EC, ಬಿಜೆಪಿಯಿಂದ ಚುನಾವಣಾ ದುರುಪಯೋಗ; ಬಿಹಾರ ಅದರ ಮುಂದಿನ ಟಾರ್ಗೆಟ್: ಸಿದ್ದರಾಮಯ್ಯ

ಮಹಾರಾಷ್ಟ್ರ, ಹರಿಯಾಣ, ಕರ್ನಾಟಕದಲ್ಲಿ ಇಂತಹ ವಿದ್ಯಮಾನಗಳು ನಡೆದಿವೆ. ಬಿಹಾರ ರಾಜ್ಯದಲ್ಲಿ ಕೂಡ ಈ ರೀತಿ ಮಾಡಲು ಬಿಜೆಪಿಯವರು ಯೋಜನೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
Rahul Gandhi-Siddaramaiah
ರಾಹುಲ್ ಗಾಂಧಿ-ಸಿದ್ದರಾಮಯ್ಯ
Updated on

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಯಿಂದ ದೊಡ್ಡ ಪ್ರಮಾಣದ ಚುನಾವಣಾ ದುರ್ವರ್ತನೆ ನಡೆದಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದನಿಗೂಡಿಸಿದ್ದಾರೆ,

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಮತದಾರರ ಪಟ್ಟಿಯನ್ನು ಕುಶಲತೆಯಿಂದ ನಿರ್ವಹಿಸುತ್ತಿದೆ. ಭಾರತದ ಚುನಾವಣಾ ಆಯೋಗ ಸೇರಿದಂತೆ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಿಟಿಐ ವೀಡಿಯೊ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ ನಕಲಿ ಮತದಾರರನ್ನು ಸೇರಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿಯವರು ಸತ್ಯವನ್ನೇ ಹೇಳುತ್ತಿದ್ದಾರೆ.

ಮಹಾರಾಷ್ಟ್ರ, ಹರಿಯಾಣ, ಕರ್ನಾಟಕದಲ್ಲಿ ಇಂತಹ ವಿದ್ಯಮಾನಗಳು ನಡೆದಿವೆ. ಬಿಹಾರ ರಾಜ್ಯದಲ್ಲಿ ಕೂಡ ಈ ರೀತಿ ಮಾಡಲು ಬಿಜೆಪಿಯವರು ಯೋಜನೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ನಿರ್ದೇಶನದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಸ್ವತಂತ್ರವಾಗಿಲ್ಲ. ಚುನಾವಣಾ ಆಯೋಗ ಸ್ವತಂತ್ರವಾಗಿ ಮತ್ತು ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕಾಗಿದೆ, ಆದರೆ ಅದು ಹಾಗೆ ಮಾಡುತ್ತಿಲ್ಲ ಎಂದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದ ಸಿದ್ದರಾಮಯ್ಯ, ಈ ಅಕ್ರಮಗಳನ್ನು ಬಹಿರಂಗಪಡಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಕ್ಷಿಸಲು ಸುಧಾರಣೆ ತರಲು ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದರು.

ಜಾತಿಗಣತಿ

ದೇಶಾದ್ಯಂತ ಜಾತಿ ಜನಗಣತಿ ನಡೆಸುವ ಮಹತ್ವವನ್ನು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಪ್ರತಿಯೊಂದು ರಾಜ್ಯವೂ ಜಾತಿ ಜನಗಣತಿಯನ್ನು ಪ್ರಾರಂಭಿಸಬೇಕು. ಅದು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ, ಉದ್ಯೋಗ ಆಧಾರಿತ ಮತ್ತು ರಾಜಕೀಯವಾಗಿರಬೇಕು. ಸ್ವಾತಂತ್ರ್ಯದ ನಂತರ, ಒಬ್ಬ ವ್ಯಕ್ತಿಯ ಸ್ಥಿತಿ - ಆರ್ಥಿಕವಾಗಿ, ರಾಜಕೀಯವಾಗಿ - ಮತ್ತು ಸ್ವಾತಂತ್ರ್ಯ ಎಲ್ಲರಿಗೂ ತಲುಪಿದೆಯೇ ಅಥವಾ ಇಲ್ಲವೇ, ಸಮಾನತೆ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ಉದ್ದೇಶ ಬದಲಾವಣೆ ತರುವುದು ಮತ್ತು ಅಸಮಾನತೆಯನ್ನು ಹೋಗಲಾಡಿಸುವುದು. ತಾವು ಒಬಿಸಿ ಸಲಹಾ ಸಮಿತಿಯ ಸಂಚಾಲಕರಲ್ಲ, ಬದಲಾಗಿ ಅನಿಲ್ ಜೈಹಿಂದ್ ಅವರ ನಾಯಕತ್ವದಲ್ಲಿ ಕೇವಲ ಸದಸ್ಯ ಎಂದು ಸ್ಪಷ್ಟಪಡಿಸಿದರು.

Rahul Gandhi-Siddaramaiah
ಬಿಹಾರ SIRನ ಮೊದಲ ಹಂತ ಪೂರ್ಣ, ಕರಡು ಪಟ್ಟಿಯಿಂದ 65 ಲಕ್ಷ ಮತದಾರರು ಔಟ್

ಕರ್ನಾಟಕದ ಸ್ವಂತ ಜಾತಿ ಜನಗಣತಿಗೆ ಸಂಬಂಧಿಸಿದಂತೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಅವರು ಗಡುವನ್ನು ಪೂರೈಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಇದು ಸುಳ್ಳು ಪ್ರಕರಣ. ನನ್ನನ್ನು, ನನ್ನ ಪತ್ನಿಯನ್ನು, ನನ್ನ ಕುಟುಂಬವನ್ನು ಅನಗತ್ಯವಾಗಿ ಹಿಂಸಿಸುತ್ತಾರೆ. ಇದು ಪಿಎಂಎಲ್ ಎ ಕಾಯ್ದೆಯಡಿ ಬರದಿದ್ದರೂ; ಯಾವುದೇ ಹಣ ವರ್ಗಾವಣೆ ಇಲ್ಲ; ಅನಗತ್ಯವಾಗಿ ಅವರು ನನಗೆ ಮತ್ತು ನನ್ನ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ದೂರಿದರು.

ಸುಪ್ರೀಂ ಕೋರ್ಟ್‌ನ ಹೇಳಿಕೆಗಳನ್ನು ಸ್ವಾಗತಿಸಿದ ಸಿಎಂ, ರಾಜಕೀಯ ಮಾಡಲು ಬಯಸಿದರೆ, ಚುನಾವಣೆಯಲ್ಲಿ ಮಾಡಿ, ಪ್ರಕರಣದಲ್ಲಿ ನ್ಯಾಯಾಲಯ ಸರಿಯಾಗಿ ಹೇಳಿದಂತೆ ಕಾಣುತ್ತಿದೆ. ಇದು ಬಿಜೆಪಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೀಡಿದ ಎಚ್ಚರಿಕೆ ಎಂದು ಸಿದ್ದರಾಮಯ್ಯ ಹೇಳಿದರು.

ಜೂನ್ 4 ರಂದು 11 ಜನರ ಸಾವಿಗೆ ಕಾರಣವಾದ ಕ್ರೀಡಾಂಗಣದ ಕಾಲ್ತುಳಿತದ ಕುರಿತು ಮಾತನಾಡಿದ ಸಿದ್ದರಾಮಯ್ಯ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಸಲ್ಲಿಸಿದ ತನಿಖಾ ವರದಿಯನ್ನು ಸಂಪುಟ ಅಂಗೀಕರಿಸಿದೆ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿಯಲ್ಲದೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು DNA (ಈವೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿ) ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಹೆಚ್ಚುವರಿಯಾಗಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com