
ನವದೆಹಲಿ: ಜಗದೀಪ್ ಧಂಖರ್ ಅವರು ಉಪ ರಾಷ್ಟ್ರಪತಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದು, ಈ ಹಿಂದೆ ಧನ್ ಕರ್ ಅವರಂತೆ ಇಬ್ಬರು ರಾಜೀನಾಮೆ ನೀಡಿದ್ದರು.
ಮೇ 3, 1969 ರಂದು ಜಾಕಿರ್ ಹುಸೇನ್ ಅವರ ನಿಧನದ ನಂತರ ಹಂಗಾಮಿ ರಾಷ್ಟ್ರಪತಿಗಳಾಗಿ ಅಧಿಕಾರ ವಹಿಸಿಕೊಂಡ ವಿ ವಿ ಗಿರಿ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಗಿರಿ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಜುಲೈ 2, 1969 ರಂದು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರು ಅಧಿಕಾರಾವಧಿಯನ್ನು ಪೂರ್ಣಗೊಳಿಸದ ಮೊದಲ ಉಪ ರಾಷ್ಟ್ರಪತಿಯಾದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ವಿರುದ್ಧ ರಾಷ್ಟ್ರಪತಿ ಚುನಾವಣೆಯಲ್ಲಿ ಸೋತ ನಂತರ, ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಜುಲೈ 21, 2007 ರಂದು ಹುದ್ದೆಗೆ ರಾಜೀನಾಮೆ ನೀಡಿದ್ದರು.
ಶೇಖಾವತ್ ಅವರ ರಾಜೀನಾಮೆಯ ನಂತರ, ಮೊಹಮ್ಮದ್ ಹಮೀದ್ ಅನ್ಸಾರಿ ಈ ಸ್ಥಾನಕ್ಕೆ ಆಯ್ಕೆಯಾಗುವ ಮೊದಲು, ಉಪ ರಾಷ್ಟ್ರಪತಿ ಸ್ಥಾನ 21 ದಿನಗಳ ಕಾಲ ಖಾಲಿಯಾಗಿತ್ತು.
ಉಪ ರಾಷ್ಟ್ರಪತಿಗಳಾದ ಆರ್. ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ ಮತ್ತು ಕೆ.ಆರ್. ನಾರಾಯಣನ್ ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು, ಆದರೆ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ.
ಅಧಿಕಾರದಲ್ಲಿರುವಾಗಲೇ ನಿಧನರಾದ ಏಕೈಕ ಉಪ ರಾಷ್ಟ್ರಪತಿ ಕ್ರಿಶನ್ ಕಾಂತ್. ಅವರು ಜುಲೈ 27, 2002 ರಂದು ನಿಧನರಾಗಿದ್ದರು.
Advertisement