ದೆಹಲಿಯ ಮಸೀದಿಯಲ್ಲಿ ರಾಜಕೀಯ ಸಭೆ: ಅಖಿಲೇಶ್ ಯಾದವ್ ವಿರುದ್ಧ ಉತ್ತರಾಖಂಡ ವಕ್ಪ್ ಮಂಡಳಿ ಕಿಡಿ!

ರಾಂಪುರ ಸಂಸದ ಮೌಲಾನಾ ಮೊಹಿಬುಲ್ಲಾ ನದ್ವಿ ಅವರ ದೆಹಲಿ ನಿವಾಸದಲ್ಲಿ ತೆಗೆದ ಚಿತ್ರಗಳು ಎಂದು ಹೇಳುವ ಮೂಲಕ ಧರ್ಮೇಂದ್ರ ಯಾದವ್ ಸುಳ್ಳು ಹೇಳಿದ್ದಾರೆ ಎಂದು ಶಮ್ಸ್ ಆರೋಪಿಸಿದ್ದಾರೆ.
 Akhilesh Yadav and Others
ಅಖಿಲೇಶ್ ಯಾದವ್ ಮತ್ತಿತರರು
Updated on

ನವದೆಹಲಿ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರಾಜಕೀಯ ಸಭೆಗಾಗಿ ರಾಷ್ಟ್ರ ರಾಜಧಾನಿಯ ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿರುವ ಮಸೀದಿಯನ್ನು ಬಳಸಿಕೊಂಡಿದ್ದಾರೆ ಎಂದು ಉತ್ತರಾಖಂಡ್ ವಕ್ಪ್ ಮಂಡಳಿ ಅಧ್ಯಕ್ಷ ಶಾದಾಬ್ ಶಾಮ್ಸ್ ಮಂಗಳವಾರ ಆರೋಪಿಸಿದ್ದಾರೆ.

ಇದು ಮುಸ್ಲಿಂ ಭಾವನೆಗಳಿಗೆ ಧಕ್ಕೆ ತಂದಿದ್ದು, ಅಖಿಲೇಶ್ ಯಾದವ್ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

SP ಸಂಸದ ಧರ್ಮೇಂದ್ರ ಯಾದವ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಪತ್ನಿ ಡಿಂಪಲ್ ಯಾದವ್, ರಾಂಪುರದ ಪಕ್ಷದ ಸಂಸದ ಮೌಲಾನಾ ಮೊಹಿಬುಲ್ಲಾ ನದ್ವಿ ಮತ್ತು ಸಂಭಾಲ್ ಸಂಸದ ಶಫೀಕರ್ ರಹಮಾನ್ ಬಾರ್ಕ್ ಸೇರಿದಂತೆ ಹಲವಾರು ಪಕ್ಷದ ಸಂಸದರೊಂದಿಗೆ ಅಖಿಲೇಶ್ ಯಾದವ್ ಮಸೀದಿಯೊಳಗೆ ಕುಳಿತಿರುವುದನ್ನು ಕಾಣಬಹುದು.

ಈ ಪೋಟೋಗೆ ಪ್ರತಿಕ್ರಿಯಿಸಿರುವ ಶಾದಾಬ್ ಶಾಮ್ಸ್, ಮಸೀದಿಗಳು ಧಾರ್ಮಿಕ ನಂಬಿಕೆಯ ಪವಿತ್ರ ಕೇಂದ್ರಗಳಾಗಿದ್ದು, ರಾಜಕೀಯ ಚರ್ಚೆ ಅಲ್ಲಿ ನಡೆಯಬಾರದು. ಪಕ್ಷದ ಸಂಸದರೊಂದಿಗಿನ ರಾಜಕೀಯ ಸಭೆಗೆ ಮಸೀದಿಯನ್ನು ಬಳಸಿಕೊಳ್ಳುವ ಮೂಲಕ ಅಖಿಲೇಶ್ ಯಾದವ್ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದಕ್ಕಾಗಿ ಅವರು ಮುಸ್ಲಿಮರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

 Akhilesh Yadav and Others
ಬಿಜೆಪಿಗೆ ದುರ್ಗಂಧ ಇಷ್ಟ, ಅದಕ್ಕೇ ಗೋಶಾಲೆಗಳ ನಿರ್ಮಾಣ: ಗೋವು, ಹಿಂದೂ ಧರ್ಮದ ಬಗ್ಗೆ ಮತ್ತೆ ಅಖಿಲೇಶ್ ಯಾದವ್ ಅವಹೇಳನ!

ರಾಂಪುರ ಸಂಸದ ಮೌಲಾನಾ ಮೊಹಿಬುಲ್ಲಾ ನದ್ವಿ ಅವರ ದೆಹಲಿ ನಿವಾಸದಲ್ಲಿ ತೆಗೆದ ಚಿತ್ರಗಳು ಎಂದು ಹೇಳುವ ಮೂಲಕ ಧರ್ಮೇಂದ್ರ ಯಾದವ್ ಸುಳ್ಳು ಹೇಳಿದ್ದಾರೆ ಎಂದು ಶಮ್ಸ್ ಆರೋಪಿಸಿದ್ದಾರೆ. ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ಮಸೀದಿಯ ಒಳಭಾಗವು ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಅದನ್ನು ಸುಲಭವಾಗಿ ಗುರುತಿಸಬಹುದು. ಧರ್ಮೇಂದ್ರ ಯಾದವ್ ಅದರ ಬಗ್ಗೆ ಸುಳ್ಳು ಹೇಳಬಾರದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com