
ಗಾಂಧಿನಗರ: ಅಹಮದಾಬಾದ್ ವಿಮಾನ ಪತನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತ ಪಟ್ಟಿದ್ದಾರೆ. ಅವರು ಪತ್ನಿ ಅಂಜಲಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್ಗೆ ತೆರಳುತ್ತಿದ್ದರು.
ವಿಜಯ್ ರೂಪಾನಿ ಅವರ ಸಾವಿನ ದಿನಾಂಕದ ಬಗ್ಗೆ ಇದೀಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಜೀವನದುದ್ದಕ್ಕೂ ಅದೃಷ್ಟ ಎಂದೇ ಅವರು ಭಾವಿಸಿಕೊಂಡು ಬಂದಿದ್ದ ಆ ಸಂಖ್ಯೆಯೇ ಅವರ ಸಾವಿನ ದಿನಾಂಕವಾಗಿ ಮಾರ್ಪಟ್ಟಿದೆ. ವಿಜಯ್ ರೂಪಾನಿಗೆ 1206 ಎಂಬುದು ಕೇವಲ ಒಂದು ಸಂಖ್ಯೆಯಾಗಿರಲಿಲ್ಲ. ಬದಲಿಗೆ, ನಂಬಿಕೆಯ ಸಂಕೇತವಾಗಿತ್ತು. ಅದನ್ನು ಅವರು ಅದೃಷ್ಟವೆಂದೇ ಭಾವಿಸಿದ್ದರು. ವಿಜಯ್ ರೂಪಾನಿ ಈ ಸಂಖ್ಯೆಯನ್ನು ಎಷ್ಟರ ಮಟ್ಟಿಗೆ ಅದೃಷ್ಟವೆಂದು ಪರಿಗಣಿಸಿದ್ದರು.
ಮಾಜಿ ಸಿಎಂ ವಿಜಯ್ ರೂಪಾನಿಯ ಲಕ್ಕಿ ನಂಬರ್ ಸಾವಿನಲ್ಲೂ ಜೊತೆಯಾಗಿದೆ. 1206 ಮಾಜಿ ಸಿಎಂ ವಿಜಯ್ ರೂಪಾನಿಯವರ ಲಕ್ಕಿ ನಂಬರ್.. ಅವರ ಎಲ್ಲ ಕಾರುಗಳ ರಿಜಿಸ್ಟರ್ ನಂಬರ್ 1206.. ರಾಜಕೀಯ ಆರಂಭಿಕ ದಿನಗಳಲ್ಲಿ ಅವರು ಬಳಸಿದ್ದ ಸ್ಕೂಟರ್ನ ರಿಜಿಸ್ಟರ್ ನಂಬರ್ ಕೂಡ 1206.. ಈ ಸಂಖ್ಯೆ ವಿಜಯ್ ರೂಪಾನಿಗೆ ರಾಜಕೀಯವಾಗಿಯೂ ಯಶಸ್ಸು ತಂದು ಕೊಟ್ಟಿದೆ. ನಿನ್ನೆ ಅವರು ಲಂಡನ್ಗೆ ತೆರಳಲು ಏರ್ಪೋರ್ಟ್ನಲ್ಲಿ ಬೋರ್ಡಿಂಗ್ ಆದ ಸಮಯ.. 12 ಗಂಟೆ 10 ನಿಮಿಷ.. ಅವರ ಸೀಟ್ ನಂಬರ್ ಕೂಡ 12 ಆಗಿತ್ತು. ಇದೀಗ ಕೊನೆಯ ಪ್ರಯಾಣದ ದಿನಾಂಕ ಜೂನ್ 12, ಅಂದರೆ 12-06.. ಹೀಗೆ ಲಕ್ಕಿ ನಂಬರ್ ದಿನವೇ ವಿಜಯ್ ರೂಪಾನಿ ಬದುಕು ಅಂತ್ಯವಾಗಿದ್ದು ನಿಜಕ್ಕೂ ಅಚ್ಚರಿ..
ಇದೇ ವಿಮಾನದ 11ಎ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಬದುಕುಳಿದಿದ್ದಾನೆ. ಈ ವಿಮಾನದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಈತ. ಇತ್ತ ವಿಜಯ್ ರೂಪಾನಿ ಸೀಟು ಸಂಖ್ಯೆ 12ರ ಪ್ರಯಾಣ 30 ಸೆಕೆಂಡ್ ಕೂಡ ಪೂರ್ಣಗೊಳಿಸಲಿಲ್ಲ. ಅದರೊಳಗೆ ವಿಮಾನ ದುರಂತಕ್ಕೀಡಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ರೂಪಾನಿ ಅವರ ಸ್ಕೂಟರ್ ಮತ್ತು ಮೊದಲ ಕಾರು 1206 ನೋಂದಣಿ ಸಂಖ್ಯೆಯನ್ನು ಹೊಂದಿವೆ. ಈ ಕಾರು ಮತ್ತು ಸ್ಕೂಟರ್ ಈಗಲೂ ಅವರ ಮನೆಯ ಪಾರ್ಕಿಂಗ್ ಜಾಗದಲ್ಲಿವೆ.
Advertisement