

ಭುವನೇಶ್ವರ: ಭುವನೇಶ್ವರದ ಎಫ್‌ಎಂ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಖಂಡಿಸಿ ಒಡಿಶಾ ಸೆಕ್ರೆಟರಿಯೇಟ್ ಹೊರಗೆ ವಿರೋಧ ಪಕ್ಷ ಬಿಜು ಜನತಾ ದಳ ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು.
ಒಡಿಶಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವ ಬಿಜೆಡಿ, ಬಾಲಸೋರ್ ಪಟ್ಟಣವನ್ನು ಬಂದ್ ಮಾಡಿದೆ. ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಭುವನೇಶ್ವರದಲ್ಲಿ, ನೂರಾರು ಬಿಜೆಡಿ ಕಾರ್ಯಕರ್ತರು ಮಾಸ್ಟರ್ ಕ್ಯಾಂಟೀನ್ ಚೌಕದಿಂದ ರಾಜ್ಯ ಸೆಕ್ರೆಟರಿಯೇಟ್ ಕಡೆಗೆ ಮೆರವಣಿಗೆ ನಡೆಸಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಮತ್ತು ಜಲಫಿರಂಗಿಗಳನ್ನು ಬಳಸಬೇಕಾಯಿತು. ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಅವರು ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದರು.
ಪ್ರತಿಭಟನೆಯ ನಂತರ ನೂರಾರು ಬಿಜೆಡಿ ಕಾರ್ಯಕರ್ತರನ್ನು ಸುತ್ತುವರೆದರು. ತನ್ನ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಈ ಮಧ್ಯೆ, ಮೋಹನ್ ಚರಣ್ ಮಾಝಿ ನೇತೃತ್ವದ ಸರ್ಕಾರ ಇಂದು ಸಂಜೆ ತನ್ನ ಸಚಿವ ಸಂಪುಟ ಸಭೆಯನ್ನು ಕರೆದಿದೆ. ಎಫ್‌ಎಂ ಕಾಲೇಜು ಘಟನೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕಾಂಗ್ರೆಸ್ ಮತ್ತು ಏಳು ಎಡ ಪಕ್ಷಗಳು ನಾಳೆ ಗುರುವಾರ ಒಡಿಶಾ ಬಂದ್‌ಗೆ ಕರೆ ನೀಡಿವೆ. ಬಂದ್ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆಯವರೆಗೆ ಮುಂದುವರಿಯಲಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ. ಬಾಲಸೋರ್ ಪಟ್ಟಣದ ಹೊರತಾಗಿ, ಜಲೇಶ್ವರ, ಬಸ್ತಾ, ಸೊರೊ, ಬಲಿಯಾಪಾಲ್ ಮತ್ತು ಭೋಗ್ರೈ ಮುಂತಾದ ಸ್ಥಳಗಳಲ್ಲಿ ಬಿಜೆಡಿ ಕಾರ್ಯಕರ್ತರು ಬೆಳಗ್ಗೆಯಿಂದ ಪ್ರದರ್ಶನಗಳನ್ನು ನಡೆಸುತ್ತಿದ್ದರು.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಿಜೆಡಿ ನಾಯಕ ದೇಬಿ ಪ್ರಸಾದ್ ಮಿಶ್ರಾ ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ಸರ್ಕಾರ ನ್ಯಾಯಾಂಗ ತನಿಖೆಗೆ ನೀಡುವವರೆಗೂ ಪಕ್ಷವು ರಾಜ್ಯಾದ್ಯಂತ ಆಂದೋಲನವನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಮತ್ತು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದರು. ಕಾಲೇಜು ಪ್ರಾಂಶುಪಾಲ ಮತ್ತು ಆರೋಪಿ ಪ್ರಾಧ್ಯಾಪಕರನ್ನು ಪೊಲೀಸರು ಬಂಧಿಸಿದ್ದಾರೆ.
Advertisement