
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಸಂಸದರೊಬ್ಬರು ಭಾಗಿಯಾಗಿದ್ದಾರೆ ಎನ್ನಲಾಗಿರುವ ಸಹಕಾರಿ ಬ್ಯಾಂಕ್ ಸಾಲ 'ವಂಚನೆ'ಯ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೇಂದ್ರಾಡಳಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ದಾಳಿ ನಡೆಸಿದೆ. ಈ ಪ್ರಕರಣವು ಅಂಡಮಾನ್ ನಿಕೋಬಾರ್ ರಾಜ್ಯ ಸಹಕಾರಿ ಬ್ಯಾಂಕ್ (ANSCB) ಮತ್ತು ಅದರ ಉಪಾಧ್ಯಕ್ಷ ಕುಲದೀಪ್ ರೈ ಶರ್ಮಾಗೆ ಸಂಬಂಧಿಸಿದೆ.
ಕಾಂಗ್ರೆಸ್ ನಾಯಕ ಶರ್ಮಾ (57) ಕೇಂದ್ರಾಡಳಿತ ಪ್ರದೇಶದ ಮಾಜಿ ಸಂಸದರು (2019-24). ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಪೋರ್ಟ್ ಬ್ಲೇರ್ ಮತ್ತು ಸುತ್ತಮುತ್ತಲಿನ ಒಂಬತ್ತು ಸ್ಥಳಗಳು ಮತ್ತು ಕೋಲ್ಕತ್ತಾದಲ್ಲಿ ಎರಡು ಸ್ಥಳಗಳ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಗಾಳಕೊಲ್ಲಿಯಲ್ಲಿರುವ ಕೇಂದ್ರಾಡಳಿತ ಪ್ರದೇಶದಲ್ಲಿ ಏಜೆನ್ಸಿ ದಾಳಿ ನಡೆಸಿದ್ದು ಇದೇ ಮೊದಲು ಎಂದು ಅವರು ಹೇಳಿದರು. ANSC ಬ್ಯಾಂಕ್‌ನಿಂದ ಸಾಲ ಸೌಲಭ್ಯಗಳನ್ನು ಒದಗಿಸುವಲ್ಲಿ "ದೊಡ್ಡ ಪ್ರಮಾಣದ" ಅಕ್ರಮಗಳನ್ನು ಸೂಚಿಸುವ ಕೆಲವು ದಾಖಲೆಗಳನ್ನು ಏಜೆನ್ಸಿ ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಮಾಜಿ ಕಾಂಗ್ರೆಸ್ ಸಂಸದ ಶರ್ಮಾ ಅವರ ಪಾತ್ರದ ಬಗ್ಗೆಯೂ ED ತನಿಖೆ ನಡೆಸಿದೆ. ಶರ್ಮಾ ಅವರಿಗೆ ಲಾಭ ಮಾಡಿಕೊಡಲು ಶಂಕಿತರು ಸುಮಾರು 15 ಸಂಸ್ಥೆಗಳು/ಕಂಪನಿಗಳ ಗುಂಪನ್ನು ರಚಿಸಿದ್ದಾರೆ ಮತ್ತು ಈ ಸಂಸ್ಥೆಗಳು ANSCB ಯಿಂದ 200 ಕೋಟಿ ರೂ.ಗಳಿಗೂ ಹೆಚ್ಚು ಸಾಲ ಸೌಲಭ್ಯಗಳನ್ನು ವಂಚನೆಯಿಂದ ಪಡೆದಿವೆ ಎಂದು ಅವರು ಆರೋಪಿಸಿದ್ದಾರೆ.
ಬ್ಯಾಂಕಿನ ನಿಗದಿತ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿ ವಿವಿಧ ಶೆಲ್ ಕಂಪನಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಸಂಗ್ರಹಿಸಿದ ದಾಖಲೆಗಳು ಸೂಚಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಈ ಹಣ ವರ್ಗಾವಣೆ ಪ್ರಕರಣವು ಅಂಡಮಾನ್ ನಿಕೋಬಾರ್ ಪೊಲೀಸರ ಅಪರಾಧ ಮತ್ತು ಆರ್ಥಿಕ ಅಪರಾಧಗಳ ವಿಭಾಗದ FIR ಬಳಿಕ ಬಯಲಿಗೆ ಬಂದಿತ್ತು.
Advertisement