ಜಮ್ಮು ಮತ್ತು ಕಾಶ್ಮೀರ: 2025 ರ ಜನವರಿ-ಜೂನ್ ಅವಧಿಯಲ್ಲಿ 95ಕ್ಕೂ ಹೆಚ್ಚು ದೇಶೀಯ ಪ್ರವಾಸಿಗರ ಭೇಟಿ!
ನವದೆಹಲಿ: ಈ ವರ್ಷದ ಜನವರಿಯಿಂದ ಜೂನ್ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 95 ಲಕ್ಷಕ್ಕೂ ಹೆಚ್ಚು ದೇಶೀಯ ಪ್ರವಾಸಿಗರು ಭೇಟಿ ನೀಡಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇತ್ತೀಚಿಗೆ ಪಹಲ್ಗಾಮ್ ದಾಳಿ ನಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಹಾಗೂ ವ್ಯಾಪಾರ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲಿಖಿತ ಉತ್ತರದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಥಳೀಯ ಪ್ರವಾಸೋದ್ಯಮ-ಅವಲಂಬಿತರ ಮೇಲಿನ ಆರ್ಥಿಕ ಪರಿಣಾಮದ ಸರ್ಕಾರದಿಂದ ಯಾವುದೇ ಮೌಲ್ಯಮಾಪನ ಮಾಡಲಾಗಿದೆಯೇ ಎಂದು AIMIM ಸಂಸದ ಅಸಾದುದ್ದೀನ್ ಓವೈಸಿ ಕೇಳಿದ್ದರು. ಅಂತಹ ಯಾವುದೇ ಮೌಲ್ಯಮಾಪನ ಮಾಡಿಲ್ಲ ಪ್ರವಾಸೋದ್ಯಮ ಸಚಿವಾಲಯದಿಂದ ಮಾಡಿಲ್ಲ ಎಂದು ಶೇಖಾವತ್ ತಿಳಿಸಿದ್ದಾರೆ.
2020 ರಿಂದ 2025ರವರೆಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ದೇಶಿಯ ಪ್ರವಾಸಿಗರು ಮತ್ತು ವಿದೇಶಿ ಪ್ರವಾಸಿಗರ ವರ್ಷಾವಾರು ಪಟ್ಟಿಯನ್ನು ಸಚಿವರು ಹಂಚಿಕೊಂಡಿದ್ದಾರೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದಲೂ ಈ ಮಾಹಿತಿಯನ್ನು ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಿಂದ ಪಡೆದ ಇತ್ತೀಚಿನ ಮಾಹಿತಿಯಂತೆ, 2025 ರ ಜನವರಿ-ಜೂನ್ ಅವಧಿಯಲ್ಲಿ 95,92,664 ದೇಶಿಯ ಮತ್ತು 9,570 ವಿದೇಶಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ