'ಡಾಗ್ ಬಾಬು s/o ಕುಟ್ಟ ಬಾಬು': ನಾಯಿಗೂ ನಿವಾಸಿ ಪ್ರಮಾಣಪತ್ರ!; ಬಿಹಾರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಸಿಡಿಮಿಡಿ

ಬಿಹಾರದಲ್ಲಿ ನಾಯಿಗೆ ವಾಸ ಪ್ರಮಾಣಪತ್ರವನ್ನು ನೀಡಲಾಗುತ್ತಿರುವುದು ವರ್ಷದ ವಿಲಕ್ಷಣ ಬೆಳವಣಿಗೆಯಾಗಿದೆ.
A residence certificate in the name of Dog Babu has sparked amusement on social media.
ನಾಯಿಗೆ ನಿವಾಸಿ ಪ್ರಮಾಣಪತ್ರonline desk
Updated on

ಪಾಟ್ನಾ: ಬಿಹಾರದಲ್ಲಿ SIR ಸುದ್ದಿಯಲ್ಲಿರುವಾಗಲೇ ನಾಯಿಯೊಂದಕ್ಕೆ ನಿವಾಸಿ ಪ್ರಮಾಣಪತ್ರವನ್ನು ನೀಡಲಾಗಿರುವುದು ದೇಶಾದ್ಯಂತ ಸುದ್ದಿಯಾಗುತ್ತಿದೆ.

‘ಕುಟ್ಟ ಬಾಬು’ ಮಗ ‘ಡಾಗ್ ಬಾಬು’ ಬಿಹಾರದಲ್ಲಿ ನಿವಾಸ ಪ್ರಮಾಣಪತ್ರವನ್ನು ಪಡೆದಿರುವ ನಾಯಿಯಾಗಿದೆ. ಈ ಬಗ್ಗೆ ಇಂಟರ್ನೆಟ್ ನಲ್ಲಿ ತರಹೇವಾರಿ ಕಾಮೆಂಟ್ ಗಳು ಬರತೊಡಗಿದ್ದು ವಿವಾದಕ್ಕೆ ಗುರಿಯಾಗಿದೆ.

ಬಿಹಾರದಲ್ಲಿ ನಾಯಿಗೆ ವಾಸ ಪ್ರಮಾಣಪತ್ರವನ್ನು ನೀಡಲಾಗುತ್ತಿರುವುದು ವರ್ಷದ ವಿಲಕ್ಷಣ ಬೆಳವಣಿಗೆಯಾಗಿದೆ. ಆದಾಗ್ಯೂ, ರಾಜ್ಯ ರಾಜಧಾನಿ ಪಾಟ್ನಾದಲ್ಲಿ ‘ಡಾಗ್ ಬಾಬು’ ಗೆ ಅಂತಹ ಪ್ರಮಾಣಪತ್ರವನ್ನು ನೀಡಲಾಗಿದೆ, ದಾಖಲೆಯಲ್ಲಿ ಕಂದಾಯ ಅಧಿಕಾರಿ ಮುರಾರಿ ಚೌಹಾಣ್ ಅವರ ಡಿಜಿಟಲ್ ಸಹಿ ಇದೆ.

ಡಾಗ್ ಬಾಬುಗೆ ವಾಸ ಪ್ರಮಾಣಪತ್ರ

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ನಿವಾಸ ಪ್ರಮಾಣಪತ್ರವನ್ನು ಬಿಹಾರ ಆರ್‌ಟಿಪಿಎಸ್‌ನ ಮಸೌರ್ಹಿ ವಲಯ ಕಚೇರಿಯ ಪೋರ್ಟಲ್‌ನಿಂದ ನೀಡಲಾಗಿದೆ. ಈ ಪ್ರಮಾಣಪತ್ರ ಗೋಲ್ಡನ್ ರಿಟ್ರೈವರ್‌ನ ಚಿತ್ರವನ್ನು ಹೊಂದಿದೆ ಮತ್ತು ಅದರ ಹೆಸರನ್ನು “ಡಾಗ್ ಬಾಬು” ಎಂದು ನಮೂದು ಮಾಡಲಾಗಿದೆ.

ಪ್ರಮಾಣಪತ್ರವು ಡಾಗ್ ಬಾಬು “ಕುಟ್ಟ ಬಾಬು” ಅವರ ಮಗ ಮತ್ತು ಅದರ ತಾಯಿಯ ಹೆಸರು “ಕುಟಿಯಾ ದೇವಿ” ಎಂಬ ವಿವರಗಳನ್ನು ಹೊಂದಿದೆ. ಅವರ ವಿಳಾಸ ಬಿಹಾರದ ಪಾಟ್ನಾ ಜಿಲ್ಲೆಯ ನಗರ ಪರಿಷತ್ ಮಸೌರ್ಹಿಯ ವಾರ್ಡ್ ಸಂಖ್ಯೆ 15 ರ ಮೊಹಲ್ಲಾ ಕೌಲಿಚಕ್ ಎಂದು ನಮೂದಿಸಲಾಗಿದೆ.

A residence certificate in the name of Dog Babu has sparked amusement on social media.
ಬಿಹಾರ SIRನ ಮೊದಲ ಹಂತ ಪೂರ್ಣ, ಕರಡು ಪಟ್ಟಿಯಿಂದ 65 ಲಕ್ಷ ಮತದಾರರು ಔಟ್

ಈ ಚಿತ್ರ ವೈರಲ್ ಆಗುತ್ತಿದ್ದಂತೆಯೇ ಅರ್ಜಿದಾರರು, ಕಂಪ್ಯೂಟರ್ ಆಪರೇಟರ್ ಮತ್ತು ಪ್ರಮಾಣಪತ್ರ ನೀಡಿದ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಾಟ್ನಾ ಜಿಲ್ಲಾಡಳಿತ ತಿಳಿಸಿದೆ. ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ ಮತ್ತು ಅಧಿಕಾರಿಗಳು ಈಗ ಅದನ್ನು ಹೇಗೆ ರಚನೆಯಾಯಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಡಿಜಿಟಲ್ ಸಹಿಯನ್ನು ಪಡೆಯಲು ಸರ್ಕಾರ ನೀಡಿದ ಸುರಕ್ಷಿತ ಡಾಂಗಲ್ ಬಳಸಬೇಕಾಗಿರುವುದರಿಂದ, ರುಜುವಾತುಗಳ ಉಲ್ಲಂಘನೆ ಅಥವಾ ದುರುಪಯೋಗದ ಸಾಧ್ಯತೆಯನ್ನು ಅಧಿಕಾರಿಗಳು ಶಂಕಿಸಿದ್ದಾರೆ ಎಂದು ದಿ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com