
ನವದೆಹಲಿ: ಜೂನ್ 5, ವಿಶ್ವ ಪರಿಸರ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ತಮ್ಮ 7 ಲೋಕ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಸಿಂದೂರ ಸಸಿಯನ್ನು ನೆಟ್ಟರು. 1971 ರ ಯುದ್ಧದ ಸಮಯದಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಮಹಿಳೆಯರ ಗುಂಪೊಂದು ಅವರಿಗೆ ಈ ಸಸಿಯನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿದೆ.
ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದ್ದಾಗ, 1971 ರ ಯುದ್ಧದಲ್ಲಿ ಧೈರ್ಯ ಮತ್ತು ತ್ಯಾಗಕ್ಕೆ ಮಾದರಿಯಾಗಿದ್ದ ಕಚ್‌ನ ಧೈರ್ಯಶಾಲಿ ಮಹಿಳೆಯರು ನನಗೆ ಸಿಂಧೂರ ಸಸಿಯನ್ನು ಉಡುಗೊರೆಯಾಗಿ ನೀಡಿದ್ದರು.
ಇಂದು ವಿಶ್ವ ಪರಿಸರ ದಿನದಂದು, ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಗಿಡವನ್ನು ನೆಟ್ಟರು. ಈ ಮರವು ಯಾವಾಗಲೂ ಭಾರತದ ಮಹಿಳಾ ಶಕ್ತಿಯ ಅದಮ್ಯ ಚೈತನ್ಯ ಮತ್ತು ಸ್ಪೂರ್ತಿದಾಯಕ ಶೌರ್ಯದ ಜೀವಂತ ಸಂಕೇತವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಮೇ 26 ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಗುಜರಾತ್‌ಗೆ ಭೇಟಿ ನೀಡಿದ್ದರು, ಅಲ್ಲಿ ಅವರು ದಾಹೋದ್, ಭುಜ್ ಮತ್ತು ಗಾಂಧಿನಗರದಾದ್ಯಂತ 82,950 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಸರಣಿಯನ್ನು ಉದ್ಘಾಟಿಸಿ ಅಡಿಪಾಯ ಹಾಕಿದ್ದರು.
Advertisement