
ನವದೆಹಲಿ: ರೈಲಿನಲ್ಲಿ ಕಳಪೆ ಆಹಾರ ಪೂರೈಕೆ, ಸಿಬ್ಬಂದಿಯಿಂದ ಅನುಚಿತ ವರ್ತನೆ ಬಗ್ಗೆ ದೂರುಗಳು ಹೊಸದೇನಲ್ಲಾ. ಆದರೆ, ಇದು ಕೆಲವೊಂದು ಬಾರಿ ಮಿತಿ ಮೀರಿ ಹಿಂಸಾಚಾರಕ್ಕೆ ಕಾರಣವಾಗುತ್ತಿದೆ. ಪ್ರಯಾಣಿಕರು ಇದರ ಮಾತನಾಡಲು ಪ್ರಯತ್ನಿಸಿದಾಗ ಅಥವಾ ದೂರು ನೀಡಲು ಮುಂದಾದರೆ ಹಲ್ಲೆ, ದೌರ್ಜನ್ಯದಂತಹ ಘಟನೆಗಳು ನಡೆಯುತ್ತಿವೆ..
ವೇರವಲ್- ಜಬಲ್ಪುರ್- ಸೋಮನಾಥ್ ಎಕ್ಸ್ ಪ್ರೆಸ್ ರೈಲಿನಲ್ಲಿಯೂ ಇಂತಹುದೇ ಘಟನೆ ನಡೆದಿದೆ. ಆಹಾರ ಮತ್ತು ನೀರಿಗೆ ದುಬಾರಿ ಶುಲ್ಕದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕರೊಬ್ಬರ ಮೇಲೆ ಕೇಟರಿಂಗ್ ಸಿಬ್ಬಂದಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಬಳಕೆದಾರರಾದ @write2divya ಎಂಬುವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆಹಾರ ಮತ್ತು ನೀರಿಗೆ ದುಬಾರಿ ಶುಲ್ಕದ ಬಗ್ಗೆ ಟ್ವಿಟರ್ ಮೂಲಕ ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ. ಆದರೆ ರೈಲ್ವೆ ಸೇವೆ ಗೂಂಡಾಗಳನ್ನು ಕಳುಹಿಸಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದೆ. ಅಶ್ವಿನಿ ವೈಷ್ಣವ್ ಅವರೇ ಭಾರತೀಯ ರೈಲ್ವೆ ಸಂಪೂರ್ಣವಾಗಿ ಹಾಳಾಗಿದೆ. ವಿಡಿಯೋದಲ್ಲಿರುವ ಗೂಂಡಾಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಈ ವೈರಲ್ ಫೋಸ್ಟ್ ಗೆ ಪ್ರತಿಕ್ರಿಯಿಸಿರುವ ರೈಲ್ವೆ ಸೇವಾ, ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಾವು ಯಾವಾಗಲೂ ಪ್ರಯಾಣಿಕರಿಗೆ ನೆರವು ಒದಗಿಸಲು ಸಿದ್ದರಿದ್ದೇವೆ. PNR ಮತ್ತು ಮೊಬೈಲ್ ನಂಬರ್ ಶೇರ್ ಮಾಡಿ ಎಂದು ಸೂಚಿಸಿದೆ.
ಜಬಲ್ಪುರ ವಿಭಾಗೀಯ ರೈಲ್ವೆ ಮ್ಯಾನೇಜರ್ ಅವರು ಘಟನೆ ಬಗ್ಗೆ ಕ್ಷಮೆ ಕೋರಿದ್ದಾರೆ. ಈ ರೈಲಿನಲ್ಲಿ ಹಲ್ಲೆ ನಡೆಸಿದ ಕೇಟರಿಂಗ್ ಸಿಬ್ಬಂದಿ ಗುತ್ತಿಗೆ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
Advertisement