ಪಾಕಿಸ್ತಾನದ 6 ಡ್ರೋನ್‌ ಹೊಡೆದುರುಳಿಸಿದ BSF; ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ, ಹೆರಾಯಿನ್ ವಶ

ಭಾರತ-ಪಾಕ್ ಗಡಿಯುದ್ದಕ್ಕೂ ಡ್ರಗ್ಸ್ ಕಳ್ಳಸಾಗಣೆ ಕಾರ್ಯಾಚರಣೆಗೆ ಈ ಡ್ರೋನ್‌ಗಳನ್ನು ಬಳಸಲಾಗುತ್ತಿತ್ತು ಎಂದು ವರದಿಯಾಗಿದೆ.
BSF neutralised six drones
ಹೊಡೆದುರುಳಿಸಿದ ಡ್ರೋನ್
Updated on

ಚಂಡೀಗಢ: ಕಳೆದ 24 ಗಂಟೆಗಳಲ್ಲಿ, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಆರು ಡ್ರೋನ್‌ಗಳನ್ನು ಹೊಡೆದುರುಳಿಸಿದೆ.

ಭಾರತ-ಪಾಕ್ ಗಡಿಯುದ್ದಕ್ಕೂ ಡ್ರಗ್ಸ್ ಕಳ್ಳಸಾಗಣೆ ಕಾರ್ಯಾಚರಣೆಗೆ ಈ ಡ್ರೋನ್‌ಗಳನ್ನು ಬಳಸಲಾಗುತ್ತಿತ್ತು ಎಂದು ವರದಿಯಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ರಾತ್ರಿ ಭಾರತ-ಪಾಕ್ ಗಡಿಯಲ್ಲಿರುವ ಅಮೃತಸರ ಜಿಲ್ಲೆಯ ಮೋಧೆ ಗ್ರಾಮದಲ್ಲಿ ತಾಂತ್ರಿಕ ಪ್ರತಿಕ್ರಮಗಳನ್ನು ಬಳಸಿಕೊಂಡು ಐದು ಡ್ರೋನ್‌ಗಳನ್ನು ಬಿಎಸ್​ಎಫ್​ ಹೊಡೆದುರುಳಿಸಿದೆ. ಮೂರು ಪಿಸ್ತೂಲ್​ ಗಳಿದ್ದ ನಾಲ್ಕು ಪ್ಯಾಕೆಟ್​ಗಳು, ಹಲವು ಮ್ಯಾಗಜೀನ್​ ಜೊತೆಗೆ 1.070 ಕೆ.ಜಿ ಹೆರಾಯಿನ್​ ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

BSF neutralised six drones
ದೆಹಲಿ: ಆಟಿಕೆ ಗನ್ ಬಳಸಿ ಚಿನ್ನಾಭರಣ ಅಂಗಡಿ ದರೋಡೆ ಮಾಡಿದ್ದ BSF ಯೋಧ ಅರೆಸ್ಟ್!

ಇಂದು ಬೆಳಗ್ಗೆ ಅಟ್ಟಾರಿ ಗ್ರಾಮದ ಬಳಿ ಮತ್ತೊಂದು ಡ್ರೋನ್ ತಟಸ್ಥಗೊಳಿಸಲಾಗಿದ್ದು​, ಎರಡು ಮ್ಯಾಗಜೀನ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ತರಣ್​ ತರಣ್​ ಜಿಲ್ಲೆಯ ದಾಲ್​ ಗ್ರಾಮದ ಭತ್ತದ ಗದ್ದೆಯಲ್ಲಿ ಪಿಸ್ತೂಲಿನ ಭಾಗಗಳು ಮತ್ತು ಮ್ಯಾಗಜೀನ್​ ವಶಕ್ಕೆ ಪಡೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com