ಹನಿಟ್ರ್ಯಾಪ್: ಮಹಾರಾಷ್ಟ್ರ ಬಿಜೆಪಿ ಸಚಿವರ ಆಪ್ತ ಪ್ರಫುಲ್ ಲೋಧಾ ಬಂಧನ; ತನಿಖೆಗೆ ಪ್ರತಿಪಕ್ಷಗಳ ಒತ್ತಾಯ

ಲೋಧಾ ಅವರನ್ನು ಈಗಾಗಲೇ ಎರಡು ಬಾರಿ ಬಂಧಿಸಲಾಗಿದೆ. ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಈ ಹಿಂದೆ ಬಂಧಿಸಲಾಗಿತ್ತು.
Praful Lodha
ಪ್ರಫುಲ್ ಲೋಧಾ
Updated on

ಮುಂಬೈ: ಹನಿ ಟ್ರ್ಯಾಪ್ ಪ್ರಕರಣದಲ್ಲಿ ಮಹಾರಾಷ್ಟ್ರ ಬಿಜೆಪಿ ಸಚಿವ ಗಿರೀಶ್ ಮಹಾಜನ್ ಅವರ ಆಪ್ತ ಪ್ರಫುಲ್ ಲೋಧಾ ಅವರನ್ನು ಅಂಧೇರಿ ಪೊಲೀಸರು ಬಂಧಿಸಿದ್ದಾರೆ.

ಲೋಧಾ ಅವರನ್ನು ಈಗಾಗಲೇ ಎರಡು ಬಾರಿ ಬಂಧಿಸಲಾಗಿದೆ. ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಈ ಹಿಂದೆ ಬಂಧಿಸಲಾಗಿತ್ತು. ಈಗ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಲೋಧಾ ಬಂಧನವಾಗಿದ್ದು, ಸಚಿವ ಗಿರೀಶ್ ಮಹಾಜನ್ ಮತ್ತು ಇತರ ಹಲವು ನಾಯಕರ ಹೆಸರುಗಳು ಬೆಳಕಿಗೆ ಬಂದಿವೆ.

ಬಂಧಿತ ಪ್ರಫುಲ್ ಲೋಧಾ, ಸಚಿವ ಗಿರೀಶ್ ಮಹಾಜನ್ ಅವರ ಊರು ಜಲ್ಗಾಂವ್‌ನ ಜಾಮ್ನೇರ್‌ನ ಉದ್ಯಮಿಯಾಗಿದ್ದು, ಪೊಲೀಸರು ಅವರ ಲ್ಯಾಪ್‌ಟಾಪ್, ಮೊಬೈಲ್ ಮತ್ತು ಪೆನ್ ಡ್ರೈವ್ ಅನ್ನು ವಶಪಡಿಸಿಕೊಂಡಿದ್ದಾರೆ.

ಎನ್‌ಸಿಪಿ(ಎಸ್‌ಪಿ) ನಾಯಕ ಮತ್ತು ಮಾಜಿ ಸಚಿವ ಏಕನಾಥ್ ಖಡ್ಸೆ ಅವರು, ಪ್ರಫುಲ್ ಲೋಧಾ ಅವರನ್ನು ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಂಧಿಸಲಾಗಿದೆ. ಏಕೆಂದರೆ ಅವರ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಪ್ಯ ವಿವರಗಳು ಇವೆ ಎಂದು ಹೇಳಿದ್ದಾರೆ.

Praful Lodha
ಬೆಂಗಳೂರು: 1 ಕಿಸ್ ಗೆ 50 ಸಾವಿರ, ಫುಲ್ ಕೋ ಆಪರೇಷನ್‌ಗೆ 15 ಲಕ್ಷ ರೂ; ಖತರ್ನಾಕ್ ಟೀಚರ್, ಹನಿಟ್ರ್ಯಾಪ್ ಗ್ಯಾಂಗ್ ಬಂಧನ

"ಲೋಧಾ ಅವರು ಬಿಜೆಪಿ ಸಚಿವ ಗಿರೀಶ್ ಮಹಾಜನ್ ಸೇರಿದಂತೆ ಅನೇಕ ನಾಯಕರ ಗೌಪ್ಯ ವಿವರಗಳನ್ನು ಬಹಿರಂಗಪಡಿಸಬಹುದು. ಆದ್ದರಿಂದ ಅವರನ್ನು ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಗಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಖಡ್ಸೆ ಆಗ್ರಹಿಸಿದ್ದಾರೆ.

ಶಿವಸೇನಾ(ಯುಬಿಟಿ) ಲೋಕಸಭಾ ಸಂಸದ ಮತ್ತು ವಕ್ತಾರ ಸಂಜಯ್ ರಾವತ್ ಸಾಮಾಜಿಕ ಮಾಧ್ಯಮದಲ್ಲಿ ಲೋಧಾ ಅವರ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಬಳಿ ಗಿರೀಶ್ ಮಹಾಜನ್ ಅವರ ವಿಡಿಯೋಗಳಿದ್ದು, ಒಂದು ಬಟನ್ ಒತ್ತುವ ಮೂಲಕ ಮಹಾಜನ್ ರಾಜಕೀಯ ಜೀವನ ಹಾಳುಮಾಡಬಹುದು ಎಂದು ಹೇಳಿದ್ದಾರೆ.

"ಮಹಾರಾಷ್ಟ್ರದಲ್ಲಿ ನಾಲ್ವರು ಸಚಿವರು ಹನಿ ಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಯಾವ ಸಚಿವರು ಭಾಗಿಯಾಗಿದ್ದಾರೆಂದು ತಿಳಿದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ರಾವತ್ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಚಿವ ಗಿರೀಶ್ ಮಹಾಜನ್, ಲೋಧಾ, ಎಲ್ಲಾ ಪಕ್ಷ ಕಾರ್ಯಕರ್ತ ಮತ್ತು ಅವರು ಕೇವಲ ಬಿಜೆಪಿಗೆ ಸೇರಿದವರಲ್ಲ. ಲೋಧಾ ಅವರ ಬಳಿ ಶರದ್ ಪವಾರ್, ಉದ್ಧವ್ ಠಾಕ್ರೆ, ಜಯಂತ್ ಪಾಟೀಲ್, ಸುಪ್ರಿಯಾ ಸುಳೆ ಮತ್ತು ಇತರರು ಸೇರಿದಂತೆ ಎಲ್ಲಾ ಪಕ್ಷದ ನಾಯಕರ ಜೊತೆಗಿರುವ ಫೋಟೋಗಳಿವೆ. ಆದರೆ ನನಗೂ ಈ ಹನಿ ಟ್ರ್ಯಾಪ್ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com