ಜಾರ್ಖಂಡ್: ಜೂನ್ 2025 ವರೆಗೆ 17 ನಕ್ಸಲರ ಹತ್ಯೆ, 197 ಮಾವೋವಾದಿಗಳ ಬಂಧನ

ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಅಧಿಕೃತ ಪ್ರಕಟಣೆಯ ಪ್ರಕಾರ, ವಿವಿಧ ಸ್ಥಳಗಳಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ 17 ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
Representative image
ಸಾಂದರ್ಭಿಕ ಚಿತ್ರ
Updated on

ರಾಂಚಿ: ಮಹತ್ವದ ಸಾಧನೆಯೊಂದರಲ್ಲಿ, ಜಾರ್ಖಂಡ್ ಪೊಲೀಸರು ರಾಜ್ಯಾದ್ಯಂತ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಹಲವಾರು ಕುಖ್ಯಾತ ಮಾವೋವಾದಿ ನಾಯಕರನ್ನು ತಟಸ್ಥಗೊಳಿಸಿದ್ದಾರೆ ಮತ್ತು ಸುಮಾರು 200 ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಅಧಿಕೃತ ಪ್ರಕಟಣೆಯ ಪ್ರಕಾರ, ವಿವಿಧ ಸ್ಥಳಗಳಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ 17 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಮತ್ತು ಜನವರಿಯಿಂದ ಜೂನ್ 2025ರ ನಡುವೆ 197 ಜನರನ್ನು ಬಂಧಿಸಲಾಗಿದೆ.

ಕೊಲ್ಲಲ್ಪಟ್ಟ ಅಥವಾ ಬಂಧಿಸಲ್ಪಟ್ಟವರಲ್ಲಿ ಪ್ರಾದೇಶಿಕ ಕಮಾಂಡರ್‌ಗಳು(RC), ವಲಯ ಸಮಿತಿ ಸದಸ್ಯರು(ZCM), ಉಪ-ವಲಯ ಕಮಾಂಡರ್‌ಗಳು(SZC) ಮತ್ತು ಪ್ರದೇಶ ಕಮಾಂಡರ್‌ಗಳು (AC) ನಂತಹ ಹುದ್ದೆಗಳನ್ನು ಹೊಂದಿರುವ ಉನ್ನತ ಮಾವೋವಾದಿಗಳು ಸೇರಿದ್ದಾರೆ.

Representative image
ಜಾರ್ಖಂಡ್: ನಕ್ಸಲ್‌ ವಿರೋಧಿ ಕಾರ್ಯಾಚರಣೆ ವೇಳೆ ಸಿಡಿಲು ಬಡಿದು CRPF ಅಧಿಕಾರಿ ಸಾವು; ಮೂವರಿಗೆ ಗಾಯ

ಮೃತರಲ್ಲಿ, ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ಕೇಂದ್ರ ಸಮಿತಿ ಸದಸ್ಯ (CCM - ಮಾವೋವಾದಿ) ವಿವೇಕ್ ಅಲಿಯಾಸ್ ಪ್ರಯಾಗ್ ಮಾಂಝಿ; ವಿಶೇಷ ಪ್ರದೇಶ ಸಮಿತಿ (SAC - ಮಾವೋವಾದಿ) ಸದಸ್ಯ ಅರವಿಂದ್ ಯಾದವ್ ಅಲಿಯಾಸ್ ಅಶೋಕ್; ಮತ್ತು 10 ಲಕ್ಷ ರೂ. ಬಹುಮಾನ ಹೊಂದಿದ್ದ ಸಾಹೇಬ್ ರಾಮ್ ಮಾಂಝಿ ಅಲಿಯಾಸ್ ರಾಹುಲ್ ZCM(ಮಾವೋವಾದಿ) ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com