'ವಾಕ್ ಸ್ವಾತಂತ್ರ್ಯ ಎಂದರೆ ಭಾವನೆಗಳಿಗೆ ಧಕ್ಕೆ ತರುವುದು ಎಂದಲ್ಲ': ಶರ್ಮಿಷ್ಠ ಪನೋಲಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ನಮ್ಮ ದೇಶದ ಒಂದು ವರ್ಗದ ಜನರ ಭಾವನೆಗಳಿಗೆ ನೋವುಂಟಾಗಿದೆ. ನಮಗೆ ವಾಕ್ ಸ್ವಾತಂತ್ರ್ಯವಿದೆ. ಆದರೆ ಅದರ ಅರ್ಥ ನೀವು ಇತರರ ಭಾವನೆಗಳಿಗೆ ನೋವುಂಟು ಮಾಡಬಹುದು ಎಂದಲ್ಲ.
Social media influencer Sharmishtha Panoli, who was arrested by the Kolkata Police
ಶರ್ಮಿಷ್ಠ ಪನೋಲಿ
Updated on

ಕೋಲ್ಕತ್ತಾ: ಆಪರೇಷನ್ ಸಿಂದೂರ್‌ಗೆ ಸಂಬಂಧಿಸಿದ ವಿಡಿಯೋದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮೇ 30 ರಂದು ಬಂಧನಕ್ಕೊಳಗಾಗಿರುವ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿಗೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನಿರಾಕರಿಸಿದೆ.

ಜೂನ್ 5 ರಂದು ಪನೋಲಿ ಬಂಧನಕ್ಕೆ ಸಂಬಂಧಿಸಿದಂತೆ ಪ್ರಕರಣದ ಡೈರಿಯನ್ನು ಹಾಜರುಪಡಿಸುವಂತೆ ನ್ಯಾಯಾಲಯ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ, ಆಗ ಮಧ್ಯಂತರ ಜಾಮೀನು ಅರ್ಜಿಯನ್ನು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

ಪನೋಲಿಯನ್ನು ಬಂಧಿಸಿದ ಗಾರ್ಡನ್ ರೀಚ್ ಪೊಲೀಸ್ ಠಾಣೆ ಪ್ರಕರಣದ ತನಿಖೆ ನಡೆಸಬಹದು. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಇತರ ಎಲ್ಲಾ ಎಫ್‌ಐಆರ್‌ಗಳ ವಿಚಾರಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗುವುದು ಎಂದು ನ್ಯಾಯಮೂರ್ತಿ ಪಾರ್ಥ ಸಾರಥಿ ಮುಖರ್ಜಿ ಅವರು ಹೇಳಿದ್ದಾರೆ.

ಶರ್ಮಿಷ್ಟ ಅವರ ಪೋಸ್ಟ್ ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಭಾರತವು ವೈವಿಧ್ಯಮಯ ದೇಶವಾಗಿರುವುದರಿಂದ, ಇತರರನ್ನು ನೋಯಿಸಲು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ನ್ಯಾಯಮೂರ್ತಿ ಪಾರ್ಥ ಸಾರಥಿ ಚಟರ್ಜಿ ಅವರು ಹೇಳಿದ್ದಾರೆ.

Social media influencer Sharmishtha Panoli, who was arrested by the Kolkata Police
ಸೋಷಿಯಲ್ ಮೀಡಿಯಾ ಪ್ರಭಾವಿ ಶರ್ಮಿಷ್ಠ ಪನೋಲಿ ವಿರುದ್ಧ ದೂರು ನೀಡಿದ ವ್ಯಕ್ತಿ ನಾಪತ್ತೆ!

"ನಮ್ಮ ದೇಶದ ಒಂದು ವರ್ಗದ ಜನರ ಭಾವನೆಗಳಿಗೆ ನೋವುಂಟಾಗಿದೆ. ನಮಗೆ ವಾಕ್ ಸ್ವಾತಂತ್ರ್ಯವಿದೆ. ಆದರೆ ಅದರ ಅರ್ಥ ನೀವು ಇತರರ ಭಾವನೆಗಳಿಗೆ ನೋವುಂಟು ಮಾಡಬಹುದು ಎಂದಲ್ಲ. ನಮ್ಮ ದೇಶವು ವೈವಿಧ್ಯತೆಯಿಂದ ತುಂಬಿದೆ. ನಮ್ಮ ದೇಶವು ವೈವಿಧ್ಯಮಯವಾಗಿದೆ, ವಿವಿಧ ಜಾತಿ, ಧರ್ಮ ಇತ್ಯಾದಿಗಳನ್ನು ಒಳಗೊಂಡಿದೆ... ಇದನ್ನು ಹೇಳುವ ಮೂಲಕ ನಾವು ಜಾಗರೂಕರಾಗಿರಬೇಕು" ಎಂದು ನ್ಯಾಯಾಧೀಶರು ಎಚ್ಚರಿಸಿದರು.

ಪ್ರವಾದಿ ಮುಹಮ್ಮದರನ್ನು ನಿಂದಿಸಿದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ವಿವಾದಾತ್ಮಕ ವಿಡಿಯೋಗೆ ಸಂಬಂಧಿಸಿದಂತೆ ವಿವಿದೆಡೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದೆಡೆ ಕ್ರೋಢೀಕರಿಸುವಂತೆ ಕೋರಿ ಪನೋಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚಟರ್ಜಿ ವಿಚಾರಣೆ ನಡೆಸಿದರು.

ಕೋಲ್ಕತ್ತಾದ ವಿಚಾರಣಾ ನ್ಯಾಯಾಲಯ ಮೇ 31ರಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದನ್ನೂ ಶರ್ಮಿಷ್ಠ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಮಧ್ಯಂತರ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com