ನಗದು ಪತ್ತೆ ವಿವಾದ: ತನಿಖಾ ವರದಿ ವಿರುದ್ಧ ನ್ಯಾಯಮೂರ್ತಿ ಯಶವಂತ್ ವರ್ಮಾ ಸುಪ್ರೀಂ ಕೋರ್ಟ್ ಮೊರೆ

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ತಮ್ಮ ರಿಟ್ ಅರ್ಜಿಯಲ್ಲಿ, ಆಂತರಿಕ ಸಮಿತಿಯು ಪೂರ್ವನಿರ್ಧರಿತ ರೀತಿಯಲ್ಲಿ" ವರ್ತಿಸಿದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ನ್ಯಾಯಯುತ ಅವಕಾಶವನ್ನು ನಿರಾಕರಿಸಿದೆ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ವಾದಿಸಿದ್ದಾರೆ.
Justice Yashwant Varma
ನ್ಯಾಯಮೂರ್ತಿ ಯಶವಂತ್ ವರ್ಮಾ
Updated on

ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ವಿರುದ್ಧದ ಅಕ್ರಮ ನಗದು ಸಂಗ್ರಹ ಪ್ರಕರಣದಲ್ಲಿ ಆರೋಪ ಹೊರಿಸಲಾದ ಆಂತರಿಕ ತನಿಖಾ ಸಮಿತಿಯ ವರದಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಮಾಡಿದ ಶಿಫಾರಸನ್ನು ರದ್ದುಗೊಳಿಸುವಂತೆ ಕೂಡ ಕೋರಿದ್ದು, ಶಾಸಕಾಂಗ ಅಧಿಕಾರಗಳ ಮೇಲೆ ನ್ಯಾಯಾಂಗದ ಅತಿಕ್ರಮಣ ಕ್ರಮವೆಂದು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ತಮ್ಮ ರಿಟ್ ಅರ್ಜಿಯಲ್ಲಿ, ಆಂತರಿಕ ಸಮಿತಿಯು ಪೂರ್ವನಿರ್ಧರಿತ ರೀತಿಯಲ್ಲಿ ವರ್ತಿಸಿದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ನ್ಯಾಯಯುತ ಅವಕಾಶವನ್ನು ನಿರಾಕರಿಸಿದೆ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ವಾದಿಸಿದ್ದಾರೆ.

ಸತ್ಯಶೋಧನಾ ತನಿಖೆ ಎಂಬ ಸಮಿತಿಯ ಆದೇಶವನ್ನು ಅಸಮರ್ಥನೀಯವಾಗಿ ಮೊಟಕುಗೊಳಿಸಲಾಗಿದೆ. ಕೇವಲ ಹಣ ಪತ್ತೆ ಯಾವುದೇ ನಿರ್ಣಾಯಕ ಪರಿಹಾರವನ್ನು ಒದಗಿಸುವುದಿಲ್ಲ. ಯಾರ ಹಣ ಮತ್ತು ಎಷ್ಟು ಪತ್ತೆಯಾಗಿದೆ ಎಂಬುದನ್ನು ನಿರ್ಧರಿಸುವುದು ಅತ್ಯಗತ್ಯವಾಗಿದೆ ಎಂದು ಒತ್ತಾಯಿಸಿದ್ದಾರೆ.

Justice Yashwant Varma
Judge ಯಶವಂತ್ ವರ್ಮಾ ನಗದು ವಿವಾದ: ಆಂತರಿಕ ಸಮಿತಿ ವರದಿ ಕೋರಿ ಸಲ್ಲಿಸಿದ್ದ RTI ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್; ಪ್ರಧಾನಿ, ರಾಷ್ಟ್ರಪತಿಗಳಿಗೆ CJI ಪತ್ರ

ಸಮಿತಿಯು ಅಂತಿಮ ವರದಿಯಲ್ಲಿ ನೀಡಿರುವ ಪ್ರಮುಖ ತನಿಖೆಗಳು ಅಸಮರ್ಥನೀಯ ತೀರ್ಮಾನಗಳ ಆಧಾರದ ಮೇಲೆ ಆಗಿದ್ದು, ಸಾಕ್ಷ್ಯಗಳ ಆಧಾರದ ಮೇಲೆ ಅಲ್ಲ ಎಂದು ನ್ಯಾಯಮೂರ್ತಿ ವರ್ಮಾ ಪ್ರತಿಪಾದಿಸಿದ್ದಾರೆ.

ಅವರು ತಮ್ಮ ಪ್ರತಿವಾದದಲ್ಲಿ, ಹೋಲಿಸಬಹುದಾದ ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಆಂತರಿಕ ಕಾರ್ಯವಿಧಾನವು, ಸಂವಿಧಾನಾತ್ಮಕವಾಗಿ ಹೊಂದಿರುವ ಹುದ್ದೆಗಳಿಂದ ನ್ಯಾಯಾಧೀಶರನ್ನು ತೆಗೆದುಹಾಕುವ ಬಗ್ಗೆ ಶಿಫಾರಸು ಮಾಡಲು ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ನ್ಯಾಯಾಂಗಕ್ಕೆ ಅಧಿಕಾರ ನೀಡುವ ಮಟ್ಟಿಗೆ ಸಂಸದೀಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com