Air India Plane Crash: 787 ಡ್ರೀಮ್ ಲೈನರ್ ವಿಮಾನಗಳ ತಾಂತ್ರಿಕ ತಪಾಸಣೆ ಹೆಚ್ಚಿಸುವಂತೆ ಏರ್ ಇಂಡಿಯಾಗೆ DGCA ಆದೇಶ!

ಜನವರಿ 15 ರಿಂದ ಜಾರಿಗೆ ಬರುವಂತೆ ಬೋಯಿಂಗ್ 787-8 ಮತ್ತು 787-9 ವಿಮಾನಗಳ ಸುರಕ್ಷತೆ ತಪಾಸಣೆ ನಡೆಸುವಂತೆ ಏರ್ ಇಂಡಿಯಾಕ್ಕೆ ಡಿಜಿಸಿಎ ಪತ್ರದಲ್ಲಿ ಸೂಚಿಸಿದೆ.
Remains of the Air India plane
ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಸ್ಥಳ
Updated on

ನವದೆಹಲಿ: ಅಹಮದಾಬಾದ್ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 241 ಮಂದಿ ಪ್ರಯಾಣಿಕರು ಸೇರಿದಂತೆ 265 ಮಂದಿ ಸಾವನ್ನಪ್ಪಿದ್ದ ದುರಂತದ ನಂತರ ವಿಮಾನಯಾನ ಮೇಲ್ವಿಚಾರಣಾ ಸಂಸ್ಥೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನಗಳ ಸುರಕ್ಷತಾ ತಪಾಸಣೆ ಹೆಚ್ಚಿಸುವಂತೆ ಏರ್ ಇಂಡಿಯಾಗೆ ಶುಕ್ರವಾರ ನಿರ್ದೇಶಿಸಿದೆ.

ಜೂನ್ 15 ರಿಂದ ಜಾರಿಗೆ ಬರುವಂತೆ ಬೋಯಿಂಗ್ 787-8 ಮತ್ತು 787-9 ವಿಮಾನಗಳ ಸುರಕ್ಷತೆ ತಪಾಸಣೆ ನಡೆಸುವಂತೆ ಏರ್ ಇಂಡಿಯಾಕ್ಕೆ ಡಿಜಿಸಿಎ ಪತ್ರದಲ್ಲಿ ಸೂಚಿಸಿದೆ.

ಪ್ರಾದೇಶಿಕ ಡಿಜಿಸಿಎ ಕಚೇರಿಗಳ ಸಮನ್ವಯದೊಂದಿಗೆ Genx ಎಂಜಿನ್ ಗಳನ್ನು ಹೊಂದಿರುವ ಬೋಯಿಂಗ್ 787-8 ಮತ್ತು 787-9 ವಿಮಾನಗಳಲ್ಲಿ ಹೆಚ್ಚುವರಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಡಿಜಿಸಿಎ ಏರ್ ಇಂಡಿಯಾಕ್ಕೆ ನಿರ್ದೇಶನ ನೀಡಿದೆ.

ಇದರಲ್ಲಿ ಇಂಧನ ನಿಯತಾಂಕ ಮೇಲ್ವಿಚಾರಣೆ ಮತ್ತು ಸಂಬಂಧಿತ ವ್ಯವಸ್ಥೆಯ ಪರಿಶೀಲನೆಗಳು ಸೇರಿವೆ. ಕ್ಯಾಬಿನ್ ಏರ್ ಕಂಪ್ರೆಸರ್ ಮತ್ತು ಸಂಬಂಧಿತ ವ್ಯವಸ್ಥೆಗಳ ಪರಿಶೀಲನೆ, ಎಲೆಕ್ಟ್ರಾನಿಕ್ ಎಂಜಿನ್ ನಿಯಂತ್ರಣ ವ್ಯವಸ್ಥೆಯ ಪರೀಕ್ಷೆ, ಎಂಜಿನ್ ಇಂಧನ ಚಾಲಿತ ಆಕ್ಟಿವೇಟರ್- ಕಾರ್ಯಾಚರಣಾ ಪರೀಕ್ಷೆ ಮತ್ತು ತೈಲ ವ್ಯವಸ್ಥೆಯ ಪರಿಶೀಲನೆಗೂ ಸಹ ಆದೇಶಿಸಲಾಗಿದೆ.

ಇದಲ್ಲದೆ, ಹೈಡ್ರಾಲಿಕ್ ವ್ಯವಸ್ಥೆಯ ಸೇವಾ ಸಾಮರ್ಥ್ಯ ಪರಿಶೀಲನೆ ಮತ್ತು ಟೇಕ್ ಆಫ್ ನಿಯತಾಂಕಗಳ ಪರಿಶೀಲನೆ ಕೈಗೊಳ್ಳಲು ಡಿಜಿಸಿಎ ನಿರ್ದೇಶಿಸಿದೆ.

Remains of the Air India plane
Air India plane crash: ಹಾಸ್ಟೆಲ್ ಬಾಲ್ಕನಿಯಿಂದ ಜಿಗಿದು ಬದುಕುಳಿದ ವಿದ್ಯಾರ್ಥಿ; ತಾಯಿ, ಮಗಳಿಗಾಗಿ ಹುಡುಕಾಡುತ್ತಿರುವ ವ್ಯಕ್ತಿ, ಹೇಳಿದ್ದೇನು?

ಮುಂದಿನ ಸೂಚನೆ ಬರುವವರೆಗೆ ತಪಾಸಣೆಯಲ್ಲಿ ವಿಮಾನ ನಿಯಂತ್ರಣ ಸುರಕ್ಷತೆಯನ್ನು ಪರಿಚಯಿಸಬೇಕು ಮತ್ತು ಎರಡು ವಾರಗಳಲ್ಲಿ ವಿದ್ಯುತ್ ಖಾತ್ರಿ ಪರಿಶೀಲನೆ ನಡೆಸಬೇಕು. ಬೋಯಿಂಗ್ 787-8/9 ವಿಮಾನದಲ್ಲಿ ಕಳೆದ 15 ದಿನಗಳಲ್ಲಿ ಪುನರಾವರ್ತಿತ ಸಮಸ್ಯೆಗಳ ಪರಿಶೀಲನೆಯ ಆಧಾರದ ಮೇಲೆ ನಿರ್ವಹಣಾ ಕ್ರಮವನ್ನು ಬೇಗನೆ ಕೈಗೊಳ್ಳುವಂತೆ ಡಿಜಿಸಿಎ ಪತ್ರದಲ್ಲಿ ತಿಳಿಸಿದೆ.

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯಲ್ಲಿ 26 ಬೋಯಿಂಗ್ 787 -8 ವಿಮಾನಗಳಿವೆ. ಇವುಗಳನ್ನು ಯುಕೆ, ಉತ್ತರ ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ಹೆಚ್ಚಿನ ದೂರದ ಅಂತಾರಾಷ್ಟ್ರೀಯ ಮಾರ್ಗಗಳಿಗೆ ಬಳಸಲಾಗುತ್ತದೆ.

Remains of the Air India plane
ವಿಮಾನದ ಕ್ಯಾಪ್ಟನ್ ಬಹಳ ಅನುಭವಿ, ಸುರಕ್ಷತಾ ಪರಿಶೀಲನೆಗಳನ್ನು ಮಾಡಿದ್ದರು: AI ವಿಮಾನ ದುರಂತದ ಬಗ್ಗೆ ಪೈಲಟ್‌ಗಳ ಸಂಘ ಹೇಳಿಕೆ

ಅಹಮದಾಬಾದ್ ನಿಂದ ಲಂಡನ್ ನ ಗ್ಯಾಟ್ವಿಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವು ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಕೂಡಲೇ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com