Terror case: ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲು ಜೈಲಿನಲ್ಲಿರುವ ಸಂಸದ ರಶೀದ್ ಗೆ ಕಸ್ಟಡಿ ಪೆರೋಲ್!

ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ್ದ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ 2019ರಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧನಕ್ಕೊಳಗಾದ ನಂತರ ರಶೀದ್ ತಿಹಾರ್ ಜೈಲಿನಲ್ಲಿದ್ದಾರೆ.
MP Engineer Rashid
ಎಂಜಿನಿಯರ್ ರಶೀದ್
Updated on

ನವದೆಹಲಿ: ಜೈಲಿನಲ್ಲಿರುವ ಸಂಸದ ಎಂಜಿನಿಯರ್ ರಶೀದ್ ಗೆ ಜುಲೈ 24 ರಿಂದ ಆಗಸ್ಟ್ 4ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಭಾಗಿಯಾಗಲು ದೆಹಲಿ ನ್ಯಾಯಾಲಯ ಮಂಗಳವಾರ ಪೆರೋಲ್ ನೀಡಿದೆ.

ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ್ದ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ 2019ರಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧನಕ್ಕೊಳಗಾದ ನಂತರ ರಶೀದ್ ತಿಹಾರ್ ಜೈಲಿನಲ್ಲಿದ್ದಾರೆ.

ಹೆಚ್ಚುವರಿ ಸೆಷನ್ ಜಡ್ಜ್ ಚಂದೇರ್ ಜಿತ್ಸಿಂಗ್ ಅವರು ರಶೀದ್ ಅವರಿಗೆ ಪೆರೋಲ್ ನೀಡಿದ್ದಾರೆ. ಸಂಸತ್ ಅಧಿವೇಶನದಲ್ಲಿ ತನ್ನ ಕರ್ತವ್ಯ ನಿರ್ವಹಿಸಲು ಮಧ್ಯಂತರ ಜಾಮೀನು ನೀಡಬೇಕು ಅಥವಾ ಕಸ್ಟಡಿ ಪೆರೋಲ್ ನೀಡುವಂತೆ ಬಾರಮುಲ್ಲಾ ಸಂಸದರಾಗಿರುವ ರಶೀದ್ ನ್ಯಾಯಾಲಯವನ್ನು ಕೋರಿದ್ದರು. ಪೆರೋಲ್ ವೇಳೆ ರಶೀದ್ ಜೊತೆಗೆ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.

ರಶೀದ್ ಪರ ವಾದ ಮಂಡಿಸಿದ ವಕೀಲ ವಿಖ್ಯಾತ್ ಒಬೆರಾಯ್, ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ತನ್ನ ಕಕ್ಷಿದಾರರಿಗೆ ಮಧ್ಯಂತರ ಜಾಮೀನು ನೀಡಬೇಕು. ಇಲ್ಲದಿದ್ದರೆ ಪ್ರಯಾಣದ ವೆಚ್ಚ ಇಲ್ಲದೆ ಕಸ್ಟಡಿ ಪೆರೋಲ್ ನೀಡುವಂತೆ ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎನ್ ಐಎ ಪರ ವಕೀಲರು, ಯಾವುದೇ ಕಾರಣಕ್ಕೂ ಮಧ್ಯಂತರ ಜಾಮೀನು ನೀಡಬಾರದು. ಪ್ರಯಾಣದ ವೆಚ್ಚ ಪಾವತಿಸಿದ ನಂತರವೇ ಕಸ್ಟಡಿ ಪೆರೋಲ್ ನೀಡುವಂತೆ ಹೇಳಿದರು.

MP Engineer Rashid
ಭಯೋತ್ಪಾದನೆಗೆ ಹಣಕಾಸಿನ ನೆರವು ಪ್ರಕರಣ: ಸಂಸದ ಇಂಜಿನಿಯರ್ ರಶೀದ್‌ಗೆ ಮಧ್ಯಂತರ ಜಾಮೀನು ಮಂಜೂರು

ರಶೀದ್ 2024ರ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com