
ಇಂದು ಜಮ್ಮು-ಕಾಶ್ಮೀರದ ಲಕ್ಷಾಂತರ ಜನರ ಕನಸು ನನಸಾಗಿದೆ. ಒಳ್ಳೆಯ ಕೆಲಸಗಳು ನನಗೆ ಪೂರ್ಣಗೊಳಿಸಲು ಮಾತ್ರ ಉಳಿದಿದೆ. ನಮ್ಮ ಅಧಿಕಾರಾವಧಿಯಲ್ಲಿ ಈ ಯೋಜನೆ ವೇಗವನ್ನು ಪಡೆದುಕೊಂಡಿದ್ದು ನಮ್ಮ ಸರ್ಕಾರದ ಅದೃಷ್ಟ, ಅದನ್ನು ಪೂರ್ಣಗೊಳಿಸಿದ್ದೇವೆ.
ಇದು ಪೂರ್ಣಗೊಳಿಸಲು ಸವಾಲಿನ ಯೋಜನೆಯಾಗಿತ್ತು, ನಮ್ಮ ಸರ್ಕಾರ ಯಾವಾಗಲೂ ಸವಾಲನ್ನು ಮಾರ್ಗವಾಗಿ ಬದಲಾಯಿಸುತ್ತದೆ. ಜಮ್ಮು- ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಎಲ್ಲಾ ಹವಾಮಾನ ಯೋಜನೆಗಳು ಇದಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಂಟು ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
ನಂತರ ಪ್ರಧಾನಿ ತ್ರಿವರ್ಣ ಧ್ವಜವನ್ನು ಹಿಡಿದು ಸೇತುವೆಯ ಮೇಲೆ ನಡೆದರು. ಚೆನಾಬ್ ಸೇತುವೆಯ ಉದ್ಘಾಟನೆ ನಂತರ ಮೋದಿ ಅವರು ಅಂಜಿ ನದಿಯ ಮೇಲೆ ಭಾರತದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯನ್ನು ಉದ್ಘಾಟಿಸಿದರು.
ಉದ್ಘಾಟನೆಗೆ ಮೊದಲು, ಮೋದಿ ರೈಲು ಎಂಜಿನ್ ಕೋಚ್‌ನಲ್ಲಿ ಪ್ರಯಾಣಿಸಿದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಯ ನಂತರ ಕತ್ರಾದಲ್ಲಿ ನಡೆದ ರ್ಯಾಲಿಯಲ್ಲಿ, ಬೃಹತ್ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆಯು ಜಮ್ಮು- ಕಾಶ್ಮೀರದ ಅಭಿವೃದ್ಧಿ ಪ್ರಯಾಣದಲ್ಲಿ ಒಂದು ಮಹತ್ವದ ತಿರುವು ಎಂದು ಮೋದಿ ಹೇಳಿದರು. ಅತ್ಯಾಧುನಿಕ ಚೆನಾಬ್ ಸೇತುವೆ ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಂಬ ಮಾತು ರೈಲು ಸಂಪರ್ಕ ಜಾಲದಲ್ಲಿ ವಾಸ್ತವವಾಗಿದೆ ಎಂದರು.
ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗವು ಹೊಸ, ಸಬಲೀಕರಣಗೊಂಡ ಜಮ್ಮು-ಕಾಶ್ಮೀರದ ಸಂಕೇತವಾಗಿದೆ. ಭಾರತದ ಬೆಳೆಯುತ್ತಿರುವ ಶಕ್ತಿಯ ಪ್ರತಿಧ್ವನಿಸುವ ಘೋಷಣೆಯಾಗಿದೆ. ಚೆನಾಬ್ ಮತ್ತು ಅಂಜಿ ಸೇತುವೆಗಳು ಜಮ್ಮು-ಕಾಶ್ಮೀರದ ಸಮೃದ್ಧಿಯ ದ್ವಾರಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
Advertisement