ಮೋದಿ ಎಷ್ಟು ಭರವಸೆ ಈಡೇರಿಸಿದ್ದಾರೆ? ಇಷ್ಟೊಂದು ಸುಳ್ಳು ಹೇಳುವ, ಯುವಕರನ್ನು ವಂಚಿಸುವ ಪ್ರಧಾನಿಯನ್ನು ನೋಡೆ ಇಲ್ಲ! Video

ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ನಮ್ಮ ಸರ್ಕಾರ ಮಾಡಿದ ಉತ್ತಮ ಕೆಲಸಗಳನ್ನು ಶ್ಲಾಘಿಸುವ ಬದಲು, ಪ್ರಸ್ತುತ ಎನ್‌ಡಿಎ ಸರ್ಕಾರ ನಮ್ಮನ್ನು ದೂಷಿಸಿತು.
PM Modi, Mallikarjun Kharge
ಪ್ರಧಾನಿ ಮೋದಿ - ಖರ್ಗೆ
Updated on

ಕಲಬುರಗಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 11 ವರ್ಷಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ಹೇಳಲಿ ಎಂದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ವೇಳೆ ಎಷ್ಟು ಭರವಸೆಗಳನ್ನು ನೀಡಿದ್ದಾರೆ ಮತ್ತು ಅವುಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ ಎಂಬದನ್ನು ದೇಶದ ಜನತೆಗೆ ತಿಳಿಸಬೇಕು ಎಂದರು.

ನರೇಂದ್ರ ಮೋದಿ ಒಬ್ಬ ಸುಳ್ಳುಗಾರ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಂಬಿಕೆಯಿಲ್ಲದ ವ್ಯಕ್ತಿ ಎಂದು ಟೀಕಿಸಿದ ಖರ್ಗೆ, ಇಷ್ಟೊಂದು ಸುಳ್ಳು ಹೇಳುವ ಮತ್ತು ಜನರನ್ನು ತನ್ನ "ಬಲೆಗೆ ಬೀಳಿಸುವ" ಹಾಗೂ ಯುವಕರನ್ನು ವಂಚಿಸುವ ಪ್ರಧಾನಿಯನ್ನು ನಾನು ಎಂದಿಗೂ ನೋಡಿಲ್ಲ ಎಂದರು.

ಯುಪಿಎ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ವಿರೋಧ ಪಕ್ಷಗಳ ನಾಯಕರಿಗೆ ಲೋಕಸಭೆಯಲ್ಲಿ ಉಪಸಭಾಪತಿ ಹುದ್ದೆಯನ್ನು ನೀಡಲು ಅವಕಾಶ ನೀಡುತ್ತಿತ್ತು. ಆದರೆ ಪ್ರಸ್ತುತ ಎನ್‌ಡಿಎ ಸರ್ಕಾರವು ಕಳೆದ 11 ವರ್ಷಗಳಿಂದ ಲೋಕಸಭೆಯಲ್ಲಿ ಉಪಸಭಾಪತಿ ಹುದ್ದೆಯನ್ನು ಖಾಲಿ ಇರಿಸಿದೆ ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಆ ಹುದ್ದೆಗೆ ಅವಕಾಶ ನೀಡುವ ಹಿಂದಿನ ಸ್ಪೀಕರ್ ಆದೇಶವನ್ನು ಮುರಿದಿದೆ ಎಂದರು.

ವಾಜಪೇಯಿ ಸರ್ಕಾರ ಮಾಡಿದ ಕೆಲಸಗಳನ್ನು ಯುಪಿಎ ಹಲವಾರು ಬಾರಿ ಶ್ಲಾಘಿಸಿತು, ಆದರೆ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ನಮ್ಮ ಸರ್ಕಾರ ಮಾಡಿದ ಉತ್ತಮ ಕೆಲಸಗಳನ್ನು ಶ್ಲಾಘಿಸುವ ಬದಲು, ಪ್ರಸ್ತುತ ಎನ್‌ಡಿಎ ಸರ್ಕಾರ ನಮ್ಮನ್ನು ದೂಷಿಸಿತು ಮತ್ತು ನಮ್ಮ ಸರ್ಕಾರವು ಹಿಂದೆ ಮಾಡಿದ ಅನೇಕ ಕೆಲಸಗಳನ್ನು ನಿಲ್ಲಿಸಿದೆ ಎಂದು ಖರ್ಗೆ ಆರೋಪಿಸಿದರು.

"ಮೋದಿ ಆಡಳಿತದ 11 ವರ್ಷಗಳಲ್ಲಿ 33 ತಪ್ಪುಗಳು ನಡೆದಿವೆ. ನಿಮಗೆ ತಿಳಿದಿದೆ ಮತ್ತು ನಾನು ಸಂಸತ್ತಿನಲ್ಲಿಯೂ ಇದನ್ನು ಹೇಳುತ್ತಿದ್ದೇನೆ - ಇಷ್ಟೊಂದು ಸುಳ್ಳು ಹೇಳುವ, ಇಷ್ಟೊಂದು ತಪ್ಪುಗಳನ್ನು ಮಾಡುವ, ಜನರನ್ನು ವಂಚಿಸುವ, ಯುವಕರನ್ನು ವಂಚಿಸುವ, ಬಡವರನ್ನು ವಂಚಿಸಿ ಮತಗಳನ್ನು ಪಡೆಯುವ ಪ್ರಧಾನಿಯನ್ನು ಎಂದಿಗೂ ನೋಡಿಲ್ಲ. ನಾನು 55 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ ಮತ್ತು 65 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಆದರೆ ಇಂತಹ ಪ್ರಧಾನಿಯನ್ನು ಯಾವತ್ತೂ ನೋಡಿಲ್ಲ" ಎಂದು ಖರ್ಗೆ ಹೇಳಿದರು.

ಪ್ರಧಾನಿಯವರು ಎಲ್ಲದಕ್ಕೂ ಸುಳ್ಳು ಹೇಳುತ್ತಾರೆ ಮತ್ತು ಅವರು ಹೇಳುವ ಯಾವುದನ್ನೂ ಜಾರಿಗೆ ತರುವುದಿಲ್ಲ ಮತ್ತು ಪ್ರಶ್ನಿಸಿದಾಗ ಅವರ ಬಳಿ ಅದಕ್ಕೆ ಯಾವುದೇ ಉತ್ತರ ಇರುವುದಿಲ್ಲ. "ಅದು ನೋಟು ರದ್ದತಿಯಾಗಿರಲಿ, ಉದ್ಯೋಗ ಸೃಷ್ಟಿಯಾಗಿರಲಿ ಅಥವಾ MSP ಆಗಿರಲಿ, ಇಂತಹ ಹಲವು ವಿಷಯಗಳಿವೆ. ಅವರು ಜನರಿಗೆ ಸುಳ್ಳು ಹೇಳಿದ್ದೇನೆ ಮತ್ತು ತಪ್ಪು ಮಾಡಿದ್ದೇನೆ ಎಂದು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಅದಕ್ಕಾಗಿ ಎಂದಿಗೂ ಕ್ಷಮೆಯಾಚಿಸಿಲ್ಲ. ಅವರು ಒಂದರ ನಂತರ ಒಂದರಂತೆ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ" ಎಂದು ಖರ್ಗೆ ವಾಗ್ದಾಳಿ ನಡೆಸಿದರು.

PM Modi, Mallikarjun Kharge
ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com