
ನವದೆಹಲಿ: ಭಾರತವು ಸಿಂಧೂ ಜಲ ಒಪ್ಪಂದವನ್ನು (IWT)ಅಮಾನತ್ತಿನಲ್ಲಿಟ್ಟ ನಂತರ ಚೀನಾ ಬ್ರಹ್ಮಪುತ್ರ ನೀರಿನ ಹರಿವನ್ನು ನಿಲ್ಲಿಸಿದರೆ ಏನಾಗಬಹುದು ಎಂಬ ಹೊಸ ಬೆದರಿಕೆ ತಂತ್ರವನ್ನು ಪಾಕಿಸ್ತಾನ ಹೆಣೆಯುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.
ಚೀನಾ ಅಂತಹ ಯಾವುದೇ ಕ್ರಮವನ್ನು ಘೋಷಿಸಿಲ್ಲ. ಒಂದು ವೇಳೆ ಹಾಗಾದರೆ, ಇದು ವಾರ್ಷಿಕ ಅಸ್ಸಾಂ ಪ್ರವಾಹವನ್ನು ತಗ್ಗಿಸಲು ನೆರವಾಗುತ್ತದೆ. ಈಶಾನ್ಯ ಭಾರತದಲ್ಲಿ ಬೀಳುವ ಮಳೆಯಿಂದಾಗಿ ಬ್ರಹ್ಮಪುತ್ರದ ಹೆಚ್ಚಿನ ಹರಿವು ಉಂಟಾದ್ದರೆ, ಹಿಮದ ಕರಗುವಿಕೆ ಮತ್ತು ಸೀಮಿತ ಟಿಬೆಟಿಯನ್ ಪ್ರದೇಶದ ಮಳೆಯು ನದಿಯ ನೀರಿನ ಹರಿವಿನಲ್ಲಿ ಶೇ. 30 ರಿಂದ 35 ರಷ್ಟು ಮಾತ್ರ ಕೊಡುಗೆ ನೀಡುತ್ತದೆ ಎಂದು ಅವರು ಸ್ಪಷ್ಪಪಡಿಸಿದ್ದಾರೆ.
ಸಿಂಧೂ ನದಿ ನೀರು ನಿಲ್ಲಿಸಿದ ನಂತರ ಪಾಕ್ ಹೊಸ ಬೆದರಿಕೆ: ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ, ಭಾರತಕ್ಕೆ ಚೀನಾ ಬ್ರಹ್ಮಪುತ್ರ ನೀರನ್ನು ನಿಲ್ಲಿಸಿದರೆ ಏನಾಗಬಹುದು? ಎಂಬ ಹೊಸ ಬೆದರಿಕೆ ತಂತ್ರವನ್ನು ಪಾಕಿಸ್ತಾನ ಹೆಣೆಯುತ್ತಿದೆ. ಭಾರತ ಹಳೆಯದಾದ ಸಿಂಧೂ ಜಲ ಒಪ್ಪಂದದಿಂದ ದೂರ ಸರಿದ ನಂತರ, ಪಾಕಿಸ್ತಾನವು ಈಗ ಮತ್ತೊಂದು ಬೆದರಿಕೆ ಹಾಕುತ್ತಿದೆ. ಚೀನಾ ಭಾರತಕ್ಕೆ ಬ್ರಹ್ಮಪುತ್ರದ ನೀರನ್ನು ನಿಲ್ಲಿಸಿದರೆ ಏನು? ಮಾಡೋದು, ಭಯದಿಂದ ಅಲ್ಲ, ಆದರೆ ಸತ್ಯ ಮತ್ತು ರಾಷ್ಟ್ರೀಯ ಸ್ಪಷ್ಟತೆಯೊಂದಿಗೆ ಇದಕ್ಕೆ ತಕ್ಕ ಎದಿರೇಟು ನೀಡೋಣ ಎಂದಿದ್ದಾರೆ.
ಚೀನಾ 'ನೀರಿನ ಹರಿವನ್ನು ಕಡಿಮೆ ಮಾಡಿದರೂ (ಚೀನಾ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ) ಇದು ಅಸ್ಸಾಂನಲ್ಲಿ ವಾರ್ಷಿಕ ಪ್ರವಾಹವನ್ನು ತಗ್ಗಿಸಲು ಭಾರತಕ್ಕೆ ನೆರವಾಗುತ್ತದೆ. ಇದು ಪ್ರತಿ ವರ್ಷ ಲಕ್ಷಾಂತರ ಜನರ ಸ್ಥಳಾಂತರ ಮತ್ತು ಜೀವನೋಪಾಯವನ್ನು ನಾಶಪಡಿಸುತ್ತದೆ' ಎಂದು ಶರ್ಮಾ ಉಲ್ಲೇಖಿಸಿದ್ದಾರೆ.
ಈ ಮಧ್ಯೆ, ಸಿಂಧೂ ಜಲ ಒಪ್ಪಂದದಡಿ 74 ವರ್ಷಗಳ ಆದ್ಯತೆಯ ನೀರಿನ ಲಭ್ಯತೆಯನ್ನು ದುರ್ಬಳಕೆ ಮಾಡಿಕೊಂಡಿರುವ ಪಾಕಿಸ್ತಾನ, ಈಗ ಭಾರತವು ತನ್ನ ಸಾರ್ವಭೌಮ ಹಕ್ಕುಗಳನ್ನು ನ್ಯಾಯಯುತವಾಗಿ ಮರುಪಡೆದುಕೊಳ್ಳುವುದರಿಂದ ಭಯಭೀತವಾಗಿದೆ ಎಂದು ಅವರು ಹೇಳಿದ್ದಾರೆ.
ಚೀನಾದ ಕೊಡುಗೆ ಶೇ.30-35 ರಷ್ಟು ಮಾತ್ರ: ಬ್ರಹ್ಮಪುತ್ರ ಭಾರತದಲ್ಲಿ ಹರಿಯುವ, ತಗ್ಗದ ನದಿಯಾಗಿದೆ. ಬ್ರಹ್ಮಪುತ್ರದ ಒಟ್ಟು ಹರಿವಿನಲ್ಲಿ ಶೇ. 30-35 ರಷ್ಟು ಮಾತ್ರ ಚೀನಾ ಕೊಡುಗೆಯಾಗಿದೆ. ಇದು ಹೆಚ್ಚಾಗಿ ಹಿಮ ಕರಗುವಿಕೆ ಮತ್ತು ಸೀಮಿತ ಟಿಬೆಟಿಯನ್ ಮಳೆಯ ಮೂಲಕ ಬರುತ್ತದೆ. ಉಳಿದ ಶೇ. 60 ರಿಂದ 70 ರಷ್ಟು ಭಾರತದೊಳಗೆ ಅಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಧಾರಾಕಾರ ಮಾನ್ಸೂನ್ ಮಳೆಯಿಂದಾಗಿ ಉಂಟಾಗುತ್ತದೆ.
ಸುಬಾನ್ಸಿರಿ, ಲೋಹಿತ್, ಕಾಮೆಂಗ್, ಮಾನಸ್, ಧನಸಿರಿ, ಜಿಯಾ-ಭರಾಲಿ, ಕೊಪಿಲಿ ಮುಂತಾದ ಪ್ರಮುಖ ಉಪನದಿಗಳು ಸಹ ಇದಕ್ಕೆ ಕೊಡುಗೆ ನೀಡಿದರೆ, ಖಾಸಿ, ಗಾರೋ ಮತ್ತು ಜೈನ್ತಿಯಾ ಬೆಟ್ಟಗಳಿಂದ ಹೆಚ್ಚುವರಿ ಒಳಹರಿವು, ಕೃಷ್ಣೈ, ಡಿಗಾರು ಮತ್ತು ಕುಲ್ಸಿಯಂತಹ ನದಿಗಳ ಮೂಲಕವೂ ಬರುತ್ತದೆ ಎಂದು ಶರ್ಮಾ ಹೇಳಿದರು.
ಮಳೆ ಆಧಾರಿತ ಭಾರತೀಯ ನದಿ ವ್ಯವಸ್ಥೆ: ಭಾರತ- ಚೀನಾ ಗಡಿಯಲ್ಲಿ ಬ್ರಹ್ಮಪುತ್ರ ನದಿಯ ಹರಿವು 2,000-3,000 m/s ಇದ್ದರೆ ಮುಂಗಾರು ಅವಧಿಯಲ್ಲಿ ಗುವಾಹಟಿಯಂತರ ಅಸ್ಸಾಂನ ಪ್ರದೇಶಗಳಲ್ಲಿ 15,000-20,000 m/s ಇದೆ. ಇದು ಮಳೆ-ಆಧಾರಿತ ಭಾರತೀಯ ನದಿ ವ್ಯವಸ್ಥೆಯಾಗಿದೆ.
ಬ್ರಹ್ಮಪುತ್ರವು ಒಂದೇ ಮೂಲದಿಂದ ನಿಯಂತ್ರಿಸಲ್ಪಡುವುದಿಲ್ಲ - ಇದು ನಮ್ಮ ಭೌಗೋಳಿಕತೆ, ನಮ್ಮ ಮಾನ್ಸೂನ್ ಮತ್ತು ನಮ್ಮ ನಾಗರಿಕತೆಯ ಸ್ಥಿತಿಸ್ಥಾಪಕತ್ವದ ಶಕ್ತಿಯನ್ನು ಹೊಂದಿದೆ ಶರ್ಮಾ ಹೇಳುವ ಮೂಲಕ ಪಾಕಿಸ್ತಾನದ ಹೊಸ ಬೆದರಿಕೆ ತಂತ್ರಕ್ಕೆ ತಿರುಗೇಟು ನೀಡಿದ್ದಾರೆ.
Advertisement