ಭಾರತೀಯರಿಗೆ ಮಾಡಿದ 'ನಾಚಿಕೆಗೇಡಿನ ಅವಮಾನ': ಟ್ರಂಪ್ ಹೇಳಿಕೆ ಬೆಂಬಲಿಸಿದ್ದ Rahul Gandhi ವಿರುದ್ಧ BJP ಟೀಕೆ!

ಭಾರತದ್ದು ಸತ್ತ ಆರ್ಥಿಕತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದು ಇದನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಬಲಿಸಿದ್ದು ಇದಕ್ಕೆ ಬಿಜೆಪಿ ಕಟುವಾಗಿ ಟೀಕಿಸಿದೆ.
Rahul Gandhi
ರಾಹುಲ್ ಗಾಂಧಿ
Updated on

ಭಾರತದ್ದು ಸತ್ತ ಆರ್ಥಿಕತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದು ಇದನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಬಲಿಸಿದ್ದು ಇದಕ್ಕೆ ಬಿಜೆಪಿ ಕಟುವಾಗಿ ಟೀಕಿಸಿದೆ. ಇದು ದೇಶದ ಜನರ ಆಕಾಂಕ್ಷೆಗಳು, ಸಾಧನೆಗಳಿಗೆ 'ನಾಚಿಕೆಗೇಡಿನ' ಅವಮಾನ ಎಂದು ಕರೆದಿದೆ. ದೇಶವನ್ನು ದುರ್ಬಲಗೊಳಿಸುವ ವಿದೇಶಿ ಪ್ರಚಾರವನ್ನು ನೀವು ಏಕೆ ಪುನರಾವರ್ತಿಸುತ್ತೀರಿ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆ 'ಸತ್ತಿದೆ' ಎಂದು ತಿಳಿದಿದೆ ಎಂದು ಗಾಂಧಿ ಹೇಳಿದ್ದರು. ಬಿಜೆಪಿ ನೇತೃತ್ವದ ಸರ್ಕಾರವು ದೇಶದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು ನಾಶಪಡಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುದು ನನಗೆ ಮುಖ್ಯವಲ್ಲ. ರಷ್ಯಾ ಮತ್ತು ಭಾರತ ಏನು ಮಾಡಲಿವೆ ಎಂಬುದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿರುವ ಡೊನಾಲ್ಡ್‌ ಟ್ರಂಪ್‌, ಎರಡೂ ರಾಷ್ಟ್ರಗಳು ತಮ್ಮ ಸತ್ತ ಆರ್ಥಿಕತೆಗಳನ್ನು ಒಟ್ಟಿಗೆ ಹೂಳಲಿ ಎಂದು ವ್ಯಂಗ್ಯವಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ (BJP) ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ರಾಹುಲ್ ಗಾಂಧಿ 'ಸತ್ತ ಆರ್ಥಿಕತೆ' ಎಂಬ ಅಪಹಾಸ್ಯವನ್ನು ಬೆಂಬಲಿಸುವ ಮೂಲಕ ಕೆಳಮಟ್ಟಕ್ಕೆ ಇಳಿದಿದ್ದಾರೆ. ಇದು ಭಾರತೀಯ ಜನರ ಆಕಾಂಕ್ಷೆಗಳು, ಸಾಧನೆಗಳು ಮತ್ತು ಯೋಗಕ್ಷೇಮಕ್ಕೆ ನಾಚಿಕೆಗೇಡಿನ ಅವಮಾನ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಲ್ಲಿ ನಿಜವಾಗಿಯೂ 'ಸತ್ತ' ಏಕೈಕ ವಿಷಯವೆಂದರೆ ಅದು ರಾಹುಲ್ ಗಾಂಧಿಯವರ ಸ್ವಂತ ರಾಜಕೀಯ ವಿಶ್ವಾಸಾರ್ಹತೆ ಮತ್ತು ಪರಂಪರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Rahul Gandhi
'ಭಾರತ-ರಷ್ಯಾದ ಸತ್ತ ಆರ್ಥಿಕತೆಗಳು ಒಟ್ಟಿಗೆ ಮುಳುಗಲಿ, I don't care...': Donald Trump ಹೊಸ ವರಸೆ

ವಿವಿಧ ವಲಯಗಳಲ್ಲಿನ ಬೆಳವಣಿಗೆಯನ್ನು ತೋರಿಸುವ ಡೇಟಾವನ್ನು ಉಲ್ಲೇಖಿಸಿದ ಬಿಜೆಪಿ ನಾಯಕರು, ಇದು ಸತ್ತ ಆರ್ಥಿಕತೆಯಲ್ಲ. ಇದು ಏರುತ್ತಿರುವ ಸ್ಥಿತಿಸ್ಥಾಪಕ ಭಾರತ ಎಂದು ಹೇಳಿದರು. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್ ದೇಶಕ್ಕಾಗಿ ತಮ್ಮ ಬೆಳವಣಿಗೆಯ ಮುನ್ಸೂಚನೆಗಳನ್ನು ಮೇಲ್ಮುಖವಾಗಿ ಪರಿಷ್ಕರಿಸುತ್ತಿರುವುದರಿಂದ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com