ಜೈಲಿನಲ್ಲಿರುವ Sonam Raghuvanshi: ಕುಟುಂಬ ಸದಸ್ಯರ ಭೇಟಿಯೂ ಇಲ್ಲ, ಕೃತ್ಯಕ್ಕೆ ವಿಷಾದವೂ ಇಲ್ಲ!

ಕೊಲೆ ಆರೋಪಿ ತನ್ನ ಅಪರಾಧ ಅಥವಾ ವೈಯಕ್ತಿಕ ಜೀವನದ ಬಗ್ಗೆ ಜೊತೆಯಲ್ಲಿರುವ ಇನ್ನಿತರ ಕೈದಿಗಳು ಅಥವಾ ಜೈಲು ಆಡಳಿತದೊಂದಿಗೆ ಮಾತನಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
Sonam Raghuvamshi
ಸೋನಮ್ ರಘುವಂಶಿ online desk
Updated on

ಶಿಲ್ಲಾಂಗ್: ಹನಿಮೂನ್ ಗಾಗಿ ಮೇಘಾಲಯಕ್ಕೆ ತೆರಳಿದ್ದಾಗ ತನ್ನ ಪತಿಯನ್ನು ಹತ್ಯೆ ಮಾಡಿದ್ದ ಸೋನಮ್ ರಘುವಂಶಿ ಜೈಲುಪಾಲಾಗಿ ಒಂದು ತಿಂಗಳು ಕಳೆದಿದೆ. ಬಂಧನಕ್ಕೊಳಗಾಗಿ ಇಷ್ಟು ದಿನ ಕಳೆದರೂ ಆಕೆಗೆ ತನ್ನ ಕೃತ್ಯಗಳ ಬಗ್ಗೆ ವಿಷಾದ ಮೂಡಿಲ್ಲ ಅಥವಾ ಅವರ ಕುಟುಂಬ ಸದಸ್ಯರು ಯಾರೂ ಅವರನ್ನು ಭೇಟಿ ಮಾಡಿಲ್ಲ.

ಅಧಿಕಾರಿಗಳ ಪ್ರಕಾರ, ಸೋನಮ್ ಜೈಲಿನಲ್ಲಿರುವ ಪರಿಸರಕ್ಕೆ ಹೊಂದಿಕೊಂಡಿದ್ದಾಳೆ ಮತ್ತು ಇತರ ಮಹಿಳಾ ಕೈದಿಗಳೊಂದಿಗೆ ಚೆನ್ನಾಗಿದ್ದಾರೆ. ಆಕೆ ಪ್ರತಿದಿನ ಬೆಳಿಗ್ಗೆ ನಿಖರವಾದ ಸಮಯಕ್ಕೆ ಎಚ್ಚರಗೊಂಡು ಜೈಲು ಕೈಪಿಡಿಯನ್ನು ಅನುಸರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಆರೋಪಿ ತನ್ನ ಅಪರಾಧ ಅಥವಾ ವೈಯಕ್ತಿಕ ಜೀವನದ ಬಗ್ಗೆ ಜೊತೆಯಲ್ಲಿರುವ ಇನ್ನಿತರ ಕೈದಿಗಳು ಅಥವಾ ಜೈಲು ಆಡಳಿತದೊಂದಿಗೆ ಮಾತನಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಅವರು ಜೈಲು ವಾರ್ಡನ್ ಕಚೇರಿಯ ಬಳಿ ಇದ್ದಾರೆ ಮತ್ತು ಇಬ್ಬರು ವಿಚಾರಣಾಧೀನ ಮಹಿಳಾ ಕೈದಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಿದ್ದಾರೆ.

Sonam Raghuvamshi
Honeymoon Murder case ನಲ್ಲಿ ಸಾಕ್ಷ್ಯ ನಾಶ ಆರೋಪ: ಸೋನಮ್, ಇನ್ನಿತರ ಹಂತರಿಗೆ ಫ್ಲ್ಯಾಟ್ ಬಾಡಿಗೆಗೆ ನೀಡಿದ್ದ ವ್ಯಕ್ತಿ ಬಂಧನ

ಸೋನಮ್‌ಗೆ ಇಲ್ಲಿಯವರೆಗೆ ಜೈಲಿನೊಳಗೆ ಯಾವುದೇ ವಿಶೇಷ ಕೆಲಸವನ್ನು ನಿಯೋಜಿಸಲಾಗಿಲ್ಲ, ಆದರೆ ಅವರಿಗೆ ಹೊಲಿಗೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಇತರ ಕೆಲಸಗಳನ್ನು ಕಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅವರು ಪ್ರತಿದಿನ ಟಿವಿ ನೋಡುವ ಸೌಲಭ್ಯವನ್ನೂ ಹೊಂದಿದ್ದಾರೆ.

ಜೈಲು ನಿಯಮಗಳ ಪ್ರಕಾರ, ಸೋನಮ್‌ಗೆ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಮತ್ತು ಮಾತನಾಡಲು ಅವಕಾಶವಿದೆ, ಆದರೆ ಯಾರೂ ಅವರನ್ನು ಭೇಟಿ ಮಾಡಿಲ್ಲ ಅಥವಾ ಕರೆ ಮಾಡಿಲ್ಲ.

ಶಿಲ್ಲಾಂಗ್ ಜೈಲಿನಲ್ಲಿ ಒಟ್ಟು 496 ಕೈದಿಗಳಿದ್ದು ಈ ಪೈಕಿ 20 ಮಂದಿ ಮಹಿಳೆಯರಿದ್ದಾರೆ. ಕೊಲೆ ಆರೋಪ ಹೊತ್ತಿರುವ ಜೈಲಿನಲ್ಲಿರುವ ಎರಡನೇ ಮಹಿಳಾ ಕೈದಿ ಸೋನಮ್ ಆಗಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವರ ಮೇಲೆ ನಿಗಾ ಇಡಲಾಗುತ್ತಿದೆ.

ಹನಿಮೂನ್ ಕೊಲೆ ಪ್ರಕರಣ

ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾಗಿದ್ದರು. ಒಂಬತ್ತು ದಿನಗಳ ನಂತರ, ಅವರು ಮೇ 20 ರಂದು ಮೇಘಾಲಯದಲ್ಲಿ ತಮ್ಮ ಹನಿಮೂನ್‌ಗೆ ತೆರಳಿದರು. ದಂಪತಿಗಳು ಮೂರು ದಿನಗಳ ಕಾಲ ಈಶಾನ್ಯ ರಾಜ್ಯದಲ್ಲಿ ಸುತ್ತಾಡಿದ್ದರು. ಜೂನ್ 2 ರಂದು ಕಮರಿಯಲ್ಲಿ ರಾಜಾ ಅವರ ದೇಹ ಪತ್ತೆಯಾದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com