್ಯಾಚರಣೆಗಳಿಗೆ ಕೇಂದ್ರ ಕೇಂದ್ರವಾಗಿ ಆಯ್ಕೆ ಮಾಡಲಾಗಿತ್ತು.
ರೂ. 500 ಕೋಟಿಗೂ ಹೆಚ್ಚು ವಿದೇಶಿ ಫಂಡ್: ಇಸ್ಲಾಮಿಕ್ ಡೆವಲಪ್‌ಮೆಂಟ್ ಬ್ಯಾಂಕ್ (ಸೌದಿ ಅರೇಬಿಯಾ), ಮುಸ್ಲಿಂ ವರ್ಲ್ಡ್ ಲೀಗ್, ದಾವತ್-ಎ-ಇಸ್ಲಾಮಿ ಮತ್ತು ಇಸ್ಲಾಮಿಕ್ ಯೂನಿಯನ್ ಆಫ್ ನೇಪಾಳ ಸೇರಿದಂತೆ ಅಂತರಾಷ್ಟ್ರೀಯ ಇಸ್ಲಾಮಿಕ್ ಸಂಸ್ಥೆಗಳೊಂದಿಗೆ ಚಂಗೂರ್ ಸಂಪರ್ಕವನ್ನು ಹೊಂದುವ ಮೂಲಕ ರೂ. 500 ಕೋಟಿಗೂ ಹೆಚ್ಚು ವಿದೇಶಿ ಹಣ ಪಡೆದಿರುವುದಾಗಿ ವರದಿಯಾಗಿದೆ.
ಬಾಬಾ ಆಪ್ತನ ಅಚ್ಚರಿ ಹೇಳಿಕೆಗಳು: ನನ್ನ ಹೆಸರಿನಲ್ಲಿ ಬಾಬಾ ಬಲವಂತದಿಂದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಕಬಳಿಸಿದ್ದು, ಆತನ ನೂರಾರು ಕೋಟ್ಯಂತರ ಮೌಲ್ಯದ ಆರ್ಥಿಕ ವ್ಯವಹಾರದಲ್ಲಿ ಪಾಲುದಾರನಾಗಿರುವುದಾಗಿ ಬಾಬಾನ ಆಪ್ತ ಮೊಹಮ್ಮದ್ ಖಾನ್ ಕೆಲವು ಸುದ್ದಿವಾಹಿನಿಗಳೊಂದಿಗೆ ಹೇಳಿಕೊಂಡಿದ್ದಾನೆ. ಬಾಬಾನ ಬಂಧನದ ನಂತರ ಆತನ ಗ್ಯಾಂಗ್ ಸದಸ್ಯರು ದೊಡ್ಡ ಮಟ್ಟದ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆತ ಮಾಹಿತಿ ನೀಡಿದ್ದಾನೆ.
ಸುಮಾರು 1,500 ಹಿಂದೂ ಮಹಿಳೆಯರು ಇಸ್ಲಾಂಗೆ ಮತಾಂತರ: ಒತ್ತಾಯ ಮತ್ತು ಪ್ರಚೋದನೆಯ ಮೂಲಕ ಸುಮಾರು 1,500 ಹಿಂದೂ ಮಹಿಳೆಯರು ಮತ್ತು ಸಹಸ್ರಾರು ಮುಸ್ಲಿಂಯೇತರ ಮಹಿಳೆಯರನ್ನು ಬಾಬಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದರು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಭ್ರಷ್ಟಾಚಾರ ವಿರೋಧಿ ಪಡೆ ತಿಳಿಸಿದೆ.
Advertisement