
ಮಾಲ್ಡಾ: ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಲ್ಲ ಎಂಬ ತೃಣಮೂಲ ಕಾಂಗ್ರೆಸ್ ಶಾಸಕರಾದ ಸಾಬಿತ್ರಿ ಮಿತ್ರ ಅವರ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಮುಸ್ಲಿಂ ಪ್ರಾಬಲ್ಯದ ಮಾಲ್ಡಾ ಜಿಲ್ಲೆಯ ಮಾಣಿಕ್ಚಾಕ್ ಕ್ಷೇತ್ರದ ಶಾಸಕನಾಗಿರುವ ಮಿತ್ರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ ಕುರಿತು ನೀಡಿರುವ ಹೇಳಿಕೆ ಉಗ್ರರನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ.
ಭಾನುವಾರ ರ‍್ಯಾಲಿಯೊಂದರಲ್ಲಿ ಮಾತನಾಡಿದ ಮಿತ್ರ ಸಾಬಿತ್ರಿ ಮಿತ್ರ, ಉಗ್ರರು ಪ್ರವಾಸಿಗರನ್ನು ಟಾರ್ಗೆಟ್ ಮಾಡಿಲ್ಲ. ಅವರು ದೊಡ್ಡ ಪ್ಲಾನ್ ಮಾಡಿಕೊಂಡು, ಭದ್ರತಾ ಪಡೆಗಳು ಅವರ ಟಾರ್ಗೆಟ್ ಆಗಿತ್ತು. ಹಾಗಾದರೆ ಪಹಲ್ಗಾಮ್‌ನಲ್ಲಿ ಅಷ್ಟೊಂದು ಪ್ರವಾಸಿಗರನ್ನು ಕೊಂದವರು ಯಾರು? ಅವರ ಗುರುತು ಏನು? ಎಂದು ಹೇಳಿದ್ದರು. ಈ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಮಿತ್ರ ಅವರು ಉಗ್ರರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ. ಉಗ್ರರು ಪ್ರವಾಸಿಗರಿಗೆ ತೊಂದರೆ ನೀಡಲ್ಲ. ಅವರನ್ನು ಗೌರವಿಸುತ್ತದೆ ಎಂದು ಶಾಸಕರು ಹೇಳಿದ್ದಾರೆ. ಪಹಲ್ಗಾಮ್ ದಾಳಿಯ ಸಂತ್ರಸ್ತರೊಂದಿಗೆ ನಿಲ್ಲುವ ಬದಲು ಭಯೋತ್ಪಾದನೆಯೊಂದಿಗೆ ನಿರತರಾಗಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.
ಅಮಾಯಕ ಭಾರತೀಯರ ಹತ್ಯೆಯಾಗುತ್ತಿರುವಾಗ ಈಗ ಜಿಹಾದಿಗಳ ಬಗ್ಗೆ ಸಹಾನುಭೂತಿ ತೋರಿಸುವುದು?" ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಅಧಿಕೃತ ನಿಲುವೇ ಎಂದು ಮಾಳವೀಯಾ ಪ್ರಶ್ನಿಸಿದ್ದಾರೆ.
Advertisement